ಕೃಷ್ಣನ ಕೈಚಳಕವು ನಗು ತರಿಸುತ್ತದೆ*****
ತಾನು ಮದುವೆಯಾದ ಪತ್ನಿಗೆ ಕಾಳು ಹಾಕುವ ಸನ್ನಿವೇಶಗಳನ್ನು ‘ಕೃಷ್ಣ ಪ್ರಣಯ ಸಖಿ’ ಚಿತ್ರದಲ್ಲಿ ಕಾಮಿಡಿಯಾಗಿ ತೋರಿಸಲಾಗಿದೆ. ಒಟ್ಟಾರೆಯಾಗಿ ಫ್ಯಾಮಿಲಿಗೋಸ್ಕರವೇ ಮಾಡಿದಂತಹ ಕಥೆ ಎಲ್ಲರಿಗೂ ಖುಷಿ ಕೊಡುತ್ತದೆ. ಆತ ಶ್ರಿಮಂತ ಉದ್ಯಮಿ. ಒಬ್ಬಳ ಮೇಲೆ ಲವ್ ಆಗಿ ಮದುವೆಯಾಗುತ್ತದೆ. ಇನ್ನೇನು ಸಂಭ್ರಮದಲ್ಲಿರುತ್ತಾರೆ ಎನ್ನುವಾಗ ಅಲ್ಲೊಂದು ಘೋರ ತಿರುವು ಪಡೆದುಕೊಳ್ಳುತ್ತದೆ. ಅಪಘಾತದಲ್ಲಿ ನೆನಪಿನ ಶಕ್ತಿಯನ್ನು ಕೆಳೆದುಕೊಳ್ಳುವ, ಅವನನ್ನು ನೋಡಿಕೊಳ್ಳುವ ಜವಬ್ದಾರಿಯು ದಾದಿಯಾಗಿ ಹೆಂಡತಿಗೆ ಬರುತ್ತದೆ. ಈ ನಡುವೆ ಮತ್ತೋಬ್ಬ ಹುಡುಗಿ ಎಂಟ್ರಿಯಾಗುತ್ತದೆ. ಅವಳು ಲವ್ ಮಾಡಲು ಶುರು ಮಾಡುತ್ತಾಳೆ. ಮುಂದಿನದನ್ನು ಹೇಳಿದರೆ ಮಜಾ ಸಿಗುವುದಿಲ್ಲ. ಅದಕ್ಕೆ ನೀವುಗಳು ಚಿತ್ರಮಂದಿರಕ್ಕೆ ಬಂದರೆ ಚೆನ್ನಾಗಿರುತ್ತದೆ.
ಕ್ರೈಂ, ಥ್ರಿಲ್ಲರ್ ಚಿತ್ರಗಳಿಗೆ ಹೆಸರು ಮಾಡಿದ್ದ ಶ್ರೀನಿವಾಸರಾಜು, ಈ ಜಾನರ್‌ನಿಂದ ಹೊರಬರಬೇಕೆಂದು ಪಣತೊಟ್ಟಂತೆ ಅಪ್ಪಟ ಪ್ರೇಮಕಥೆಯನ್ನು ಏಣೆಯುವಲ್ಲಿ ಸಪಲರಾಗಿದ್ದರೆ. ಹೈಲೈಟ್ಸ್‌ಗಳ ಜೊತೆಗೆ ತಿರುವುಗಳನ್ನು ನೀಡಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಪೂರ್ತಿ ಚಿತ್ರವನ್ನು ನಾಯಕ ಗಣೇಶ್ ಆವರಿಸಿಕೊಂಡು ನೋಡುಗರಿಗೆ ಮೋಸ ಮಾಡಿಲ್ಲ. ಮಾಳವಿಕಾನಾಯರ್ ನಾಯಕಿ. ಉಪನಾಯಕಿಯಾಗಿ ಶರಣ್ಯಶೆಟ್ಟಿಗೆ ಒಂದು ಹಾಡು ಇದೆ. ನಗಿಸಲು ರಂಗಾಯಣರಘು, ಸಾಧುಕೋಕಿಲ. ಉಳಿದಂತೆ ಅವಿನಾಶ್, ಶಶಿಕುಮಾರ್, ಕುರಿಪ್ರತಾಪ್, ರಾಮಕೃಷ್ಣ, ಶಿವಧ್ವಜ್ ಗಮನ ಸೆಳೆಯುತ್ತಾರೆ. ಅರ್ಜುನ್‌ಜನ್ಯಾ ಸಂಗೀತ, ಡಾ.ನಾಗೇಂದ್ರಪ್ರಸಾದ್ ಸಾಹಿತ್ಯದ ಗೀತೆಗಳು ಸಿನಿಮಾಕ್ಕೆ ಕಳಸ ಇಟ್ಟಂತೆ ಆಗಿದೆ. ಹೊಸದೇನು ಕಾಣದೆ ಇದ್ದರೂ ಪ್ರಸೆಂಟ್ ಮಾಡಿರುವ ರೀತಿ ವಿನೂತನವಾಗಿದೆ. ಪ್ರಶಾಂತ್.ಜಿ.ರುದ್ರಪ್ಪ ನಿರ್ಮಾಣವಿದೆ.
*****