Lineman.Reviews

Friday, March 22, 2024

81

ಮನಸುಗಳನ್ನು ಕದಡುವ ಲೈನ್ ಮ್ಯಾನ್

      ಭಿನ್ನ ಆಲೋಚನೆ ಹಾಗೂ ಹೊಸ ಪ್ರಯತ್ನದೊಂದಿಗೆ ಬಿಡುಗಡೆಯಾಗಿರುವ ‘ಲೈನ್ ಮ್ಯಾನ್’ ಚಿತ್ರವು ಮಾನವಿಯತೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ. ತಂತ್ರಜ್ಘಾನ ಬೆಳೆದಂತೆ ಇಂದು ಮೊಬೈಲ್, ಟಿವಿ, ಕಂಪ್ಯೂಟರ್, ಲೈಟ್,  ಫ್ಯಾನ್ ಹೀಗೆ ಇವುಗಳಲ್ಲಿ ಯಾವುದು ಇಲ್ಲದೆ ಹೋದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಅಂತಹುದೇ ಅಂಶಗಳನ್ನು ಬಳಸಿಕೊಂಡು ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಹಳ್ಳಿಯಲ್ಲಿ ಸಾವಿರಾರು ಹೆರಿಗೆಗಳನ್ನು ಮಾಡಿಸಿದ ಸೂಲಗಿತ್ತಿ ಶಾರದಮ್ಮ ಎಂದರೆ ಎಲ್ಲರಿಗೂ ಗೌರವ. ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಲ್ಲಿ ಆಚರಿಸಬೇಕೆಂದು ಅಲ್ಲಿನವರು ತೀರ್ಮಾನಿಸುತ್ತಾರೆ. ಅದಕ್ಕೊಂದು ವೇದಿಕೆಯು ಸಿದ್ದಗೊಳ್ಳುತ್ತದೆ. ಆದರೆ ಅಂದು ಲೈನ್ ಮ್ಯಾನ್ ಕರೆಂಟ್ ಹಾಕದೆ ನಿರಾಕರಿಸುತ್ತಾನೆ. ಅದಕ್ಕೆ ಆತನು ಹೇಳುವ ಕಾರಣ ಎಲ್ಲರ ಮನಸ್ಸನ್ನು ಕದಡುತ್ತದೆ. ಹೀಗೆ ಒಂದಷ್ಟು ೧೫ ದಿನ ವಿದ್ಯುತ್ ಇಲ್ಲದೆ ಪರದಾಡಿ ದೀಪದ ಮೊರೆ ಹೋಗ್ತಾರೆ. ಇದರಿಂದ ಒಂದಷ್ಟು ಸಮಸ್ಯೆಗಳು ಬಗೆಹರಿಯುತ್ತದೆ. ಅಷ್ಟಕ್ಕೂ ಕಾರಣವೇನು ಎಂಬುದು ಸಿನಿಮಾದ ಜೀವಾಳವಾಗಿದೆ.

       ನಿರ್ದೇಶಕ ರಘುಶಾಸ್ತ್ರೀ ಇಂತಹ ವಿಷಯವನ್ನು ತೆಗೆದುಕೊಂಡು ಸುಂದರ ಚಿತ್ರಣ ಮಾಡಿಸಿರುವುದು ಸಿನಿಮಾಕ್ಕೆ ಶೋಭೆ ತಂದಿದೆ ಎನ್ನಬಹುದು. ಟೈಟಲ್ ಹೆಸರಿನಲ್ಲಿ ತೆಲುಗುನಟ ತ್ರಿಗುಣ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೂಲಗಿತ್ತಿಯಾಗಿ ಹಿರಿಯ ನಟಿ ಬಿ.ಜಯಶ್ರೀ ಗಮನ ಸೆಳೆಯುತ್ತಾರೆ. ಹೆಂಡತಿಯನ್ನು ಪ್ರೀತಿಸುವ ಗಂಡನಾಗಿ ಮೈಕೋನಾಗರಾಜ್ ರೋಲ್ ಸೊಗಸಾಗಿದೆ. ಮಣಿಕಾಂತ್‌ಕದ್ರಿ ಸಂಗೀತದಲ್ಲಿ ಹಾಡುಗಳು ಕೇಳಬಲ್. ಪರ್ಪಲ್ ರಾಕ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಮಾಡಿರುವ ಸಿನಿಮಾ ಒಮ್ಮೆ ನೋಡಲು ಅಡ್ಡಿಯಿಲ್ಲ.

****

 

Copyright@2018 Chitralahari | All Rights Reserved. Photo Journalist K.S. Mokshendra,