Grey Games.Reviews

Friday, May 10, 2024

117

 

ಚಿಂತನೆಗೆ ಹಚ್ಚಿ ಮನಗೆಲ್ಲುವ ಗೇಮ್ಸ್

 

ಚಿತ್ರ: ಗ್ರೇ ಗೇಮ್ಸ್

ತಾರಾಗಣ: ವಿಜಯರಾಘವೇಂದ್ರ, ಭಾವನಾ ರಾವ್ ಮತ್ತು ಇತರರು

ನಿರ್ದೇಶನ: ಗಂಗಾಧರ ಸಾಲಿಮಠ

ನಿರ್ಮಾಣ: ಆನಂದ್ ಮುಗದ್

 

ಗ್ರೇ ಗೇಮ್ಸ್ ಹೆಸರೇ ಹೇಳುವಂತೆ  ಆನ್ಲೈನ್ ವಿಡಿಯೋ ಗೇಮ್ ಸುತ್ತ ನಡೆಯುವ ಕತೆಯನ್ನು ಹೇಳುವ ಚಿತ್ರ.

 

ಆನ್ಲೈನ್ ನಲ್ಲಿ ಗೇಮ್ಸ್ ಆಡಿ ಅದರಲ್ಲೇ ಅಸ್ವಸ್ಥನಂತೆ ಕಾಣಿಸುವ ಹುಡುಗ ಅಭಿ.‌ಆತನ   ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಪ್ರಯತ್ನಿಸುವ ತಂದೆ ತಾಯಿಗೆ ದೇವರಂತೆ ಸಿಗುವ ಮನೋವೈದ್ಯ ರಾಮ್. ಈ ವೈದ್ಯ ತನ್ನ ಚಿಕಿತ್ಸೆಯ ಮೂಲಕ‌ ಅಭಿಯನ್ನು ಸುಧಾರಿಸುವ ಜತೆಗೆ ಆತನಿಗೆ ಸಂಬಂಧಿಸಿದ ಕೊಲೆ ಪ್ರಕರಣವೊಂದರ ಅಪರಾಧಿಯನ್ನು ಪತ್ತೆ ಮಾಡುತ್ತಾನೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು.

ಚಿತ್ರದಲ್ಲಿ ರಾಮ್ ಪಾತ್ರವನ್ನು ನಿಭಾಯಿಸಿರುವ ವಿಜಯ ರಾಘವೇಂದ್ರ ಮತ್ತೊಂದು ವಿಭಿನ್ನ ಪಾತ್ರಕ್ಕೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. ಒಂದೇ ಪಾತ್ರವಾದರೂ ಎರಡು ಮೂರು ಶೇಡ್ ಗಳ ಮೂಲಕ ತಮ್ಮ ನಟನಾ ವೈವಿಧ್ಯತೆಯನ್ನು ತೋರಿಸಿದ್ದಾರೆ. ಅಭಿ ಪಾತ್ರದಲ್ಲಿ ವಿಜಯರಾಘವೇಂದ್ರನ ಸಹೋದರಿ ಪುತ್ರ ಆರಂಭದಲ್ಲೇ ಆಕರ್ಷಕ ನಟನೆ ನೀಡಿದ್ದಾರೆ. ಅಭಿಯ ತಂದೆ, ತಾಯಿಯಾಗಿ ರವಿಭಟ್ ಮತ್ತು ಅಪರ್ಣಾ ವಸ್ತಾರೆ ನಟಿಸಿದ್ದಾರೆ. ಚಿತ್ರದಲ್ಲಿ ವಿಜಯರಾಘವೇಂದ್ರ ಅವರಿಗೆ ಜೋಡಿಯಾಗಿ ನಟಿಸಿರುವ ಶ್ರುತಿ ಪ್ರಕಾಶ್ ಅವರದ್ದು ಸಿನಿಮಾ ನಟಿಯ ಪಾತ್ರ.

 

ಚಿತ್ರಕತೆ, ನಿರೂಪಣೆ, ಕಲರಿಂಗ್ ಎಲ್ಲವೂ ಹೊಸ ಮಾದರಿಯಲ್ಲಿದೆ. ಗೇಮಿಂಗ್ ಕುರಿತಾದ ಚಿತ್ರವನ್ನು ಹೊಸದೊಂದು ಗೇಮ್ ಮಾದರಿಯಲ್ಲೇ ನಿರ್ದೇಶಕರು ತೋರಿಸಿದ್ದಾರೆ. ಎಸಿಪಿ‌ ಕಲ್ಪನಾ ಪಾತ್ರದಲ್ಲಿ ಭಾವನಾರಾವ್ ನಟನೆ ನೆನಪಿರಿಸುವಂತೆ ಇದೆ. ಒಂದೊಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ನೋಡಲು ಬಯಸುವವರು ಖಂಡಿತವಾಗಿ ಈ ಸಿನಿಮಾ ನೋಡಬಹುದು.

Copyright@2018 Chitralahari | All Rights Reserved. Photo Journalist K.S. Mokshendra,