ಅಪ್ಪನ ಬೆಲೆ ತಿಳಿಯಲು ಚಿತ್ರ ನೋಡಬೇಕು ****
ಚಿಕ್ಕಂದಿನಿಂದಲೂ ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣು ಇಟ್ಟುಕೊಂಡು ನೋಡಿಕೊಳ್ಳುವ ಅಪ್ಪ-ಅಮ್ಮನಿಗೆ ಬೆಳೆದು ದೊಡ್ಡವರಾದ ಮೇಲೆ ತಂದೆ ತಾಯಿ ಅಂತ ನೋಡದೆ ನಿರ್ಲಕ್ಷದಿಂದ ಕಾಣುವ ಕೆಟ್ಟ ಮಕ್ಕಳ ಕಥೆಯು ‘ಅಪ್ಪ ಐ ಲವ್ ಯು’ ಚಿತ್ರದ್ದಾಗಿದೆ. ಎಲ್ಲರ ಮನೆಯಲ್ಲಿ ನಡೆಯುವ ಘಟನೆಗಳನ್ನು ಬಳಸಿಕೊಳ್ಳಲಾಗಿದೆ. ಸಕರಾತ್ಮಕ ಮತ್ತು ನಕರಾತ್ಮಕ ಗುಣಗಳಿರುವ ಮಕ್ಕಳ ಕಾರಣದಿಂದ ಒಂದಷ್ಟು ಬದಲಾವಣೆಗಳು ಆಗುತ್ತದೆ. ಹೆಂಡತಿಯ ಮಾತು ಕೇಳಿ ದಾರಿ ತಪ್ಪಿದ ಮಗ ಏನಾಗುತ್ತಾನೆ. ಇಂತಹ ಅಂಶಗಳು ಸಾಕಷ್ಟು ಬಂದು ಹೋಗುತ್ತದೆ. ಸಂಸಾರದಲ್ಲಿ ಅಪ್ಪ ಎಷ್ಟು ಮುಖ್ಯ. ತಂದೆಯನ್ನು ಕಡೆಗಣಿಸಿದಾಗ ಅದು ಸಮಾಜದ ಮೇಲೆ ಯಾವ ಪರಿಣಾಮ ಬೀರುತ್ತೆ ಎನ್ನುವುದನ್ನು ನಿರ್ದೇಶಕ ಅಥರ್ವ ಆರ್ಯ ಅದ್ಬುತವಾಗಿ ತೋರಿಸಿದ್ದಾರೆ.
ತಂದೆ ಧರ್ಮಣ್ಣನಾಗಿ ತಬಲಾನಾಣಿ ಅಭಿನಯ ನೋಡುವುದೇ ಖುಷಿ ಕೊಡುತ್ತದೆ. ಸಮಾಜದಲ್ಲಿ ತಂದೆಯ ಸ್ಥಾನ ಏನು ಎಂಬುದನ್ನು ಲವ್ಲಿಸ್ಟಾರ್ ಪ್ರೇಮ್ ಮತ್ತು ಮಾನ್ವಿತಾಹರೀಶ್ ಅಭಿನಯ ಮನ ಮುಟ್ಟುತ್ತದೆ. ಕಡಿಮೆ ಅವದಿಯಲ್ಲಿ ಬಂದರೂ ಗಮನ ಸೆಳೆಯುತ್ತಾರೆ. ಸಂಜಯ್ ನಾಯಕ. ಜೀವಿತಾವಸಿಷ್ಠ ನಾಯಕಿ. ಉಳಿದಂತೆ ಬಲರಾಜವಾಡಿ, ಅರುಣಬಾಲರಾಜ್, ಅರವಿಂದ್ ತಮಗೆ ನೀಡಿದ ಕೆಲಸವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಅಪ್ಪ-ಮಗನ ಹಾಡಿಗೆ ವಿಜಯ್‌ಪ್ರಕಾಶ್ ಕಂಠದಾನ ಮಾಡಿರುವ ಗೀತೆಗೆ ಆಕಾಶ್‌ಪರ್ವ ಸಂಗೀತ ಕೇಳಲು ಇಂಪಾಗಿದೆ. ಇತ್ತೀಚೆಗೆ ಮಚ್ಚು ಲಾಂಗ್‌ಗಳ ಚಿತ್ರಗಳ ಮಧ್ಯೆ ಕುಟುಂಬ ಸಮೇತ ನೋಡಬಹುದಾದ ಸಿನಿಮಾವೆಂದು ಘಂಟಾಘೋಷವಾಗಿ ಹೇಳಬಹುದು.
****