Saramsha.Reviews

Friday, February 16, 2024

76

ಮನುಷ್ಯನ ಮನಸ್ಥಿತಿ ಹಾಗೂ ಆಲೋಚನೆಗಳು

     ಹೊಸತನದ ಅಂಶಗಳನ್ನು ಒಳಗೊಂಡಿರುವ ‘ಸಾರಾಂಶ’ ಚಿತ್ರವು ಮನುಷ್ಯನ ಮನಸ್ಥಿತಿ, ಆಲೋಚನೆ ಹಾಗೂ ಬುದ್ದಿಶಕ್ತಿಯ ಸುತ್ತ ಸಾಗುವ ಕಥೆಯನ್ನು ಹೊಂದಿದೆ  ಓರ್ವ ಕಥೆಗಾರ ತಾನು ಸೃಷ್ಟಿಸಿದ ಪಾತ್ರವನ್ನೇ ಎದುರುಗೊಳ್ಳುವ ರೋಮಾಂಚಕ ಏಳೆಯನ್ನು ಹೇಳಲಿದೆ. ಆ ರೋಲ್‌ನ್ನು ಕಥೆಗಾರ ಬರೆದನೋ, ಆ ಪಾತ್ರವೇ ಕಥೆಗಾರನ ಮೂಲಕ ಬರೆಸಿಕೊಳ್ಳುತ್ತಿದೆಯೋ ಎಂಬ ಸನ್ನಿವೇಶಗಳು ಇರಲಿದೆ. ನಾಲ್ಕು ಪಾತ್ರಗಳ ಸುತ್ತ ಸಿನಿಮಾ ಸಾಗುತ್ತದೆ. ಅದರ ಜತೆಗೆ ಮೋಹಕ ವಾಸ್ತವಿಕತೆ ಅಥವಾ ಮ್ಯಾಜಿಕಲ್ ರಿಯಲಿಸಂ ಎಂಬ ವಿರಳ ಜಾನರಿಗೆ ಒಳಪಡುತ್ತದೆ.

      ನವಪ್ರತಿಭೆ ಸೂರ್ಯವಸಿಷ್ಠ ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.  ಡ್ಯಾನ್ಸರ್ ಆಗಿ ಶೃತಿಹರಿಹರನ್ ಮನಸ್ಸು ತೋರುವ ಹಾದಿಯಲ್ಲಿ ಸಾಗುವ ರೋಲ್‌ದಲ್ಲಿ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ಎರಡು  ಪಾತ್ರಗಳ ಪೈಕಿ ದೀಪಕ್‌ಸುಬ್ರಮಣ್ಯ, ಶ್ವೇತಾಗುಪ್ತ ಇವರೊಂದಿಗೆ ಆಸಿಫ್‌ಕ್ಷತ್ರಿಯಾ, ರವಿಭಟ್, ರಾಮ್‌ಮಂಜುನಾಥ್, ಸತೀಶ್‌ಕುಮಾರ್, ಪೃಥ್ವಿಬನವಾಸಿ ಮುಂತಾದವರು ಗಮನ ಸೆಳೆಯುತ್ತಾರೆ. ಉದಿತ್‌ಹರಿತಾಸ್ ಸಂಗೀತ, ಅಪರಾಜಿತ್ ಹಿನ್ನಲೆ ಶಬ್ದ ಅಲ್ಲಲ್ಲಿ ಕೆಲಸ ಮಾಡಿದೆ. ರವಿಕಶ್ಯಪ್ ಮತ್ತು ಆರ್.ಕೆ.ನಲ್ಲಮ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.

****

 

 

 

Copyright@2018 Chitralahari | All Rights Reserved. Photo Journalist K.S. Mokshendra,