Kaagada.Reviews

Wednesday, July 03, 2024

132

 

ಮನಗೆಲ್ಲುವ ಪ್ರೇಮದ ಕಾಗದ

 

ಚಿತ್ರ: ಕಾಗದ

ನಿರ್ದೇಶಕ: ರಂಜಿತ್ ಕುಮಾರ್ ಗೌಡ

ತಾರಾಗಣ: ಆದಿತ್ಯ ಕೆರೇಗೌಡ, ಅಂಕಿತಾ ಜಯರಾಮ್

 

 

ಎರಡು ಧರ್ಮಗಳ ಯುವ ಪ್ರೇಮಿಗಳ ನಡುವಿನ ಪ್ರೇಮಕತೆಯ ಚಿತ್ರಗಳು ಸಾಕಷ್ಟು ಬಂದಿವೆ. ಅಂಥದೇ ಒಂದು ವಿಷಯದೊಂದಿಗೆ ಬಂದರೂ ಚಿತ್ರಕಲೆಯಲ್ಲಿ ವಿಭಿನ್ನತೆ ತೋರಿಸುವ ಪ್ರಯತ್ನದಲ್ಲಿ ಮೂಡಿರುವ ಸಿನಿಮಾವೇ ಕಾಗದ.

 

ಚಿತ್ರದ ನಾಯಕ ಕಾಲೇಜಿನಲ್ಲಿ ಕಲಿಯುವ ಗೌಡರ ಹುಡುಗ. ನಾಯಕಿ ಆತನ ಜತೆಗೆ ಕಲಿಯುವ ಮುಸ್ಲಿಂ ವಿದ್ಯಾರ್ಥಿನಿ. ಹುಡುಗನ ಊರಿಗೆ ಹೊಸದಾಗಿ ಬರುವ ಹುಡುಗಿಗೆ ಕಾಲೇಜಲ್ಲೇ ಈತನ ಪರಿಚಯವಾಗಿರುತ್ತದೆ. ಓದಿನ ಆಸಕ್ತಿ ಇವರನ್ನು ಪ್ರೇಮಿಗಳನ್ನಾಗಿಸುತ್ತದೆ.

ಈ ಜೋಡಿ ವಾಸವಾಗಿರುವ ಊರು ತುಂಬು ಸೌಹಾರ್ದತೆಗೆ ಹೆಸರು. ಇಲ್ಲಿ ಪ್ರಕರಣಗಳೇ ನಡೆಯುವುದಿಲ್ಲ. ಈ ಮುಸಲ್ಮಾನ ಹುಡುಗಿಯ ತಂದೆ ಕೂಡ ಹಿಂದೂಗಳ ಜತೆಗೆ ಅಪಾರವಾಗಿ ಹೊಂದಿರುವಾತ. ಹುಡುಗಿಯ ಚಿಕ್ಕಮ್ಮ ಕೂಡ ಚೆನ್ನಾಗಿ ಕಲಿತು ಟೀಚರ್ ವೃತ್ತಿಯಲ್ಲಿ ಇರುವವಳು. ತಂದೆಗೆ ಮಗಳನ್ನು ಕಲಿತು ಪೈಲಟ್ ಮಾಡುವ ಕನಸು. ಆದರೆ ಈ ಮಗಳು ಮಾತ್ರ ಪ್ರೇಮದಲ್ಲೇ ಹಾರಾಡುತ್ತಿರುತ್ತಾಳೆ. ಈಕೆಯ ಚಿಕ್ಕಮ್ಮ ಕೂಡ ಪ್ರೇಮ ವಿವಾಹವಾಗಿರುತ್ತಾಳೆ. ಆದರೆ ವಿವಾಹದ ಬಳಿಕ ವಿಚ್ಛೇದಿತಳಾಗಿರುತ್ತಾಳೆ. ಇವೆಲ್ಲ ಕಾರಣದಿಂದಾಗಿ ಈ ಮುಸ್ಲಿಂ ಹುಡುಗಿ ಮತ್ತು ಗೌಡರ ಹುಡುಗನ ವಿವಾಹಕ್ಕೆ ಅಡ್ಡಿ ಆತಂಕ.

 

ಇಷ್ಟೆಲ್ಲ ಸಮಸ್ಯೆಗಳ ನಡುವೆ ಇವರಿಬ್ಬರ ಪ್ರೇಮ ಸಫಲವಾಗುತ್ತಾ? ಎನ್ನುವುದು ಮುಖ್ಯ ಕತೆ. ಗೌಡರ ಹುಡುಗನಾಗಿ ಆದಿತ್ಯ  ಭರವಸೆಯ ನಟನೆ ನೀಡಿದ್ದಾರೆ. ಮುಸ್ಲಿಂ ಹುಡುಗಿಯಾಗಿ ಅಂಕಿತಾ ಜಯರಾಮ್ ನಟನೆ ಅನನ್ಯ. ಅಂಕಿತಾ ಚಿಕ್ಕಮ್ಮನ ಪಾತ್ರದಲ್ಲಿ ನೇಹಾ ಪಾಟೀಲ್ ರೀ ಎಂಟ್ರಿ ನೀಡಿದ್ದಾರೆ. ಟೀಚರ್ ಪಾತ್ರದಲ್ಲಿ ಕಾಣಿಸಿರುವ ನೇಹಾ ಸಿಕ್ಕ ಅವಕಾಶವನ್ನು ಚೊಕ್ಕವಾಗಿ ಬಳಸಿಕೊಂಡಿದ್ದಾರೆ.

 

ಒಂದೊಳ್ಳೆಯ ಕಾಲೇಜ್ ಲವ್ ಸ್ಟೋರಿ ನೋಡಲು ಬಯಸುವವರು ಖಂಡಿತವಾಗಿ ಈ ಸಿನಿಮಾವನ್ನು ನೋಡಬಹುದು.

Copyright@2018 Chitralahari | All Rights Reserved. Photo Journalist K.S. Mokshendra,