ಮಲೆನಾಡಿನಲ್ಲಿ ಒಂದು ಸುಂದರ ಪ್ರೇಮಕಥೆ-****
ಅಪ್ಪಟ ಮಲೆನಾಡ ಶೈಲಿಯಲ್ಲಿ ಸುಂದರ ಪ್ರೇಮಕಥೆಯನ್ನು ‘ಕರೆಬೇಟೆ’ ಸಿನಿಮಾದಲ್ಲಿ ತೋರಿಸಿದ್ದಾರೆ. ಮತ್ತೋಂದು ಕಡೆ ಕರಾವಳಿ ಭಾಗದಲ್ಲಿ ಮೀನುಶಿಕಾರಿ ಬದುಕಿನ ಭಾಗವಾಗಿರುತ್ತದೆ. ಇದಕ್ಕೆ ಪೂರಕವಾಗುವಂತೆ ಗ್ರಾಮೀಣ ಕ್ರೀಡೆಗಳು, ಜಾನಪದ ಸಂಸ್ಕ್ರತಿ, ಆಚಾರ ವಿಚಾರ, ಆಡಂಬರರಹಿತ ಜೀವನ. ಶ್ರೀಮಂತ, ಬಡವ ತಾರತಮ್ಯದ ನಡುವೆ ಜಾತಿ ಎಂಬ ಅಡ್ಡಗೋಡೆ. ಕಥಾನಾಯಕ ಅಮ್ಮನೊಂದಿಗೆ ಮರಕಡಿಯುವ ಕೆಲಸ ಮಾಡುತ್ತಿರುತ್ತಾನೆ. ನಂತರ ಅನೂಕೂಲಸ್ಥರ ಹುಡುಗಿಯ ಪ್ರೇಮಕ್ಕೆ ಸಿಲುಕುತ್ತಾನೆ. ಅವಳನ್ನು ಉಳಿಸಿಕೊಳ್ಳಲು ಎಲ್ಲರೊಂದಿಗೆ ಹೋರಾಡುತ್ತಾನೆ. ಮುಂದೆ ಈತನ ಶ್ರಮಕ್ಕೆ ಫಲ ಸಿಗುತ್ತಾದಾ. ಅಲ್ಲದೆ ಕ್ಲೈಮಾಕ್ಸ್‌ದಲ್ಲಿ ಯಾರು ಊಹಿಸದಂತ ರೋಚಕ ತಿರುವುಗಳು. ಎಲ್ಲವನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು.
ರಂಗಭೂಮಿ ಹಿನ್ನಲೆಯಿಂದ ಬಂದವರಾದ ರಾಜ್‌ಗುರು ನಿರ್ದೇಶನದಲ್ಲಿ ಪಾಸ್ ಆಗಿದ್ದಾರೆ. ನಾಯಕ ಗೌರಿಶಂಕರ್ ಹಿಂದಿನ ಚಿತ್ರಕ್ಕಿಂತ ಸಾಕಷ್ಟು ಸುಧಾರಿಸಿದ್ದಾರೆ. ತಾವೇ ಸಂಭಾಷಣೆ ಬರೆದುದರಿಂದ ಯಾವ ಪಾತ್ರವನ್ನು ಉದ್ರೇಕಗೊಳಿಸದೆ, ನೋಡುಗರ ಮನಸ್ಸಿಗೆ ಹತ್ತಿರವಾಗುವಂತೆ ನೋಡಿಕೊಂಡಿದ್ದಾರೆ. ನಾಯಕಿ ಬಿಂದು ಶಕ್ತಿಮೀರಿ ಅಭಿನಯಿಸಿರುವುದು ಕಂಡುಬಂದಿದೆ. ಉಳಿದಂತೆ ಹರಿಣಿ, ಕಾಮಿಡಿ ಕಿಲಾಡಿ ರಾಕೇಶ್‌ಪೂಜಾರಿ, ಕಿಲ್ಲರ್‌ಮಂಜು, ಗೋಪಾಲ್‌ದೇಶಪಾಂಡೆ, ಸಂಪತ್‌ಮೈತ್ರೇಯ ಎಲ್ಲರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಶೀರ್ಷಿಕೆ ಚಿತ್ರಕ್ಕೆ ಷರಾ ಬರೆದಂತಿದೆ. ಶಿವಮೊಗ್ಗ, ಸೊರಬ ಸುಂದರ ತಾಣಗಳು ಕಣ್ಣಿಗೆ ತಂಪು ಕೊಡುತ್ತದೆ.
****