ಪ್ರೀತಿ ಪ್ರತಿಭೆಗಳ ಸಮ್ಮಿಲನ*****
ಸಾಧನೆ ಮಾಡುವಾಗ ಅಡೆಗಳು, ಏಳು-ಬೀಳು, ಕಷ್ಟದ ಹಾದಿಗಳು ಬರುತ್ತವೆ. ಅದೆಲ್ಲಾವನ್ನು ಎದುರಿಸಿದರೆ ಸಾರ್ಥಕ ಕ್ಷಣಗಳು ನಮಗೆ ಸಿಗುತ್ತದೆ ಎಂಬುದನ್ನು ‘ಗೌರಿ’ ಚಿತ್ರದಲ್ಲಿ ತೋರಿಸಲಾಗಿದೆ. ಇಂದ್ರಜಿತ್ ಲಂಕೇಶ್ ಮಗ ಸಮರ್ಜಿತ್‌ಲಂಕೇಶ್‌ಗೆ ಸೂಟ್ ಆಗುವಂತೆ ಕಥೆಯನ್ನು ಏಣೆದು ನಿರ್ಮಾಣ ಜತೆಗೆ ನಿರ್ದೇಶನ ಮಾಡಿದ್ದಾರೆ. ಅಪ್ಪ ಸಿದ್ದಪ್ಪ ಮಗ ಗೌರಿ ತನ್ನಂತೆ ಆಗಬೇಕೆಂದು ಆಸೆ ಪಟ್ಟಿರುತ್ತಾನೆ. ಆದರೆ ಅವನು ಗಾಯಕನಾಗಬೇಕೆಂದು ಹೇಳಿದಾಗ ಇಬ್ಬರಲ್ಲಿ ಬಿರುಕು ಉಂಟಾಗುತ್ತದೆ. ಭವಿಷ್ಯದ ವೇದಿಕೆಯನ್ನು ಹುಡುಕುವಾಗ, ಮತ್ತೋಂದು ಕಡೆ ಸಮಂತಾ ಸ್ವಂತ ಬ್ಯಾಂಡ್ ಕಟ್ಟಿ ವೇದಿಕೆ ಸಿದ್ದ ಮಾಡಿಕೊಂಡಿರುತ್ತಾಳೆ. ಇಬ್ಬರ ಭೇಟಿ ಆಕಸ್ಮಿಕವಾದರೂ, ನಾಯಕನ ಬಾಳಲ್ಲಿ ಎದುರಾಗುವ ದೃಶ್ಯಗಳು, ಆಕೆಯ ಬದುಕಿನಲ್ಲಾದ ವಿಷಾದದ ಘಟನೆಯಲ್ಲಿ ಸಿನಿಮಾವು ಸಾಗುತ್ತದೆ. ಅಂತಿಮವಾಗಿ ಇಬ್ಬರು ಸೇರಿಕೊಂಡು ಯಾವ ರೀತಿಯಲ್ಲಿ ಕನಸನ್ನು ನನಸು ಮಾಡಿಕೊಳ್ಳುತ್ತಾರೆ ಎನ್ನುವುದು ಒನ್ ಲೈನ್ ಸ್ಟೋರಿಯಾಗಿದೆ.
ಹಳ್ಳಿ ಹುಡುಗ ಮತ್ತು ಸ್ಟೈಲಿಶ್ ಆಗಿ ಸಮರ್ಜಿತ್ ಲಂಕೇಶ್ ಡ್ಯಾನ್ಸ್ ಫೈಟ್‌ನಲ್ಲೂ ಮಿಂಚಿದ್ದಾರೆ. ಮೊದಲ ಚಿತ್ರದಲ್ಲೇ ಎಲ್ಲರಿಗೂ ಇಷ್ಟವಾಗುತ್ತದೆ. ಸಾನ್ಯಅಯ್ಯರ್ ಕಣ್ಣಿಗೆ ತಂಪು ಕೊಡುತ್ತಾ, ಅಭಿನಯದಲ್ಲೂ ಸೈ ಅನಿಸಿಕೊಂಡಿದ್ದಾರೆ. ಅತಿಥಿ ಪಾತ್ರಗಳಲ್ಲಿ ಪ್ರಿಯಾಂಕಉಪೇಂದ್ರ, ಮುಖ್ಯಮಂತ್ರಿ ಚಂದ್ರು, ಯೋಗೇಶ್, ಸುಚೇಂದ್ರಪ್ರಸಾದ್, ಅಕುಲ್‌ಬಾಲಾಜಿ, ಸಂಜನಾಆನಂದ್, ರಿಕ್ಕಿಕ್ರೇಜ್ ಪಾತ್ರಗಳು ಚಿತ್ರಕ್ಕೆ ಮತ್ತಷ್ಟು ಮೆರುಗು ಕೊಡುತ್ತದೆ. ಉಳಿದಂತೆ ಮಾನಸಿಸುದೀರ್, ಸಂಪತ್‌ಮೈತ್ರಿಯಾ, ಸಿಹಿಕಹಿ ಚಂದ್ರು ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ನಾಲ್ಕು ಹಿರಿಯ ಸಾಹಿತಿಗಳು ಬರೆದಿರುವ ಗೀತೆಗಳಿಗೆ ಜೆಸ್ಸಿಗಿಫ್ಟ್-ಚಂದನ್‌ಶೆಟ್ಟಿ-ಶಿವು ಬೆರಗಿ ಹಾಗೂ ಅನಿರುದ್‌ಶಾಸ್ತ್ರಿ ಸಂಗೀತ ಸಂಯೋಜಿಸಿದ್ದಾರೆ. ಕೃಷ್ಣಕುಮಾರ್ ಕ್ಯಾಮಾರ ಕೆಲಸವು ಇದಕ್ಕೆ ಪೂರಕವಾಗಿದೆ.
*****