ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಭೀಮ*****
ದುನಿಯಾವಿಜಯ್ ನಿರ್ದೇಶನ ಮತ್ತು ನಾಯಕನಾಗಿ ನಟಿಸಿರುವ ‘ಭೀಮ’ ಚಿತ್ರವು ಪಕ್ಕಾ ಕಮರ್ಷಿಂiiಲ್ ಎಂಟರ್‌ಟೈನ್‌ಮೆಂಟ್ ಅದರಲ್ಲೂ ಮಾಸ್ ಪ್ರೇಕ್ಷಕರಿಗೆ ಖಂಡಿತಾ ಪೈಸಾ ವಸೂಲ್ ಆಗುತ್ತದೆ. ಪ್ರಸಕ್ತ ಸಮಾಜದಲ್ಲಿ ಅದರಲ್ಲೂ ಬೆಂಗಳೂರಿನಂಥ ಸ್ಥಳಗಳಲ್ಲಿ ಯುವಜನಾಂಗವು ಹೇಗೆ ಡ್ರಗ್ಸ್ ವ್ಯಸನದಿಂದ ಯಾವ ರೀತಿ ಕೆಟ್ಟ ಹಾದಿಗೆ ಹೋಗುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಹಲವು ನೈಜ ಘಟನೆಗಳು. ಇಂದಿನ ಯುವ ಪೀಳಿಗೆ ಹೊಸ ವ್ಯಸನಕ್ಕೆ ಒಳಗಾಗಿದ್ದಾರೆ. ಅದು ಪಾರ್ಥೇನಿಯಂ ಗಿಡಕ್ಕಿಂತಲೂ ವೇಗವಾಗಿ ಬೆಳೆದಿದೆ. ಮಾದಕ ವಸ್ತುಗಳು ಬಳಕೆ ಹೇಗೆ ಹೆಚ್ಚಾಗುತ್ತಿದೆ. ಇಂತಹ ವಿಷಯಗಳನ್ನು ಸ್ವತ: ನಿರ್ದೇಶಕರು ನೋಡಿ, ಇದರ ಕುರಿತಂತೆ ಒಂದಷ್ಟು ಸಂಶೋಧನೆ ನಡೆಸಿ ಅದನ್ನು ಚಿತ್ರರೂಪಕ್ಕೆ ಅಳವಡಿಸಿಕೊಂಡಿದ್ದಾರೆ. ಯುವಜನಾಂಗ ಹಾಳಾಗುತ್ತಿದೆ. ಅದನ್ನು ಹಾಳಾಗುವುದಕ್ಕೆ ನಾವುಗಳು ಬಿಡಬಾರದು ಎಂದು ಹೇಳುವ ಪ್ರಯತ್ನ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಧೂಮಪಾನ, ಮದ್ಯಪಾನ ಮತ್ತು ಮಾದಕ ವ್ಯಸನ ಆರೋಗ್ಯಕ್ಕೆ ಹಾನಿಕರ ಎಂಬ ಸಂದೇಶ ಇರಲಿದೆ.
ಶೀರ್ಷಿಕೆ ಹೆಸರಿನಲ್ಲಿ ದುನಿಯಾವಿಜಯ್ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ಪ್ರತಿ ದೃಶ್ಯಗಳನ್ನು ನೋಡುವಾಗ ತಿಳಿಯುತ್ತದೆ. ರಂಗಭೂಮಿ ಪ್ರತಿಭೆ ಅಶ್ವಿನಿಅಂಬರೀಷ್ ಸಣ್ಣ ಪಾತ್ರವಾದರೂ ಗಮನ ಸೆಳೆಯುತ್ತಾರೆ. ಖಳನಾಗಿ ಡ್ರ್ಯಾಗನ್ ಮಂಜು ಇವರೊಂದಿಗೆ ರಂಗಾಯಣರಘು, ಅಚ್ಯುತಕುಮಾರ್, ಸುಧಿಕಾಕ್ರೋಚ್, ಕಲ್ಯಾಣಿ, ಪ್ರಿಯಾಶಠಮರ್ಷಣ, ನಯನ ಸೂಡಾ ಮುಂತಾದವರು ಅಭಿನಯಿಸಿದ್ದಾರೆ. ಚರಣ್‌ರಾಜ್ ಸಂಗೀತ, ಶಿವಸೇನಾ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ದೀಪು.ಎಸ್.ಕುಮಾರ್ ಸಂಕಲನ, ಚೇತನ್‌ಡಿಸೋಜ-ವಿನೋದ್-ಗೌತಮ್ ಸಾಹಸ, ಧನು ನೃತ್ಯ ಇವೆಲ್ಲವು ಸಿನಿಮಾಕ್ಕೆ ಪೂರಕವಾಗಿದೆ. ಕೃಷ್ಣಸಾರ್ಥಕ್ ಮತ್ತು ಜಗದೀಶ್‌ಗೌಡ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
*****