ಪ್ರೀತಿ ಮತ್ತು ದ್ವೇಷ ಸಮ್ಮಿಲನ ****
ಗೆಳೆಯರಿಬ್ಬರ ನಡುವೆ ಚೆಂದದ ಹುಡುಗಿ ಎಂಟ್ರಿಯಾದರೆ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದನ್ನು ಸೆಸ್ಪನ್ಸ್, ಥ್ರಿಲ್ಲರ್ ರೂಪದಲ್ಲಿ ‘ಎವಿಡೆನ್ಸ್’ ಚಿತ್ರದಲ್ಲಿ ತೋರಿಸಲಾಗಿದೆ. ಪೋಲೀಸ್ ಕೇಸ್‌ದಲ್ಲಿ ಅದೊಂದು ಆತ್ನಹತ್ಯೆ ಅಂತ ದಾಖಲು ಆಗಿರುತ್ತದೆ. ಮುಂದೆ ಅದು ಕೊಲೆಯೂ ಆಗಿರಬಹುದು ಎಂಬ ಅನುಮಾನ ಬಂದಾಗ ತನಿಖಾಧಿಕಾರಿಗಳು ಆರೋಪಿಯನ್ನು ಯಾವ ರೀತಿ ಇಂಟರಾಗೇಷನ್ ಮಾಡಿ ಸಾಕ್ಷ್ಯಾಧಾರಗಳನ್ನು ಹೇಗೆ ಹೊರ ತೆಗೆಯುತ್ತಾರೆ. ವ್ಯಕ್ತಿಯೊಬ್ಬನಿಗೆ ಸಿಗುವ ಬ್ಯಾಗ್, ಅದರಲ್ಲಿದ್ದ ಕ್ಯಾಮೆರಾ, ವಿಡಿಯೋ ಇವೆಲ್ಲವು ಸಿಕ್ಕು ಕಥೆಯು ತೆರೆದುಕೊಳ್ಳುತ್ತದೆ. ಆದರೆ ಕೊಲೆಯನ್ನು ಮಾಡಿದವರು ಯಾರು? ಏತಕ್ಕೆ ಮಾಡಿರುತ್ತಾರೆ. ಇಂತಹ ಅಂಶಗಳು ನೋಡುಗನಿಗೆ ಕುತೂಹಲ ಹುಟ್ಟಿಸುತ್ತದೆ.
ನಿರ್ದೇಶಕ ಪ್ರವೀಣ್ ಸನ್ನಿವೇಶಗಳನ್ನು ಹೂ ಪೋಣಿಸಿದಂತೆ ಸೃಷ್ಟಿಸಿರುವುದು ತೆರೆ ಮೇಲೆ ಕಾಣಿಸಿದೆ. ತನಿಖಾಧಿಕಾರಿಯಾಗಿ ಮಾನಸಜೋಶಿ ಗಮನ ಸೆಳೆಯುತ್ತಾರೆ. ಯುವ ಜೋಡಿಗಳಾಗಿ ಆಕರ್ಷ್ ಆದಿತ್ಯ, ರಚಿತಾ ಉಳಿದಂತೆ ರೋಬೋ ಗಣೇಶ್ ಮುಂತಾದವರು ಅಭಿನಯಿಸಿದ್ದಾರೆ. ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತದಲ್ಲಿ ‘ಅಯ್ಯಯ್ಯೋ ಅರೆಮನಕೆ’ ಗೀತೆ ಇಂಪಾಗಿದೆ. ಒಟ್ಟಿನಲ್ಲಿ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.
****