ಗ್ರಾಮೀಣ ಭಾಗದ ಸಂಭವಾಮಿ ಯುಗೇ ಯುಗೇ
ವಿದ್ಯೆ, ಬದುಕು ಕಟ್ಟಿಕೊಳ್ಳಲು ಕಾರಣವಾದ ಊರಿನ ಜನರಿಗೆ ಮಗ ಸೇವೆ ಮಾಡಬೇಕೆಂದು ಆಸೆ ಪಡುವ ಅಮ್ಮನ ಕನಸಿಗೆ, ಅವನು ಪಟ್ಟಣ ಬಿಟ್ಟು ಹಳ್ಳಿಗೆ ಬಂದು ಜನರ ಕಷ್ಟಕ್ಕೆ ಸ್ಪಂದಿಸುತ್ತಾನೆ. ಆಗ ಅಲ್ಲಿನ ಊರಿನವರ ದ್ವೇಷಕ್ಕೂ ಕಾರಣನಾಗುತ್ತಾನೆ. ಮುಂದೆ ಚುನಾವಣೆಗೆ ನಿಂತು ಅಧ್ಯಕ್ಷಗಾದಿ ಅಲಂಕರಿಸುತ್ತಾನೆ. ಈತನ ಬೆಳವಣಿಗೆ ಬೇರೆಯವರಿಗೆ ಅಸೂಯೆ ಹುಟ್ಟುತ್ತದೆ. ಸರ್ಕಾರದಿಂದ ಬರೋ ಅನುದಾನವನ್ನು ಜನರಿಗೆ ತಲುಪುವಂತೆ ಮಾಡುವಾಗ, ಅದನ್ನು ಕಬಳಿಸುವವರಿಗೂ ಕಡಿವಾಣ ಹಾಕುತ್ತಾನೆ. ಒಂದಷ್ಟು ನುಂಗಣ್ಣಗಳೆಲ್ಲ ಸೇರಿ ಇವನ್ನು ಮಟ್ಟ ಹಾಕಲು ನಿರ್ಧರಿಸುತ್ತಾರೆ. ಇದರ ಮಧ್ಯೆ ಜಿಲ್ಲಾಧಿಕಾರಿ ಕೊಲೆಯಾಗುತ್ತದೆ. ಇದನ್ನು ಮಾಡಿಸಿದ್ದು ಇವನೇ ಅಂತ ಸುದ್ದಿ ಹಬ್ಬುತ್ತದೆ. ಕೊನೆಗೆ ಎಲ್ಲವನ್ನು ಯಾವ ರೀತಿ ನಿಭಾಯಿಸುತ್ತಾನೆ ಎಂಬುದನ್ನು ‘ಸಂಭವಾಮಿ ಯುಗೇ ಯುಗೇ’ ಚಿತ್ರದಲ್ಲಿ ಅರ್ಥಪೂರ್ಣವಾಗಿ ತೋರಿಸಲಾಗಿದೆ.
ಚೇತನ್ ಚಂದಶೇಖರಶೆಟ್ಟಿ ನಿರ್ದೇಶನದಲ್ಲಿ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿದೆ. ನಾಯಕ ಜಯಶೆಟ್ಟಿ ಎರಡನೇ ಪ್ರಯತ್ನದಲ್ಲಿ ಸುಧಾರಿಸಿದ್ದಾರೆ. ನಿಶಾರಜಪೂತ್ ನಾಯಕಿ. ತಾರಾಗಣದಲ್ಲಿ ಸುಧಾರಾಣಿ ಅಶೋಕ್‌ಕುಮಾರ್, ಮಧುರಗೌಡ, ರಾಜೇಂದ್ರಕಾರಂತ್, ಅಶ್ವಿನ್‌ಹಾಸನ್, ವಿಕ್ಟರಿವಾಸು ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಪೂರನ್‌ಶೆಟ್ಟಿಗಾರ್ ಸಂಗೀತ, ರಾಜು ಹೆಮ್ಮಿಗಪುರ ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ. ನಿಮಾಪಕಿ ಪ್ರತಿಭಾ ಹೊಸ ಅನುಭವದಲ್ಲೇ ಉತ್ತಮ ಸಿನಿಮಾ ನೀಡಿದ್ದಾರೆ ಎನ್ನಬಹುದು.
****