Chef Chidambambara.Reviews

Friday, June 14, 2024

68

ಡಾರ್ಕ್ ಕಾಮಿಡಿ ಚೆಫ್ ಚಿದಂಬರ

      ‘ಚೆಫ್ ಚಿದಂಬರ’ ಚಿತ್ರವು ಡಾರ್ಕ್ ಕಾಮಿಡಿ, ಥ್ರಿಲ್ಲರ್ ಕಥೆಯನ್ನು ಹೇಳ ಹೊರಟಿದೆ. ಕಥಾನಾಯಕ ಚಿದಂಬರನಿಗೆ ರುಚಿಯಾದ ಅಡುಗೆಯನ್ನು ಗ್ರಾಹಕರಿಗೆ ನೀಡಬೇಕು. ಅದಕ್ಕಾಗಿ ಶ್ರಮಿಸುತ್ತಾ ತನ್ನದೆ ಹಾದಯಲ್ಲಿ ಸಾಗುತ್ತಿದ್ದವನಿಗೆ ಸಡನ್ ಆಗಿ ಶಾಕ್ ಆಗುವಂತಹ ಘಟನೆ ನಡೆಯುತ್ತದೆ. ಇದರಿಂದ ಅವನಿಗೆ ದೊಡ್ಡ ತಲೆಬಿಸಿ ಶುರುವಾಗುತ್ತದೆ. ಇದೆಲ್ಲಾವನ್ನು ತನ್ನ ಬುದ್ದಿವಂತಿಕೆಯಿಂದ ಹೇಗೆ ನಿಭಾಯಿಸುತ್ತಾನೆ. ಆರೋಪದಿಂದ ಮುಕ್ತನಾಗಿ ಹೊರ ಬರುತ್ತಾನಾ?. ಇನ್ನೊಬ್ಬರ ಆಟದ ದಾಳವಾದಾಗ ಆತನ ಪರಿಪಾಟಲು ಏನು ಎಂಬುದು ಕುತೂಹಲಕಾರಿಯಾಗಿದೆ.

     ನಿರ್ದೇಶಕ ಎಂ.ಆನಂದರಾಜ್ ಸನ್ನಿವೇಶಗಳನ್ನು ಹೂ ಪೋಣಿಸಿದಂತೆ ಏಣೆದಿರುವುದು ತೆರೆ ಮೇಲೆ ಅವರ ಶ್ರಮ ಕಾಣಿಸುತ್ತದೆ. ಶೀರ್ಷಿಕೆ ಹೆಸರಿನಲ್ಲಿ ಅನಿರುದ್ದ್ ನಟನೆ ಮೋಸ ಮಾಡಿಲ್ಲ. ಗ್ಲಾಮರ್ ಬೊಂಬೆಗಳಾದ ನಿಧಿಸುಬ್ಬಯ್ಯ ಮತ್ತು ರೆಚೆಲ್‌ಡೇವಿಡ್ ಪಾತ್ರಗಳು ಭಿನ್ನವಾಗಿದೆ. ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್, ಶಿವಮಣಿ, ಮಹಾಂತೇಶ್ ಮುಂತಾದವರು ನಟಿಸಿದ್ದಾರೆ. ಗಣೇಶ್‌ಪರಶುರಾಮ್ ಸಂಭಾಷಣೆ ಚೂಪಾಗಿದ್ದು, ರಿತ್ವಿಕ್‌ಮುರಳಿದರ್ ಸಂಗೀತ ಮೋಡಿ ಮಾಡಿದೆ. ಇಡೀ ಸಿನಿಮಾವು ಕ್ಲೈಮಾಕ್ಸ್‌ದಲ್ಲಿ ನಿಂತುಕೊಂಡಿದೆ. ಅದು ಏನು ಎಂಬುದು ಚಿತ್ರಮಂದಿರಕ್ಕೆ ಬಂದರೆ ತಿಳಿಯುತ್ತದೆ. ದಮ್ತಿ ಪಿಕ್ಚರ‍್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.

****       

 

Copyright@2018 Chitralahari | All Rights Reserved. Photo Journalist K.S. Mokshendra,