ಪೋಷಕರ ಜವಬ್ದಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯ
ಪ್ರೌಡಶಾಲೆ ವಿದ್ಯಾರ್ಥಿಗಳು ಶಿಕ್ಷಣದ ಕಡೆಗೆ ಗಮನ ಹರಿಸದೆ, ಬೇರೆ ಹವ್ಯಾಸಗಳ ಕಡೆಗೆ ಆಕರ್ಷಿತರಾದಾಗ ಎದುರಾಗವ ತೊಂದರೆಗಳು, ಶಾಲೆಯಲ್ಲಿ ನಡೆಯುವ ರ‍್ಯಾಗಿಂಗ್, ತುಂಟಾಟ, ನೋವು ನಲಿವಿನ ಸುತ್ತ ಸಾರುವ ಅಂಶಗಳನ್ನು ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದಲ್ಲಿ ಉತ್ತಮವಾಗಿ ತೋರಿಸಲಾಗಿದೆ. ಶ್ರೀಮಂತ ಮಕ್ಕಳೇ ಇರುವ ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಶಾರದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಶಾಲಾ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿಯು ಶಿಕ್ಷಣವನ್ನು ಮುಂದುವರೆಸುತ್ತದೆ. ಹೀಗೆ ಚದುರಂಗ ಆಟದಲ್ಲಿ ರಾಜಕಾರಣಿ, ಪೋಲೀಸ್, ನಟಿ ಮತ್ತು ಪತ್ರಕರ್ತರ ಮಕ್ಕಳ ಆಟಕ್ಕೆ ಪಾಠ ಕಲಿಸುವಂತ ಗೇಮ್ ಎದುರಾಗಿ, ಎಲ್ಲದಕ್ಕೂ ಕುತೂಹಲದ ತಿರುವುಗಳು ಬರುತ್ತದೆ. ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಸ್ಟೂಡೆಂಟ್ಸ್, ಪೋಷಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ನಿರ್ದೇಶಕ ಅರುಣ್ ಅಮುಕ್ತ ಚೆನ್ನಾಗಿ ಚಿತ್ರಕಥೆ ಸೃಷ್ಟಿಸಿರುವುದು ಎದ್ದು ಕಾಣಿಸುತ್ತದೆ.
ಮೊದಲ ಬಾರಿ ಚಂದನ್‌ಶೆಟ್ಟಿ ನಾಯಕನಾಗಿ ಎರಡು ಶೇಡ್‌ಗಳಲ್ಲಿ ಗಮನ ಸೆಳೆಯುತ್ತಾರೆ. ತಾರಾಗಣದಲ್ಲಿ ಭಾವನಾಅಪ್ಪು, ಅಮರ್, ಮನಸ್ವಿ, ವಿವಾನ್, ಸುನಿಲ್‌ಪುರಾಣಿಕ್, ಅರವಿಂದರಾಜ್, ಕಾಕ್ರೋಚ್‌ಸುಧಿ, ಪ್ರಶಾಂತ್‌ಸಂಬರ್ಗಿ ಮಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್-ವಾಸುಕಿವೈಭವ್ ಸಾಹಿತ್ಯದ ಹಾಡುಗಳಿಗೆ ವಿಜೇತ್‌ಕೃಷ್ಣ, ವಾಸುದೀಕ್ಷಿತ್ ಹಾಗೂ ಶಶಾಂಕ್‌ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್‌ಗೌಡ ಛಾಯಾಗ್ರಹಣ, ಪವನ್‌ಗೌಡ ಸಂಕಲನ, ಟೈಗರ್ ಶಿವು-ನರಸಿಂಹ ಸಾಹಸ ಚಿತ್ರಕ್ಕಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಶಿವಲಂಗೇಗೌಡ ನಿರ್ಮಾಣ ಮಾಡಿರುವುದು ಹೊಸ ಅನುಭವ.
****