Yuva.Film Reviews

Friday, March 29, 2024

230

ಸಮಸ್ಯೆಗಳನ್ನು ಎದುರಿಸುವ ಯುವ-****

      ಡಾ.ರಾಜ್‌ಕುಮಾರ್ ಕುಟುಂಬದ ಹೊಸ ಕುಡಿ ಯುವರಾಜ್‌ಕುಮಾರ್ ಅಭಿನಯದ ‘ಯುವ’ ಚಿತ್ರ ಪಕ್ಕಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ನಿರ್ದೇಶಕ ಸಂತೋಷ್ ಆನಂದರಾಮ್ ಯುವಜನಾಂಗವನ್ನು ದೃಷ್ಟಿಯಲ್ಲಿಟ್ಟುಕೊಂಡು ಕಥೆಯನ್ನು ಏಣೆದಿರುವುದು ತಿಳಿದುಬರುತ್ತದೆ. ಕಾಲೇಜಿನಲ್ಲಿ ಶಿಕ್ಷಣ ಒಂದು ಸಮಸ್ಯೆ ಅಂದುಕೊಂಡಿರುತ್ತಾನೆ. ವಿದ್ಯಾಭ್ಯಾಸ ಮುಗಿದ ತರುವಾಯ ವೈಯಕ್ತಿಕ ಜೀವನ ಇನ್ನೊಂದು ಸಮಸ್ಯೆ ಅಂತ ತಿಳಿಯುತ್ತದೆ. ಪ್ರತಿ ಚಿತ್ರದಲ್ಲಿ ಕಾಲೇಜು ಅಂದರೆ ಅಲ್ಲಿ ತುಂಟಾಟ, ತರಲೆ ಇರುತ್ತದೆ. ಆದರೆ ಇದನ್ನು ಪಕ್ಕಕ್ಕಿಟ್ಟು ಗ್ಯಾಂಗ್‌ವಾರ್‌ನಿಂದ ಚಿತ್ರವು ತೆರೆದುಕೊಳ್ಳುತ್ತದೆ. 

ಮೊದಲದ ಯುವಕರು ಇಷ್ಟಪಡುವಂತಹ ಮೋಜು, ಮಸ್ತಿ, ಹೊಡೆದಾಟ. ವಿರಾಮದ ತರುವಾಯ ಜೀವನ ಮತ್ತು ಹೋರಾಟ. ಇದೆಲ್ಲಾವನ್ನು ಹೇಗೆ ಎದುರಿಸುತ್ತಾನೆ. ಜತೆಗೆ ತನ್ನ ಮರ್ಯಾದೆ, ಗೌರವಕ್ಕೆ ಧಕ್ಕೆ ಬಂದಾಗ ಯಾವ ರೀತಿ ಹೋರಾಟ ಮಾಡುತ್ತಾನೆ. ಎಲ್ಲವನ್ನು ನಾವು ಹೇಳುವುದಕ್ಕಿಂತ ಚಿತ್ರಮಂದಿರಕ್ಕೆ ಬರುವುದು ಸೂಕ್ತ.

      ಹೇಳಿ ಕೇಳಿ ತಾತ, ದೊಡ್ಡಪ್ಪ, ಅಪ್ಪ, ಚಿಕ್ಕಪ್ಪ ಎಲ್ಲರೂ ಬಣ್ಣದಲೋಕದಿಂದ ಬಂದವರಾಗಿದ್ದರಿಂದ ಯುವರಾಜ್‌ಕುಮಾರ್ ಚಿಕ್ಕಂದಿನಿಂದಲೂ ಇವರೆಲ್ಲರನ್ನು ನೋಡಿಕೊಂಡು ಬಂದಿದ್ದರಿಂದ ಸರಾಗವಾಗಿ ಅಭಿನಯಹಿಸಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಶ್ರಮಪಟ್ಟು ನೋಡುಗರಿಗೆ ಖುಷಿ ಕೊಟ್ಟಿದ್ದಾರೆ. ನಾಯಕಿ ಸಪ್ತಮಿಗೌಡರಿಗೆ ಹೆಚ್ಚು ಸ್ಕೋಪ್ ಇಲ್ಲ. ಅಪ್ಪನಾಗಿ ಅಚ್ಯುತಕುಮಾರ್, ಅಮ್ಮನಾಗಿ ಸುಧಾರಾಣಿ ಪಾತ್ರಕ್ಕೆ ನ್ಯಾಯ ಒದಗಿಸದ್ದಾರೆ. ಉಳಿದಂತೆ ಕಿಶೋರ್, ಗೋಪಾಲಕೃಷ್ಣದೇಶಪಾಂಡೆ, ಹಿತಚಂದ್ರಶೇಖರ್ ಗಮನ ಸೆಳೆಯುತ್ತಾರೆ. ಚಿತ್ರದಲ್ಲಿ ಪವರ್‌ಸ್ಟಾರ್ ಅವರನ್ನು ತುಂಬಾ ನೆನಪಿಸಿಕೊಳ್ಳುವಂತ ಸನ್ನಿವೇಶಗಳು ಬಂದಾಗ ಸಂತಸ, ಖೇದ ಆಗುತ್ತದೆ. ಅಜನೀಷ್ ಲೋಕನಾಥ್ ಸಂಗೀತದಲ್ಲಿ ಎರಡು ಹಾಡುಗಳು ಕೇಳಬಲ್. ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ಒಟ್ಟಿನಲ್ಲಿ ಚಂದನವನಕ್ಕೆ ಮತ್ತೋಬ್ಬ ಸ್ಟಾರ್ ಹುಟ್ಟಿಕೊಂಡರು ಎಂದು ಘಂಟಾಘೋಷವಾಗಿ ಹೇಳಬಹುದು.

****

 

Copyright@2018 Chitralahari | All Rights Reserved. Photo Journalist K.S. Mokshendra,