ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ
ಸ್ನೇಹಿತರುಗಳ ಕುರಿತಂತೆ ಹಲವು ಸಿನಿಮಾಗಳು ತೆರೆಕಂಡಿದೆ. ಆದರೆ ‘ಮಂಡ್ಯಹೈದ’ ಸಿನಿಮಾವು ಇದೆಲ್ಲಾಕ್ಕಿಂತಲೂ ಭಿನ್ನವಾಗಿದೆ ಎನ್ನಬಹುದು. ಹಳ್ಳಿ ಅಂಶಗಳನ್ನು ಒಳಗೊಂಡಿದ್ದು, ಪ್ರೀತಿ ಎಲ್ಲರಿಗೂ ಗೊತ್ತಿರುವ ಪದ. ಅದನ್ನು ಪಡೆಯಲು ಕೆಲವರು ಸಾಯ್ತಾರೆ. ಮತ್ತೆ ಕೆಲವರು ಸಾಯಿಸ್ತಾರೆ. ನಮ್ಮ ನಾಯಕ ಕೂಡ ಇದನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನವುದೇ ಒಂದು ಏಳೆಯ ಸಾರಾಂಶವಾಗಿದೆ. ಸ್ನೇಹ ಪ್ರೀತಿ ಸಂಬಂಧಗಳ ಕುರಿತಾದಂತೆ ಸನ್ನಿವೇಶಗಳನ್ನು ಚೆನ್ನಾಗಿ ಸೃಷ್ಟಿಸಲಾಗಿದೆ.
ನಾಯಕ ಅಭಯ್‌ಚಂದ್ರಶೇಖರ್ ಎರಡನೇ ಪ್ರಯತ್ನದಲ್ಲಿ ಸುಧಾರಿಸಿಕೊಂಡಿದ್ದಾರೆ. ಡ್ಯಾನ್ಸ್, ಫೈಟ್ ಅಲ್ಲದೆ ಅಭಿನಯದಲ್ಲಿ ಮಿಂಚಿದ್ದಾರೆ. ಕಿರುತೆರೆ ನಟಿ ಭೂಮಿಕಾ ನಾಯಕಿಯಾಗಿ ಪರವಾಗಿಲ್ಲ. ಇವರೊಂದಿಗೆ ಬಲರಾಜವಾಡಿ, ಸುನಂದ, ತೇಜಸ್, ದರ್ಶನ್‌ಸೂರ್ಯ, ಸುಖೇಶ್, ಚಿದಂಬರ ಹಾಗೂ ನಿರ್ಮಾಪಕ ಚಂದ್ರಶೇಖರ್ ತಿರುವು ಕೊಡುವ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಥ್ರಿಲ್ಲರ್‌ಮಂಜು ಸಾಹಸದಲ್ಲಿ ಮೂರು ಫೈಟ್‌ಗಳಿವೆ. ಪ್ರೀತಿಸುವವರಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಒಟ್ಟು ಮೂರು ಸಂದೇಶಗಳು ಇರಲಿದೆ. ವಿ.ಶ್ರೀಕಾಂತ್ ಕಥೆ,ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಚಿತ್ರವು ಪಕ್ಕಾ ಪೈಸಾ ವಸೂಲ್ ಎನ್ನಬಹುದು.
****