ಬ್ಲಡ್ ಮಾಫಿಯಾ ಮತ್ತು ರಿವೇಂಜ್
ಕಲಾ ಸಾಮ್ರಾಟ್ ಎಸ್.ನಾರಾಯಣ್ ೫೦ನೇ ನಿರ್ದೇಶನದ ಮೊದಲ ಥ್ರಿಲ್ಲರ್ ಸೆಸ್ಪೆನ್ಸ್ ‘೫ಡಿ’ ಚಿತ್ರವು ಬ್ಲಡ್ ಮಾಫಿಯಾ ಜೊತೆಗೆ ಹತ್ಯಾಕಾಂಡ ನಡೆಸಿದವರ ಮೇಲಿನ ಸೇಡಿನ ಕಥೆಯನ್ನು ಹೇಳಲಾಗಿದೆ. ಪ್ರಭಾವಿ ವ್ಯಕ್ತಿಗಳು ಅತ್ಯಂತ ಕ್ರೂರವಾಗಿ ಕೊಲೆಯಾಗುವ ಪ್ರಕರಣದ ಮೂಲಕ ಚಿತ್ರವು ಪ್ರಾರಂಭವಾಗುತ್ತದೆ. ನಾವು ಕೊಡುವ ರಕ್ತ ಇತರರಿಗೆ ಉಪಯೋಗವಾಗಲಿ, ಸರಿಯಾಗಿ ಬಳಕೆಯಾಗುತ್ತಿದೆಯೇ ಇಲ್ಲವೋ ಅಂತ ನಾವ್ಯಾರು ಯೋಚಿಸುವುದಿಲ್ಲ. ಬ್ಲಡ್ ಡೊನೇಟ್ ಮಾಡುವುದು ಸರೀನಾ, ತಪ್ಪಾ ಎನ್ನುವ ಅಂಶಗಳು ಇರಲಿದೆ. ಮೆಡಿಕಲ್ ಜಗತ್ತಿನಲ್ಲಿ ಬ್ಲಡ್ ಮಾಫಿಯಾನೇ ನಡೆಯುತ್ತಿದೆ. ಅದು ಹೇಗೆ, ಇದರ ಹಿಂದೆ ಯಾರ‍್ಯಾರಿದ್ದಾರೆ ಎನ್ನುವುದೇ ಸಿನಿಮಾದ ಮುಖ್ಯ ವಸ್ತು.
ನಾಯಕನಾಗಿ ಆದಿತ್ಯ ಅವರದು ೨೫ನೇ ಸಿನಿಮಾ ಎಂಬುದು ವಿಶೇಷ.
ಇಲ್ಲಿಯವರೆಗೂ ಹಾಸ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಎಸ್.ನಾರಾಯಣ್ ಬದಲಾವಣೆ ಎಂಬಂತೆ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಅದಿತಿಪ್ರಭುದೇವಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ತಾಯಿಯಾಗಿ ಜ್ಯೋತಿರೈ ಪಾತ್ರಕ್ಕೆ ಜೀವ ತುಂಬಿದ್ದಾರೆ. ರವಿಗುಂಟಿಮಡುಗು ಕಥೆ, ಕುಮಾರಗೌಡ ಛಾಯಾಗ್ರಹಣ, ಶಿವಪ್ರಸಾದ್ ಸಂಕಲನ, ಡಿಫರೆಂಟ್‌ಡ್ಯಾನಿ ಸಾಹಸ, ಮಾಲೂರು ಶ್ರೀನಿವಾಸ್ ನೃತ್ಯ ಎಲ್ಲವು ಸಿನಿಮಾಕ್ಕೆ ಪೂರಕವಾಗಿದೆ. ೧ ಟು ೧೦೦ ಡ್ರೇಮ್ ಮೂವೀಸ್ ಲಾಂಛನದಲ್ಲಿ ಸ್ವಾತಿಕುಮಾರ್ ನಿರ್ಮಿಸಿದ್ದಾರೆ.
****