Somu Sound Engineer.Reviews

Friday, March 15, 2024

62

ದುರಹಂಕಾರ ಹುಡುಗನ ಬದುಕು ಮತ್ತು ಬವಣೆ-****

        ಹೊಸ ಪ್ರತಿಭೆಗಳೇ ಸೇರಿಕೊಂಡು ಸಿದ್ದಪಡಿಸಿರುವ ವಿನೂತನ ಶೀರ್ಷಿಕೆ ‘ಸೋಮು ಸೌಂಡ್ ಇಂಜಿನಿಯರ್’ ಚಿತ್ರವು ನೋಡುಗರು ಇಷ್ಟಪಡುವಂತಹ ಅಂಶಗಳು ಇರಲಿದೆ. ದುನಿಯಾ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಮೊದಲ ಪ್ರಯತ್ನದಲ್ಲಿಯೇ ಗೆಲುವನ್ನು ಕಂಡಿದ್ದಾರೆ. ಉತ್ತರ ಕರ್ನಾಟಕ ಕಥೆ ಹಾಗೂ ಭಾಷೆಯನ್ನು ಬಳಸಿರುವುದು ಕಂಡುಬರುತ್ತದೆ. ತಾನು ನಡೆದದ್ದೇ ದಾರಿ ಅಂತ ದುರಂಹಕಾರದಲ್ಲಿ ಮರೆಯುತ್ತಿದ್ದ ಹುಡುಗ, ಮುಂದೆ ಜೀವನದಲ್ಲಿ ಸಂಭವಿಸಿದ ಒಂದು ಘಟನೆಯಿಂದ ಆತನ ಬದುಕು ಹೇಗೆಲ್ಲಾ ತಿರುವು ಪಡೆದುಕೊಳ್ಳುತ್ತದೆ. ಜತೆಗೆ ಲವ್, ಸೆಂಟಿಮೆಂಟ್ ಬೆರೆಸಿ ರುಚಿಯಾದ ಸನ್ನಿವೇಶಗಳನ್ನು ಸೃಷ್ಟಿಸಿರುವುದದರಿಂದ ಎಲ್ಲಿಯೂ ಬೇಸರ ತರಿಸುವುದಿಲ್ಲ. ನಿರ್ದೇಶಕರು ಅದೇ ಭಾಗದವರಾಗಿದ್ದರಿಂದ ಅಲ್ಲಿನ ನೇಟಿವಿಟಿಗೆ ತಕ್ಕಂತೆ ಸ್ಟೋರಿ ಬರೆದಿದ್ದಾರೆ.

      ಸಲಗದಲ್ಲಿ ಕೆಂಡ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಶ್ರೇಷ್ಟ ನಾಯಕನಾಗಿ ಟೈಟಲ್‌ಗೆ ಹೊಂದುವಂತ ಪಾತ್ರ ನಿಭಾಯಿಸಿದ್ದಾರೆ. ಶ್ರುತಿಪಾಟೀಲ್ ನಾಯಕಿಯಾಗಿ ಚೆಂದ ಕಾಣಿಸುತ್ತಾರೆ. ಉಳಿದಂತೆ ಜಹಾಂಗೀರ್, ಅಪೂರ್ವ, ಯಶ್‌ಶೆಟ್ಟಿ  ನಟಿಸಿದ್ದಾರೆ. ಚರಣ್‌ರಾಜ್ ಸಂಗೀತ ಪ್ಲಸ್ ಪಾಯಿಂಟ್. ಮಾಸ್ತಿ ಸಂಭಾಷಣೆ ಹೈಲೈಟ್ ಆಗಿದೆ. ಸೋಮುಗೆ ಸಾಥ್ ನೀಡಲು ನೀವೆಲ್ಲರೂ ಒಮ್ಮೆ ಚಿತ್ರ ನೋಡಲು ಅಡ್ಡಿಯೇನಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,