ಕರುಳಕುಡಿ ರಕ್ಷಣೆಗೆ ಅಮ್ಮನ ಹೋರಾಟ
**** ಹೆಣ್ಣು ಭ್ರೂಣಹತ್ಯೆ ಮಾಡುವುದು ಅಪರಾಧವೆಂದು ಸರ್ಕಾರವು ಆದೇಶ ಹೊರಡಿಸಿದೆ. ಆದರೂ ಕೆಲವೊಂದು ಕಡೆ ಗುಟ್ಟಾಗಿ ಇದನ್ನು ಮಾಡುತ್ತಾ ಬಂದಿದ್ದಾರೆ. ಮುಂದುವರೆದ ಸಮಾಜದಲ್ಲಿ ಸಮಾನತೆಯ ವಿಚಾರದಲ್ಲಿ ಅಸಮಾನತೆ ಇದ್ದೇ ಇದೆ. ಹೆಣ್ಣನ್ನು ಭಾರತಮಾತೆ ಹೋಲಿಸಿದರೂ, ಅವಳಿಗೆ ಶೋಷಣೆ ಆಗುತ್ತಿರುವುದನ್ನು ಕೇಳುತ್ತಿದ್ದೇವೆ. ಇಂತಹುದೇ ಅಂಶಗಳನ್ನು ಇಟ್ಟುಕೊಂಡು ‘ತಾರಿಣಿ’ ಎನ್ನುವ ಸಿನಿಮಾವೊಂದು ಬಂದಿದೆ.
ನಾಯಕಿ ಕೀರ್ತಿ (ಮಮತಾರಾವುತ್) ತನ್ನ ಜೀವನದ ಕಥೆಯನ್ನು ಚಿತ್ರರೂಪಕ್ಕೆ ತಂದಿದ್ದಾರೆ. ಈಕೆ ಒಬ್ಬಳದ್ದಲ್ಲ. ಈ ರೀತಿ ಶೋಷಣೆಗೊಳಗಾದ ಲಕ್ಷಾಂತರ ಮಹಿಳೆಯರ ಪ್ರತಿನಿದಿಯಾಗಿ ಕಾಣಿಸಿಕೊಂಡಿರುವುದು ವಿಶೇಷ. ಇದನ್ನು ತಡೆಗಟ್ಟುವಲ್ಲಿ ಎಷ್ಟೇ ಪ್ರತಿಭಟನೆಗಳು, ಹೋರಾಟಗಳು, ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೂ ದುಡ್ಡಿನ ಆಸೆಗಾಗಿ ವೈದ್ಯರು ಇಂತಹುದಕ್ಕೆ ಕುಮ್ಮಕ್ಕು ನೀಡುತ್ತಿರುತ್ತಾರೆ. ಸಿನಿಮಾದಲ್ಲಿ ಆಕೆ ತಾಯಿಯಾಗುತ್ತಾಳೆ. ಹೆಣ್ಣು ಜನಿಸುತ್ತದೆಂದು ತಿಳಿದ ಪತಿಯು ಅದನ್ನು ಕೊಲ್ಲಿಸಲು ಲಕ್ಷ ಲಕ್ಷ ಖರ್ಚು ಮಾಡಿಸುತ್ತಾನೆ. ಆದರೆ ಅಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬಳಿಂದ ಅವಳ ಜೀವನದಲ್ಲಿ ಹೊಸ ಬೆಳಕು ಮೂಡುತ್ತದೆ. ಮುಂದೆ ಗಂಡಿಗೆ ಸಮನಾಗಿ ಕುಟುಂಬ ನಿರ್ವಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ.
ಚಿತ್ರ ಪೂರ್ತಿ ಮಮತಾರಾವುತ್ ಅಭಿನಯ ಚೆನ್ನಾಗಿ ಬಂದಿದೆ. ಇವರೊಂದಿಗೆ ಭವಾನಿಪ್ರಕಾಶ್, ಡಾ.ಸುರೇಶ್‌ಕೊಟ್ಯಾನ್, ಸುಧಾಪ್ರಸನ್ನ, ಪ್ರಮೀಳಾಸುಬ್ರಮಣ್ಯಂ ಮುಂತಾದವರು ಗಮನ ಸೆಳೆಯುತ್ತಾರೆ. ನಿರ್ದೇಶಕ ಸಿದ್ದುಪೂರ್ಣಚಂದ್ರ ಎಲ್ಲವನ್ನು ಅದ್ಬುತವಾಗಿ ತೆರೆಮೇಲೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
****