ಒಂದು ಹೆಣ ಮತ್ತು ರಾತ್ರಿಯ ಕಥನ
ಕರೋನ ಅವದಿಯಲ್ಲಿ ನಡೆದಂತ ಸತ್ಯ ಘಟನೆಯನ್ನು ‘ನೈಟ್ ಕರ್ಫ್ಯೂ’ ಚಿತ್ರದಲ್ಲಿ ಅದ್ಬುತವಾಗಿ ತೋರಿಸಲಾಗಿದೆ. ಆಸ್ಪತ್ರೆಗಳು, ರಾಜಕೀಯ ವ್ಯಕ್ತಿಗಳು ಇದೇ ಕಾರಣ ಇಟ್ಟುಕೊಂಡು ಕೋಟಿ ಕೋಟಿ ಲೂಟಿ ಮಾಡಿದ್ದರು. ಅದರಂತೆ ನಾಲ್ಕು ಜನರ ತಂಡವೊಂದು ರೋಗಿಯೊಬ್ಬಳನ್ನು ದೂರದ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಲು ಬರುತ್ತಾರೆ. ರಾತ್ರಿ ಪಹಳೆಯಲ್ಲಿ ಮಹಿಳಾ ವೈದ್ಯರುಗಳು ಇರುವುದನ್ನು ತಿಳಿದುಕೊಂಡು ಇಲ್ಲಿಗೆ ಬಂದಿರುತ್ತಾರೆ. ಪ್ರಾರಂಭದಲ್ಲಿ ಕರೋನ ರೋಗಿ ಎಂದುಕೊಂಡಿದ್ದ ವೈದ್ಯರುಗಳಿಗೆ ನಂತರ ಬೇರೆ ರೀತಿ ಇರಲಿದೆ ಅಂತ ಗೊತ್ತಾಗುತ್ತದೆ. ಮತ್ತೋಂದು ಕಡೆ ಬೀಗ ಮುರಿದು ಬಾರ್‌ನಲ್ಲಿ ಮದ್ಯದ ಬಾಟಲ್‌ಗಳನ್ನು ಕಳವು ಮಾಡಲು ಇಬ್ಬರು ಹೋಗುತ್ತಾರೆ. ಹೀಗೆ ಎರಡು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಇವರೆಡಕ್ಕೂ ಸಂಬಂದ ಏನು. ಆಕೆ ಸಾವಿಗೆ ಕರೋನ ಕಾರಣವೇ. ಎಲ್ಲವು ಕ್ಲೈಮಾಕ್ಸ್‌ದಲ್ಲಿ ತಿಳಿಯುತ್ತದೆ. ಇದರ ಕುತೂಹಲ ಇದ್ದರೆ ಟಾಕೀಸ್‌ಗೆ ಹೋದರೆ ಗೊತ್ತಾಗುತ್ತದೆ.
ಗ್ಯಾಪ್ ನಂತರ ಕನಸಿನ ರಾಣಿ ಮಾಲಾಶ್ರೀ ಡಾ.ದುರ್ಗಿಯಾಗಿ ಆಕ್ಷನ್‌ದಲ್ಲಿ ಮಿಂಚಿದ್ದಾರೆ. ವೇದಳಾಗಿ ರಂಜನಿರಾಘವನ್ ವೈದ್ಯೆ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಮುಖ್ಯ ಖಳನಾಯಕನಾಗಿ ಪ್ರಮೋದ್‌ಶೆಟ್ಟಿ, ಇವರೊಂದಿಗೆ ಅಶ್ವಿನ್‌ಹಾಸನ್, ವರ್ಧನ್‌ತೀರ್ಥಹಳ್ಳಿ, ಬಲರಾಜವಾಡಿ ನಗಿಸಲು ಸಾಧುಕೋಕಿಲ, ಪಾವಗಡಮಂಜು, ಇನ್ಸ್‌ಪೆಕ್ಟರ್ ಆಗಿ ರಂಗಾಯಣರಘು ತಮಗೆ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಿರ್ದೇಶಕ ರವೀಂದ್ರವಂಶಿ ಒಂದು ಏಳೆಯನ್ನು ತೆಗೆದುಕೊಂಡು ಅದಕ್ಕೆ ಸಿನಿಮಾ ಸ್ಪರ್ಶ ನೀಡಿ ೧೨೫ ನಿಮಿಷ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಪಲರಾಗಿದ್ದಾರೆ. ಹಿನ್ನಲೆ ಸಂಗೀತ ಎಂ.ಎಸ್.ಮಾರುತಿ ಚೆನ್ನಾಗಿ ಮೂಡಿಬಂದಿದೆ. ಆಸ್ಪತ್ರೆ ಒಳಗಿನ ದೃಶ್ಯಗಳು ಇರುವುದರಿಂದ ಛಾಯಾಗ್ರಾಹಕ ಪ್ರಮೋದ್‌ಭಾರತೀಯ ಛಾಲೆಂಜ್ ಆಗಿ ಸೆರೆಹಿಡಿದಿದ್ದಾರೆ. ಬಿ.ಎಸ್.ಚಂದ್ರಶೇಖರ್ ನಿರ್ಮಾಣವಿದೆ. ಸತ್ಯ ಘಟನೆಯ ಕ್ರೈಂ ಆಧಾರಿತ ಹಾಗೂ ಮಾಲಾಶ್ರೀ ಅಭಿಮಾನಿಗಳಿಗೆ ಖಂಡಿತ ಇಷ್ಟವಾಗುತ್ತದೆ.
****