ಸಸ್ಪೆನ್ಸ್ ಥ್ರಿಲ್ಲರ್ ಕಾಂಗರೂ****
ಕಾಂಗರೂ ಮೃದು ಸ್ವಭಾವದ ಪ್ರಾಣಿ. ಅದು ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಯಾರಾದರೂ ಬಂದರೆ ಮಾತ್ರ ಅವರನ್ನು ಸುಮ್ಮನೆ ಬಿಡುವುದಿಲ್ಲ. ಇಂತಹುದೆ ಅಂಶಗಳನ್ನು ಬಳಸಿಕೊಂಡು ‘ಕಾಂಗರೂ’ ಚಿತ್ರದಲ್ಲಿ ಹೇಳಲಾಗಿದೆ. ಇಡೀ ಸಿನಿಮಾ ಚಿಕ್ಕಮಗಳೂರಿನ ಆಂಟನಿ ಕಾಟೇಜ್ ಅತಿಥಿ ಗೃಹದಲ್ಲಿ ನಡೆಯುತ್ತದೆ. ಅಲ್ಲಿಗೆ ವರ್ಗಾವಣೆಯಾಗಿ ಬರುವ ಪೋಲೀಸ್ ಅಧಿಕಾರಿ ಆರಂಭದಿಂದಲೇ ಅನೇಕ ಛಾಲೆಂಜ್‌ಗಳನ್ನು ಎದುರಿಸಬೇಕಾಗುತ್ತದೆ. ಈತನ ಅಣ್ಣ ಗೆಸ್ಟ್‌ಹೌಸ್‌ನಲ್ಲಿ ಆತ್ನಹತ್ಯೆ ಮಾಡಿಕೊಂಡಿದ್ದು, ಆತನೇ ದೆವ್ವವಾಗಿ ಎಲ್ಲರನ್ನು ಹೆದರಿಸುತ್ತಾ, ಅಲ್ಲಿಗೆ ಬರುವವರನ್ನು ಓಡಿ ಹೋಗುವಂತೆ ಮಾಡುತ್ತಿರುತ್ತದೆ. ಇನ್ನು ಕೆಲವರು ಕಣ್ಮೆರೆಯಾಗುತ್ತಿರುತ್ತಾರೆ. ಈ ಎಲ್ಲಾ ಘಟನೆಗಳಿಗೂ ಏನು ಕಾರಣ. ಅದನ್ನು ನಾಯಕನಾದವನು ಹೇಗೆ ತನಿಖೆ ನಡೆಸುತ್ತಾನೆ. ಈ ಹಂತದಲ್ಲಿ ಶಾಕ್ ಆಗುವಂತ ಸಂಗತಿ ನಡೆಯುತ್ತದೆ. ಇದೆಲ್ಲದಕ್ಕೂ ಉತ್ತರ ಚಿತ್ರಮಂದಿರಕ್ಕೆ ಬಂದರೆ ಸಿಗುತ್ತದೆ. ನಿರ್ದೇಶಕ ಕಿಶೋರ್‌ಮೇಗಳ ಮನೆ ಚೆಂದದ ನಿರೂಪಣೆ, ನೋಡುಗರಿಗೆ ಕುತೂಹಲ ಮೂಡಿಸುತ್ತದೆ.
ಪೋಲೀಸ್ ಅಧಿಕಾರಿಯಾಗಿ ಆದಿತ್ಯ ನಾಯಕ. ಮನೋವೈದ್ಯೆಯ ಪಾತ್ರದಲ್ಲಿ ರಂಜನಿ ರಾಘವನ್ ನಾಯಕಿ. ತಾರಾಗಣದಲ್ಲಿ ನಾಗೇಂದ್ರಅರಸ್, ಅಶ್ವಿನ್‌ಹಾಸನ್, ಶುಭಲಕ್ಷೀ, ಗೌತಮ್ ಮುಂತಾದವರು ನಟಿಸಿದ್ದಾರೆ. ಕೆ.ಕಲ್ಯಾಣ್ ಸಾಹಿತ್ಯದ ಹಾಡುಗಳಿಗೆ ಸಾಧುಕೋಕಿಲ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಉದಯಲೀಲ, ಸಂಕಲನ ಅರ್ಜುನ್‌ಕಿಟ್ಟು ಇದೆಲ್ಲದಕ್ಕೂ ಪೂರಕವಾಗಿದೆ.
ಚನ್ನಕೇಶವ ಬಿ.ಸಿ.ಕುಣಿಗಲ್, ನರಸಿಂಹಮೂರ್ತಿಚಕ್ರಭಾವಿ, ರಮೇಶ್‌ಬಂಡೆ, ಸ್ವಾಮಿಚಕ್ರಭಾವಿ, ರವಿ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಜಂಟಿಯಾಗಿ ಆರೋಹ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣ ಮಾಡಿದ್ದಾರೆ.
****