ದುಷ್ಟರ ಬೆನ್ನತ್ತುವ ದಿಟ್ಟ ಹುಡುಗಿ!
ಚಿತ್ರ: 4ಎನ್ 6
ನಿರ್ದೇಶಕ: ದರ್ಶನ್ ಶ್ರೀನಿವಾಸ್
ನಿರ್ಮಾಣ: ಸಾಯಿ ಪ್ರೀತಿ
ತಾರಾಗಣ: ರಚನಾ ಇಂದರ್, ಭವಾನಿ ಪ್ರಕಾಶ್, ನವೀನ್ ಕುಮಾರ್, ಆದ್ಯ ಶೇಖರ್, ಅರ್ಜುನ್, ಆಶಿತಾ, ಸೌರವ್ ಮತ್ತಿತರರು.
ಕನ್ನಡದಲ್ಲಿ ಬಂದ ಸಸ್ಪೆನ್ಸ್ ಥ್ರಿಲ್ಲರ್ , ಮರ್ಡರ್‌ಮಿಸ್ಟ್ರಿ ಸಿನಿಮಾಗಳ ಸಾಲಿಗೆ ಈಗ 4ಎನ್6 ಸೇರಿದೆ. ಇದು ಕೊಲೆಗಳ ಸುತ್ತ ಕಥೆ ನಡೆಯುತ್ತೆ.
ಕಥೆಯ ವಿಭಿನ್ನವಾಗಿದೆ.
ನಿರ್ದೇಶಕರ ಪ್ರಯತ್ನವೂ ಚೆನ್ನಾಗಿದೆ., ಚಿತ್ರಕಥೆ ಮತ್ತು ನಿರೂಪಣೆ ವಿಶೇಷ ಎನಿಸುತ್ತದೆ.
ಕಥೆಯಲ್ಲಿ ಒಂದಷ್ಟು ಕೊಲೆಗಳು ನಡೆಯುತ್ತವೆ. ಯಾಕೆ, ಯಾರು ಮಾಡುತ್ತಾರೆ ಎಂಬುದು ಕಥೆ. ಆ ಕೊಲೆಯ ರಹಸ್ಯ ಬೆನ್ನತ್ತಿ ಹೋಗುವ ನಾಯಕಿ ನೈಶಾ ಕೊನೆಗೆ ಕೊಲೆಗಾರರನ್ನು ಹಿಡಿತಾಳ ಇಲ್ಲವೋ ಎಂಬುದು ಸಸ್ಪೆನ್ಸ್.
ಇಂತಹ ಮರ್ಡರ್ ಮಿಸ್ಟ್ರಿ ಸಿನಿಮಾಗಳಿಗೆ ನಿರೂಪಣೆ ಗಟ್ಟಿಯಾಗಿರಬೇಕು. ಅದರ ಕೊರತೆ ಇಲ್ಲಿದೆ.
ಎಲ್ಲಾ ಡಾಕ್ಟರ್ಸ್ ಕೆಟ್ಟವರಲ್ಲ. ಕೆಲವು ಡಾಕ್ಟರ್ಸ್ ಕೆಟ್ಟತನ ಇಟ್ಟುಕೊಂಡಿರುತ್ತಾರೆ. ಇಲ್ಲಿ ವೈದ್ಯರ ಕಪಟತನವಿದೆ. ಯಾವ ವಿಷಯಕ್ಕೆ ಇದೆ ಎಂಬುದು ಸಸ್ಪೆನ್ಸ್.
ಆರಂಭದಿಂದ ಕುತೂಹಲ ಕೆರಳಿಸುವ ಸಿನಿಮಾ ಸೆಕೆಂಡ್ ಹಾಫ್ ನಲ್ಲಿ ಕಥೆ ಎಲ್ಲೆಲ್ಲೋ ಸಾಗುತ್ತೆ. ಸಸ್ಪೆನ್ಸ್ ಸಿನಿಮಾಗಳಲ್ಲಿ ಪೊಲೀಸ್ ಸ್ಪರ್ಶ ಇರುತ್ತೆ ಇಲ್ಲೂ ಇದೆಯಾದರೂ ಅದು ಫೋರೆನ್ಸಿಕ್ ಡಿಟೆಕ್ಟಿವ್ ಮುಂದೆ ಸೈಲೆನ್ಸ್ ಆಗಿಬಿಡುತ್ತೆ.
ಇನ್ನು ಕೊಲೆಯ ಜಾಡು ಹಿಡಿದು ಸಾಗುವ ನಾಯಕಿಯ ಜಾಣತನ ಹೇಗಿರುತ್ತೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಇಂತಹ ಕಥೆಗಳನ್ನು ಇಷ್ಟಪಡುವವರಿಗೆ ಸಿನಿಮಾ ವಿಶೇಷ ಎನಿಸುತ್ತೆ.
ಇನ್ನು ಈ ರೀತಿಯ ಮರ್ಡರ್ ಮಿಸ್ಟ್ರಿ ಕಥೆಗಳಿಗೆ ಸಂಗೀತ ಹೈಲೆಟ್. ಇಲ್ಕಿ ಇನ್ನೂ ಚೆನ್ನಾಗಿ ಮಾಡಬಹುದಿತ್ತು.
ನಿರ್ದೇಶಕರು ಸಿನಿಮಾ ಆದಷ್ಟು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.
ನಾಯಕಿ ನೈಶಾ ಬಾಲ್ಯದಲ್ಲಿ ಜಾಣೆ. ಆಕೆಯ ಅಮ್ಮನಿಗೆ ಮಗಳು ಪೊಲೀಸ್ ಅಧಿಕಾರಿ ಆಗಬೇಕೆಂಬ ಆಸೆ. ಚೆನ್ನಾಗಿ ಓದುವ ನೈಶಾ ಫೋರೆನ್ಸಿಕ್ ಡಿಟೆಕ್ಟಿವ್ ತಂಡ ಸೇರುತ್ತಾಳೆ.
ಒಬ್ಬೊಬ್ಬರೇ ವೈದ್ಯರ ಕೊಲೆಗಳು ಆಗುತ್ತಲೇ ಹೋಗುತ್ತವೆ. ಆ ಕೊಲೆಯ ಹಿಂದೆ ಯಾರಿದ್ದಾರೆ ಎಂದು ಬೆನ್ನತ್ತುವ ನಾಯಕಿ ಕೊನೆಗೆ ಬರುವ ಟ್ವಿಸ್ಟ್ ನಲ್ಲಿ ಕೊಲೆ ನಡೆದದ್ದು ಯಾರಿಂದ ಅನ್ನೋದು ಬೆಳಕಿಗೆ ವರುತ್ತೆ. ಅದೇ ಸಿನಿಮಾದ ರೋಚಕತೆ.
ರಚನಾ ಇಂದರ್ ಪೋರೆನ್ಸಿಕ್ ಡಿಟೆಕ್ಟಿವ್ ಆಗಿ ಚೆನ್ನಾಗಿ ನಟಿಸಿದ್ದಾರೆ. ಆದರೂ ಕೆಲವು ಕಡೆ ನಟನೆಗೆ ಧಮ್ ಬೇಕಿತ್ತು ಎನಿಸುತ್ತದೆ.
ಪೊಲೀಸ್ ಅಧಿಕಾರಿಯಾಗಿ ಭವಾನಿ ಪ್ರಕಾಶ್ ಸಿಗರೇಟ್ ಚೆನ್ನಾಗಿ ಸೇದುವುದರ ಜೊತೆಗೆ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ತೆರೆ ಮೇಲೆ ಕಾಣಿಸುವ ಪ್ರತಿ ಪಾತ್ರಗಳು ಪಾತ್ರಕ್ಕೆ ಮೋಸ ಮಾಡಿಲ್ಲ.
ಚರಣ್ ತೇಜ್ ಕ್ಯಾಮೆರಾ ವರ್ಕ್ ಚೆನ್ನಾಗಿದೆ. ಸಂಗೀತ ಅಷ್ಟಾಗಿ ರುಚಿಸಲ್ಲ.