ರಕ್ತಸಿಕ್ತ ಸಾರುವ ಪೆಪೆ ****
‘ಪೆಪೆ’ ಚಿತ್ರದಲ್ಲಿ ನಾಯಕನ ಹೆಸರು ಪ್ರದೀಪ. ಎಲ್ಲರೂ ಆತನನ್ನು ಶೀರ್ಷಿಕೆಯಲ್ಲಿ ಕರೆಯುತ್ತಿರುತ್ತಾರೆ. ಜಾತಿಯ ದ್ವೇಷ, ಪ್ರೀತಿಯ ನೆರಳು, ನಂಬಿಕೆಗಳ ಕುಲುಮೆ. ತಾಯಿಯ ಮಮತೆ, ಹೆಣ್ಣಿನ ಧೋರಣೆ, ದುರುಳನ ಕೈನಿಂದ ಜಾರಿ ಬಿದ್ದು ತೊರೆಯ ನೀರಿನಲ್ಲಿ ಮುಳುಗಿರುವ ವಸ್ತುವನ್ನು ಹೇಳುವುದೆ ಒನ್ ಲೈನ್ ಸ್ಟೋರಿಯಾಗಿದೆ. ಚಿಕ್ಕವನಿದ್ದಾಗಲೇ ಅಪ್ಪನನ್ನು ಕಳೆದುಕೊಂಡ ಅವನಿಗೆ ಅಪ್ಪನ ಸಾವಿಗೆ ಯಾರು ಕಾರಣ ಏನು ಎಂದು ಹುಡುಕುತ್ತಾ ಹೊರಟಾಗ ಹಿಂದಿನ ಅಸಲಿ ಕಥೆ ಬಿಚ್ಚಿಕೊಳ್ಳುತ್ತದೆ. ಸಾವು ಬದುಕಿನ ನರಳಾಟದಲ್ಲಿ ಅಪ್ಪನನ್ನು ಕೂಡಿ ಹಾಕಿರುವ ಮಗ ಮತ್ತು ಸೊಸೆ. ರಾಜಕಾರಣಿ ಸಂಗ ಸೇರಿದ ಆಕೆ ಯಾರನ್ನು ಬಿಡಲ್ಲ ಎಲ್ಲರನ್ನು ಮುಗಿಸೋಣ ಎನ್ನುತ್ತಾಳೆ. ಇವರೆಡು ಸನ್ನಿವೇಶಗಳು ಕಥೆಯನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ. ಎಲ್ಲವನ್ನು ನಾವೇ ಹೇಳುವುದಕ್ಕಿಂತ ಮೊದಲು ತಾವು ಚಿತ್ರಮಂದಿರಕ್ಕೆ ಬಂದರೆ ಕುತೂಹಲಗಳಿಗೆ ಉತ್ತರ ಸಿಗುತ್ತದೆ. ಶ್ರೀಲೇಶ್‌ನಾಯರ್ ಪ್ರಥಮ ಪ್ರಯತ್ನದಲ್ಲಿಯೇ ನಿರ್ದೇಶನ ಮಾಡಿರುವುದು ತೆರೆ ಮೇಲೆ ಚಂದ ಕಾಣಿಸುತ್ತದೆ.
ವಿಜಯ್‌ರಾಜ್‌ಕುಮಾರ್ ರಗಡ್ ಲುಕ್‌ದಲ್ಲಿ ಮಚ್ಚು ಹಿಡಿದು ಅಬ್ಬರಿಸಿದ್ದಾರೆ. ಕಾಜಲ್‌ಕುಂದರ್ ನಾಯಕಿ. ಉಳಿದಂತೆ ಮಯೂರ್‌ಪಟೇಲ್, ಯಶ್‌ಶೆಟ್ಟಿ, ಬಲರಾಜವಾಡಿ, ಮೆದಿನಿಕೆಳಮನಿ, ಅರುಣಾಬಾಲರಾಜ್, ನವೀನ್.ಡಿ.ಪಡಿಲು ಮುಂತಾದವರು ನಟಿಸಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ, ಅಭಿಷೇಕ್‌ಕಾಸರಗೂಡು ಛಾಯಾಗ್ರಹಣ, ರವಿವರ್ಮ-ಚೇತನ್‌ಡಿಸೋಜ-ಡಿಫರೆಂಟ್‌ಡ್ಯಾನಿ-ನರಸಿಂಹ ಸಾಹಸ ಇರಲಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್‌ನಡಿ ಉದಯ್‌ಶಂಕರ್ ಮತ್ತು ಶ್ರೀರಾಮ್.ಬಿ.ಎಂ.ಕೋಲಾರ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.
****