ಹಿಂದು ಮುಸ್ಲಿಂ ಲವ್ಸ್ಟೋರಿ-****
‘ಮೆಹಬೂಬ’ ಚಿತ್ರದ ಹೆಸರೇ ಹೇಳುವಂತೆ ಹಿಂದೂ ಮುಸ್ಲಿಂ ಪ್ರೇಮಕಥೆಯನ್ನು ಹೇಳಲಾಗಿದೆ. ಕಾರ್ತಿಕ್ ಮಾಜಿ ಶಾಸಕನ ಮಗ. ನಸ್ರಿಯಾಬಾನು ಕೃಷಿಯಲ್ಲಿ ಪಿಹೆಚ್‌ಡಿ ಮಾಡುತ್ತಿರುವ ವಿದ್ಯಾರ್ಥಿ. ಈಕೆ ಆತನಿಗಿಂತ ಎರಡು ವರ್ಷ ದೊಡ್ಡವಳು. ಇಬ್ಬರ ಪರಿಚಯ ವಿಶೇಷ ಸಂದರ್ಭದಲ್ಲಿ ಆಗುತ್ತದೆ. ಮತ್ತೋಂದು ಘಟನೆಯಲ್ಲಿ ಪ್ರೀತಿ ಹುಟ್ಟುತ್ತದೆ. ನೈಜ ಘಟನೆಯಾಗಿದ್ದರಿಂದ ಶೇಕಡಾ ಎಪ್ಪತ್ತರಷ್ಟು ದೃಶ್ಯಗಳು ಪೋಲೀಸ್ ಠಾಣೆಯಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಟೇಷನ್‌ದಲ್ಲಿ ಇಂಥ ಕೇಸ್‌ಗಳನ್ನು ಹೇಗೆ ಹ್ಯಾಂಡಲ್ ಮಾಡುತ್ತಾರೆ. ಇದರ ಹಿಂದೆ ರಾಜಕಾರಣಿಗಳು ಎಂಟ್ರ ಆದಾಗ, ಅದು ಹೇಗೆ ತಿರುವು ಪಡೆದುಕೊಳ್ಳುತ್ತದೆ. ಮನೆಯಲ್ಲಿ ಪ್ರೀತಿಗೆ ಒಪ್ಪದೆ ಇದ್ದಾಗ ಓಡಿ ಹೋಗಲು ನಿರ್ಧಾರ ಮಾಡುತ್ತಾರೆ. ಕೊನೆಗೆ ಎಲ್ಲರನ್ನು ಎದುರು ಹಾಕಿಕೊಂಡು ಮುಗ್ದ ಪ್ರೇಮಿಗಳು ಒಂದಾಗುತ್ತಾರಾ ಅಥವಾ ಬೇರೆಯಾಗುತ್ತಾರಾ? ಎಂಬುದನ್ನು ನಾವು ಹೇಳುವುದಕ್ಕಿಂತ ನೀವು ನೋಡುವುದು ಲೇಸು.
ಅನೂಪ್ ಆಂಟೋನಿ ನಿರ್ದೇಶಕನಾಗಿ ಎರಡನೇ ಅನುಭವದಲ್ಲಿ ನೋಡುಗರು ಇಷ್ಟಪಡುವಂತ ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ಅದರಲ್ಲೂ ಕ್ಲೈಮಾಕ್ಸ್ ಎಂಥವರನ್ನು ಕಣ್ಣು ಒದ್ದೆ ಮಾಡಿಸುತ್ತದೆ. ಬಿಗ್‌ಬಾಸ್ ಖ್ಯಾತಿ ಶಶಿ ನಾಯಕನಾಗಿ ಪ್ರಥಮ ಪ್ರಯತ್ನದಲ್ಲೇ ಗಮನ ಸೆಳೆಯುತ್ತಾರೆ. ನಾಯಕಿಯಾಗಿ ಪಾವನಾಗೌಡ ಪರವಾಗಿಲ್ಲ. ಯೋಗರಾಜಭಟ್, ರಘುಶಾಸ್ತ್ರೀ ಸಾಹಿತ್ಯದ ಹಾಡುಗಳಿಗೆ ಮಾಥ್ಯೂಸ್‌ಮನು ಸಂಗೀತ ಚೆನ್ನಾಗಿ ಮೂಡಿಬಂದಿದೆ. ಇದಕ್ಕೆ ಪೂರಕವಾಗಿ ಕಿರಣ್‌ಹಂಪಾಪುರ ಛಾಯಾಗ್ರಹಣ ಉತ್ತಮವಾಗಿದೆ. ಮಾಸ್‌ಮಾದ ಸಾಹಸ ಮೈ ಜುಂ ಅನಿಸುತ್ತದೆ.
****