ಯುವಕರ ಚಿಲ್ಲಿ ಚಿಕನ್
‘ಚಿಲ್ಲಿ ಚಿಕನ್’ ರುಚಿಯಾದಷ್ಟೇ ಚಿತ್ರ ನೋಡುವುದಕ್ಕೂ ಮಜಾ ಕೊಡುತ್ತದೆ. ಓಬೆಟ್, ಅಸ್ಸಾಂ ಪ್ರದೇಶಗಳಿಂದ ಯುವಕರು ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಯಾವುದೋ ಕಟ್ಟಡದ ಟರೇಸ್ ಮೇಲೆ ಬಾಡಿಗೆಯಲ್ಲಿ ವಾಸವಾಗಿದ್ದು, ಆಗಾಗ ರೀಲ್ಸ್ ಮಾಡುತ್ತಾ ಇದೇ ಜೀವನ ಅಂದುಕೊಂಡಿರುತ್ತಾರೆ. ಆಕಸ್ಮಿಕವಾಗಿ ಬರುವ ಘಟನೆ ಇವರೆಲ್ಲರನ್ನು ಯೋಚನೆ ಮಾಡುವಂತೆ ಆಗುತ್ತದೆ. ಆ ನಂತರ ಹುಡುಗರ ಬಾಳಲ್ಲಿ ಏನೆಲ್ಲಾ ಅವಘಡಗಳು ಸಂಭವಿಸುತ್ತವೆ. ಇದೆಲ್ಲಾವನ್ನು ಹೇಗೆ ಎದುರಿಸುತ್ತಾರೆ. ಅಂತಿಮವಾಗಿ ಸಪಲರಾಗುತ್ತಾರಾ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ನಿರ್ದೇಶಕ ಪೀತಕ್‌ಪ್ರಜೋಶ್ ಸೃಷ್ಟಿಸಿರುವ ಸನ್ನಿವೇಶಗಳು ನೋಡುಗರಿಗೆ ಬೋರ್ ತರಿಸುವುದಿಲ್ಲ.
ಸಿಲಿಕಾನ್ ಸಿಟಿ ಅಂಶಗಳು ಇದ್ದರೂ, ಬೇರೆ ಬೇರೆ ರಾಜ್ಯಗಳ ಕಲಾವಿದರು, ತಂತ್ರಜ್ಘರು ಇರುವುದು ವಿಶೇಷ. ತಾರಾಗಣದಲ್ಲಿ ಬಿ.ವಿ.ಶೃಂಗಾ, ರಿನಿ, ನಿತ್ಯಾಶ್ರೀ, ಬಿಜೌತಾಂಜಿಂ, ವಿಕ್ಟರ್‌ತೌಡಮ್, ಜಿಂಪಾಭುಟಿಯಾ, ಟಾಮ್‌ಥಿನ್ ಥೋಕ್ ಚೋಮ್, ಹಿರಾಕ್‌ಸೋನೊವಾಲ್ ಮುಂತಾದವರು ನಟಿಸಿದ್ದಾರೆ. ಸಿದ್ದಾಂತ್‌ಸುಂದರ್ ಸಂಗೀತ, ಶ್ರೀಶ್‌ತೋಮರ್ ಛಾಯಾಗ್ರಹಣ, ತ್ರಿಲೋಕ್-ಕೆಎಎಸ್ ಸಂಭಾಷಣೆ ಮನ ಮುಟ್ಟುತ್ತದೆ. ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾನಂಬಿಯಾರ್ ನಿರ್ಮಾಣ ಮಾಡಿದ್ದಾರೆ.
****