ರವಿಚಂದ್ರನ್ ಜಡ್ಜ್ಮೆಂಟ್****
‘ದ ಜಡ್ಜ್‌ಮೆಂಟ್’ ಸಿನಿಮಾವು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ನಡೆಯುವ ಕೆಲ ಬೆಳವಣಿಗೆಗಳು ಮತ್ತು ಬದಲಾವಣೆಗಳ ಸುತ್ತ ಚಿತ್ರವು ಸಾಗುತ್ತದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಗೋವಿಂದ್ ಸಾಮಾಜಿಕ ಹೋರಾಟಗಾರ್ತಿಯೊಬ್ಬಳ ಕೊಲೆಯ ಕೇಸಲ್ಲಿ ಹೇಗೆ ಮೋಸ ಹೋಗುತ್ತಾರೆ. ಆರೋಪಿ ತಪ್ಪಿತಸ್ಥನೆಂದು ಭಾವಿಸಿ ಆತನಿಗೆ ಶಿಕ್ಷೆ ಕೊಡಿಸಲು ಮುಂದಾಗುತ್ತಾರೆ. ಮುಂದೆ ಆತ ನಿರಪರಾಧಿ ಎಂದು ತಿಳಿದು ಶಿಕ್ಷೆಯಿಂದ ತಪ್ಪಿಸಲು ಯಾವ ರೀತಿ ವಾದ ಮಂಡಿಸುತ್ತಾರೆ. ಮುಂದೆ ಏನೆಲ್ಲಾ ನಡೆಯಿತು. ನಿರಪರಾಧಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರೇ? ನ್ಯಾಯಕ್ಕಾಗಿ ಹೋರಾಟ ನಡೆಸುವ ಹಲವಾರು ಕೋರ್ಟ್ ಕಥೆಗಳು ಬಂದಿವೆ. ಆದರೆ ಇದರಲ್ಲಿ ವಿನೂತನವಾಗಿ ಸನ್ನಿವೇಶಗಳನ್ನು ಸೃಷ್ಟಿಸಿರುವುದು ಎದ್ದು ಕಾಣುತ್ತದೆ. ನ್ಯಾಯಾಂಗದ ವಿಚಾರವಾಗಿ ಸಂಶೋಧನೆ ಮಾಡಿ, ಅದನ್ನು ಚಿತ್ರಕಥೆಗೆ ತಂದಿರುವ ನಿರ್ದೇಶಕ ಗುರುರಾಜ ಕುಲಕರ್ಣಿ ಶ್ರಮ ರದೆ ಮೇಲೆ ಕಾಣಿಸುತ್ತದೆ.
ಕ್ರೇಜಿಸ್ಟಾರ್ ರವಿಚಂದ್ರನ್ ಪಿಪಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿದೇಶದಿಂದ ಬಂದು ಯಾವುದೋ ಕಾರಣಕ್ಕೆ ಸಿಲುಕಿಕೊಳ್ಳುವ ಧನ್ಯಾರಾಮ್‌ಕುಮಾರ್, ರವಿಚಂದ್ರನ್ ಪತ್ನಿಯಾಗಿ ಮೇಘನಾಗಾಂವ್ಕರ್, ಶಿಕ್ಷೆಗೆ ಗುರಿಯಾಗುವ ದಿಗಂತ್ ಉಳಿದಂತೆ ಲಕ್ಷೀಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್‌ಬೆಳವಾಡಿ, ಕೃಷ್ಣಹೆಬ್ಬಾಳೆ, ರವಿಶಂಕರಗೌಡ, ರೇಖಾಕೂಡ್ಲಗಿ, ರೂಪರಾಯಪ್ಪ, ಮುಂತಾದವರು ಅಭಿನಯಿಸಿದ್ದಾರೆ. ಸಂಗೀತ ಅನೂಪ್‌ಸೀಳನ್, ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಸಂಕಲನ ಬಿ.ಎಸ್.ಕೆಂಪರಾಜು, ಸಂಭಾಷಣೆಗೆ ಎಂ.ಎಸ್.ರಮೇಶ್ ಪೆನ್ನು ಕೆಲಸ ಮಾಡಿದೆ. ಜಿ೯ ಕಮ್ಯುನಿಕೇಶನ್ ಮೀಡಿಯಾ ಅಂಡ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಶರದ.ಬಿ.ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಪಾಟೀಲ, ರಾಜೇಶ್ವರಿ.ಆರ್.ಸುನಿಲ ಮತ್ತು ಪ್ರತಿಮಾ ಬಿರಾದರ ಬಂಡವಾಳ ಹೂಡಿದ್ದಾರೆ.
****