Marigold.Reviews

Friday, April 05, 2024

104

ಚಿನ್ನದ ಬಿಸ್ಕಟ್ ಮಾರುವ ಹುಡುಗರ ಕಥೆ ವ್ಯಥೆ

       ‘ಮಾರಿ ಗೋಲ್ಡ್’ ಚಿತ್ರವು ನಿಜವಾದ ಬಂಗಾರದ ಬಿಸ್ಕೆಟ್ ಹಿಂದೆ ಬಿದ್ದವರ ಕಥೆಯಾಗಿದೆ. ಮೂವರು ಗೆಳೆಯರು ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಜೀವನ ಮಾಡಿಕೊಂಡಿರುತ್ತಾರೆ. ಅದರಲ್ಲಿ ಒಬ್ಬನು ದೊಡ್ಡದೊಂದು ಸ್ಕೆಚ್ ಹಾಕುತ್ತಾನೆ. ಸುಮಾರು ೨೦ ಕೋಟಿ ಬೆಲೆಬಾಳುವ ಬಿಸ್ಕೆಟ್ ಕದ್ದು ನೆಮ್ಮದಿಯಾಗಿರಬಹುದು ಎಂಬುದು ಆತನ ಲೆಕ್ಕಚಾರವಾಗಿರುತ್ತದೆ. ಇವರೊಂದಿಗೆ ಬಾರ್‌ದಲ್ಲಿ ಡ್ಯಾನ್ಸರ್ ಆಗಿದ್ದವಳು ಸೇರಿಕೊಳ್ಳುತ್ತಾಳೆ. ನಾಲ್ವರು ಅದನ್ನು ಕದ್ದ ಮೇಲೆ ಬದುಕಿನಲ್ಲಿ ಸೆಟ್ಲ್ ಆಗುತ್ತಾರಾ ಇಲ್ವಾ ಅನ್ನೋದನ್ನು ಸುಂದರವಾಗಿ ನಿರೂಪಿಸಲಾಗಿದೆ. ಡಿ ಮ್ಯಾನಿಟೈಸೇಷನ್ ಜಾರಿಯಾದ ಸಮಯದಲ್ಲಿ ನಡೆದಿರುವ ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಮೇಲ್ನೋಟಕ್ಕೆ ಸಿಂಪಲ್ ಟೈಟಲ್  ಅನಿಸಿದರೂ ಕುತೂಹಲದ ಸನ್ನಿವೇಶಗಳು ನೋಡುಗರಿಗೆ ಇಷ್ಟವಾಗುವಂತೆ ನಿರ್ದೇಶಕ ರಾಘವೇಂದ್ರ.ಎಂ.ನಾಯ್ಕ್ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಹಣದ ದುರಾಸೆ, ಸ್ನೇಹದ ಮಹತ್ವವನ್ನು ಸಂದೇಶದ ಮೂಲಕ ಹೇಳಿರುವುದು ಅರ್ಥಪೂರ್ಣ ಅನಿಸುತ್ತದೆ.

     ದಿಗಂತ್ ನಾಯಕ. ಸಂಗೀತ ಶೃಂಗೇರಿ ನಾಯಕಿ. ಉಳಿದಂತೆ ಯಶ್‌ಶೆಟ್ಟಿ, ಸಂಪತ್‌ಮೈತ್ರಿಯಾ, ಭಜರಂಗಶೆಟ್ಟಿ, ಕಾಕ್ರೋಚ್‌ಸುಧಿ, ವಜ್ರಾಂಗ್‌ಶೆಟ್ಟಿ. ಬಲರಾಜವಾಡಿ, ಮಹಂತೇಶ್, ಸಂದೀಪ್‌ಮಲಾನಿ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.  ಯೋಗರಾಜಭಟ್-ವಿಜಯಭರಮಸಾಗರ ಸಾಹಿತ್ಯಕ್ಕೆ ವೀರ್‌ಸಮರ್ಥ್ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಸಂಭಾಷಣೆ ರಘುನಿಡುವಳ್ಳಿ, ಇವೆಲ್ಲವೂ ಇದಕ್ಕೆ ಪೂರಕವಾಗಿದೆ. ಆರ್.ವಿ.ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ರಘುವರ್ಧನ್ ನಿರ್ಮಾಣ ಮಾಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,