ಪೋಲೀಸ್ ಬದುಕು ಬವಣೆಯ ಲಾಫಿಂಗ್ ಬುದ್ದ****
ರಿಶಬ್‌ಶೆಟ್ಟಿ ನಿರ್ಮಾಣ ಮಾಡಿರುವ ‘ಲಾಫಿಂಗ್ ಬುದ್ದ’ ಹಾಸ್ಯ ಚಿತ್ರದಲ್ಲಿ ಪೋಲೀಸರ ವೈಯಕ್ತಿಕ ಜೀವನ ಹೇಗಿರುತ್ತೆ. ಕಥೆಯಲ್ಲಿ ತಿಂಡಿಪೋತ ಗೋವರ್ಧನ, ಕೋಪಿಷ್ಟ ಮೇಲಾಧಿಕಾರಿ, ನಿವೃತ್ತಿ ಅಂಚಿನಲ್ಲಿರುವ ಸಹದ್ಯೋಗಿ, ಲವಲವಿಕೆಯ ಸಿಬ್ಬಂದಿ. ಇವರೆಲ್ಲರ ಕುಟುಂಬದಲ್ಲಿ ಏನೇನು ನಡೆಯುತ್ತದೆ. ಆರಕ್ಷಕನಿಗೂ ಫಿಟ್ ನೆಸ್ ಎಷ್ಟು ಮುಖ್ಯ. ಪೋಲೀಸರು ಎಂದರೆ ಕರುಣೆ ಇಲ್ಲದೆ ವರ್ತಿಸುವವರು ಎನ್ನುತ್ತಾರೆ. ಕೆಲವು ಸನ್ನಿವೇಶಗಳಲ್ಲಿ ಅದು ನಿಜ ಅನ್ನಿಸಬಹುದು. ಚುರುಕಾದ ಕಳ್ಳರನ್ನು ಹಿಡಿಯುವುದು ಅಷ್ಟು ಸುಲಭವಲ್ಲ. ಬೊಜ್ಜು ಜೋರಾಗಿ ಇದ್ದರೆ ಓಡುವುದು ಕಷ್ಟ. ಈ ಹಿಂದೆ ಪತ್ರಿಕೆಯೊಂದರಲ್ಲಿ ಪೋಲಿಸರ ದೇಹದ ಬಗ್ಗೆ ಸರಣಿ ಬರಹ ಪ್ರಕಟವಾಗಿತ್ತು. ಇದರಿಂದ ಪೋಲೀಸರಿಗೂ ಮುಜುಗರ ತರಿಸಿತ್ತು. ಇಲಾಖೆಯಲ್ಲಿ ಅವರು ಪಡುವ ಪರಿಪಾಟಲು, ಎದುರಿಸುವ ಸಂಕಷ್ಟಗಳನ್ನು ಚೆನ್ನಾಗಿ ತೋರಿಸಲಾಗಿದೆ.
ಲೇಖಕ ಜೋಗಿ ವಿರಚಿತ ಪುಸ್ತಕದಲ್ಲಿದ್ದ ಹಿಮಾಚಲ ಪ್ರದೇಶದಲ್ಲಿ ನಡೆದ ನೈಜ ಘಟನೆಯನ್ನು ಇಟ್ಟುಕೊಂಡು ಚಿತ್ರಕತೆಯನ್ನು ರೂಪಿಸಲಾಗಿದೆ. ‘ಹೀರೋ’ ನಿರ್ದೇಶನ ಮಾಡಿರುವ ಎಂ.ಭರತ್‌ರಾಜ್ ಅವರಿಗೆ ನಿರ್ಮಾಪಕರು ಸ್ವಾತಂತ್ರ ನೀಡಿದ ಕಾರಣ ಸನ್ನಿವೇಶಗಳು ನೋಡುವುದಕ್ಕೆ ಖುಷಿ ಕೊಡುತ್ತದೆ.
ಪ್ರಮೋದ್‌ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ತೇಜುಬಲವಾಡಿ ನಾಯಕಿ. ಹಿರಿಯ ನಿವೃತ್ತ ಪೋಲೀಸ್ ಅಧಿಕಾರಿ ಎಸ್.ಕೆ.ಉಮೇಶ್ ರೀಲ್‌ದಲ್ಲೂ ಅದೇ ರೀತಿ ಕಾಣಿಸಿಕೊಂಡಿದ್ದಾರೆ. ವಿಶೇಷ ಪಾತ್ರದಲ್ಲಿ ದಿಗಂತ್ ನಟಿಸಿದ್ದಾರೆ. ಕೆ.ಕಲ್ಯಾಣ್-ತ್ರಿಲೋಕತ್ರಿವಿಕ್ರಮ-ಯೋಗರಾಜಭಟ್ ಸಾಹಿತ್ಯದ ಹಾಡುಗಳಿಗೆ ವಿಷ್ಣುವಿಜಯ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಚಂದ್ರಶೇಖರನ್, ಸಂಕಲನ ಕೆ.ಎಂ.ಪ್ರಕಾಶ್, ಸಂಭಾಷಣೆ ಅನಿರುದ್‌ರಮೇಶ್-ರಘುನಿಡುವಳ್ಳಿ ಸಿನಿಮಾಕ್ಕೆ ಪೂರಕವಾಗಿದೆ.
****