ಶಿಕ್ಷಣ ವ್ಯವಸ್ಥೆ ಕುರಿತಾದ Sಅಂಒ ೧೭೭೦
ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸುತ್ತದೆ. ಆದರೆ ಪ್ರಸ್ತುತ ಶಿಕ್ಷಣದಲ್ಲೇ ಸಾಕಷ್ಟು ಅವ್ಯವಹಾರಗಳು ನಡೆಯುತ್ತವೆ. ವಿದ್ಯಾಭ್ಯಾಸ ಇಂದು ಬಡವರಿಗೆ ಹಾಗೂ ಮಧ್ಯಮವರ್ಗದವರಿಗೆ ದುಬಾರಿಯಾಗಿದೆ. ಡಾಕ್ಟರ್, ಇಂಜಿನಿಯರ್ ಆಗೋ ಕನಸು ಹೊತ್ತು ನೀಟ್, ಸಿಇಟಿ ಪರೀಕ್ಷೆ ಬರೆದು ಉಜ್ವಲ ಭವಿಷ್ಯದ ಆಸೆಗಳನ್ನು ಇಟ್ಟುಕೊಂಡಿರುವ ವಿದ್ಯಾರ್ಥಿಗಳ ಜೀವನದಲ್ಲಿ ಆಗೋ ಏರುಪೇರುಗಳು, ಮಧ್ಯವರ್ತಿಗಳ ಹಾವಳಿ, ಕೋಚಿಂಗ್ ಸೆಂಟರ್‌ಗಳು ನಡೆಸೋ ಅವ್ಯವಹಾರಗಳನ್ನು ಸೂಕ್ಷವಾಗಿ ಹೇಳುವ ಸಿನಿಮಾ ‘Sಅಂಒ ೧೭೭೦’ ಆಗಿದೆ. ನಿರ್ದೇಶಕ ವಿಕಾಸ್‌ಪುಷ್ಪಗಿರಿ ಆಯ್ಕೆ ಮಾಡಿಕೊಂಡಿರುವ ವಿಷಯ ಕಥಾವಸ್ತು ಉತ್ತಮವಾಗಿದೆ.
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು’ದಲ್ಲಿ ದಡ್ಡ ಪ್ರವೀಣನಾಗಿ ಕಾಣಿಸಿಕೊಂಡಿದ್ದ ರಂಜನ್ ಬುದ್ದಿವಂತ ಹುಡುಗನಾಗಿ ನಾಯಕ. ನಿಶ್ಚಿತಾವೈದ್ಯ ನಾಯಕಿ. ಉಳಿದಂತೆ ಬಿ.ಸುರೇಶ್, ಹರಿಣಿ, ನಾರಾಯಣಸ್ವಾಮಿ, ನಟನ ಪ್ರಶಾಂತ್, ರಾಘುಶಿವಮೊಗ್ಗ ಮುಂತಾದವರು ತಮಗೆ ನೀಡಿದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸತೀಶ್‌ಆರ್ಯನ್ ಸಂಗೀತ, ಸಂಕಲನ ಸುರೇಶ್‌ಆರ್ಮುಗಂ, ಶಂಕರ್‌ರಾಮನ್ ಚಿತ್ರಕಥೆ-ಸಂಭಾಷಣೆ ಇರಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ತಪ್ಪದೇ ನೋಡಬೇಕಾದ ಚಿತ್ರವಂತೆ. ‘ಆಕ್ಟ್ ೧೯೭೮’ ಮತ್ತು ೧೯.೨೦.೨೧’ ನಿರ್ಮಾಣ ಮಾಡಿದ್ದ ದೇವರಾಜ್ ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ.
****