ಪ್ರೀತಿ ದ್ವೇಷ ಸಂಬಂಧಗಳ ವ್ಯಾಖ್ಯಾನ
ಆತ ಅನಾಥ ರೌಡಿ. ಯಾರಿಗೂ ಡೋಂಟ್‌ಕೇರ್ ಅನ್ನುವವನು. ಪ್ರೀತಿಯಲ್ಲಿ ಬಿದ್ದಾಗ ಎಲ್ಲವನ್ನು ಮರೆತು ಸಾತ್ವಿಕ ಜೀವನ ನಡೆಸಲು ತೀರ್ಮಾನಿಸುತ್ತಾನೆ. ಇದರ ಪ್ರತಿಫಲ ದಾಂಪತ್ಯ ಜೀವನದಲ್ಲಿ ಮಗುವೊಂದು ಸಾಕ್ಷಿಯಾಗುತ್ತದೆ. ಇಲ್ಲಿಯವರೆಗೂ ಕಥೆ ಒಂದು ರೂಪ ಪಡೆದುಕೊಂಡರೆ, ವಿರಾಮದ ನಂತರ ಏಡ್ಸ್, ಹೆಣ್ಣು ಮಕ್ಕಳ ಕಳ್ಳ ಸಾಗಣೆ ಸೇರಿದಂತೆ ಹಲವಾರು ಮಾಫಿಯಾಗಳ ಬಗ್ಗೆ ಸನ್ನಿವೇಶಗಳು ತೆರೆದುಕೊಳ್ಳುತ್ತದೆ. ಇದರ ಮಧ್ಯೆ ಪತ್ನಿಯ ಖಾಯಿಲೆಯಿಂದ ಆಕೆಯನ್ನು ಉಳಿಸಿಕೊಳ್ಳಲು ಹೇಗೆಲ್ಲಾ ಹೋರಾಡುತ್ತಾನೆ ಎನ್ನುವ ಗಂಭೀರ ದೃಶ್ಯಗಳು ಬರುತ್ತದೆ. ಕ್ರೂರತನ, ಲವ್, ಬೆಸುಗೆ, ಬಾಂಧವ್ಯ ಹೀಗೆ ಆಯಾ ಕಾಲಘಟ್ಟಕ್ಕೆ ಹೊಂದಿಕೊಂಡಂತೆ ಪಾತ್ರಗಳು ಸೃಷ್ಟಿಯಾಗಿದೆ.
ನಾಯಕ ವಸಿಷ್ಠಸಿಂಹ ಇಡೀ ಚಿತ್ರವನ್ನು ಹೆಗಲಮೇಲೆ ಹೊತ್ತುಕೊಂಡು, ನೋಡುಗರನ್ನು ಸೀಟಿನಲ್ಲಿ ಕೂರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ನಿರ್ದೇಶಕ ಚೇತನ್‌ಕೇಶವ ಸಾಥ್ ನೀಡಿದ್ದಾರೆ. ಆಮದು ನಟಿ ಸ್ಟೆಫಿಪಟೇಲ್ ನೋಡಲು ಸುಂದರವಾಗಿದ್ದಾರೆ. ಬಾಲನಟಿ ವಂಶಿಕಾ ಗಮನಸೆಳೆಯುತ್ತರೆ. ನಗಿಸಲು ಸಾಧುಕೋಕಿಲ, ಜವಬ್ದಾರಿ ತಂದೆಯಾಗಿ ಅಚ್ಯುತಕುಮಾರ್, ಇವರೊಂದಿಗೆ ಸಮೀಕ್ಷಾ, ದತ್ತಣ್ಣ, ಚಿತ್ಕಲಾಬಿರಾದಾರ್, ಮಾಳವಿಕಾ ಸೇರಿದಂತೆ ಹಲವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ.
ಅನೂಪ್‌ಸೀಳನ್ ಸಂಗೀತದಲ್ಲಿ ಹಾಡುಗಳು ಕೇಳಬಲ್. ಅಶ್ವಿನ್‌ಕೆನಡಿ ಕ್ಯಾಮಾರ ಕಣ್ಣಿಗೆ ತಂಪು ಕೊಡುತ್ತದೆ. ಎಂ.ಆರ್.ರವೀಂದ್ರಕುಮಾರ್ ಬಂಡವಾಳ ಹೂಡಿದ್ದಾರೆ.
****