Hejjaru.Reviews

Friday, July 19, 2024

61

ಎರಡು ಕಾಲಘಟ್ಟಗಳ ಹೆಜ್ಜಾರು****

      ಒಬ್ಬರ ಜೀವನದಲ್ಲಿ ನಡೆದ ಘಟನೆಯು ಮತ್ತೋಬ್ಬರ ಬದುಕಿನಲ್ಲಿ ಅದೇ ರೀತಿ ನಡೆಯುತ್ತೆ ಎಂಬ ಅಂಶಗಳನ್ನು ಇಟ್ಟುಕೊಂಡು ನಿರ್ಮಾಣವಾದ ಚಿತ್ರ ‘ಹೆಜ್ಜಾರು’.  ೧೯೬೫ರ ಸಮಯದಲ್ಲಿ ಹೆಜ್ಜಾರು ಎಂಬ ಮೈಲಿಗಲ್ಲಿನ ಬಳಿ ಅಪಘಾತವೊಂದು ನಡೆಯುತ್ತದೆ. ಠಾಣೆಯಿಂದ ತಪ್ಪಿಸಿಕೊಂಡ ಖೈದಿಯನ್ನು ಹಿಡಿಯಲು ಹೋದ ಮೂವರು ಪೋಲೀಸರು ಅಪಘಾತದಲ್ಲಿ ಮರಣ ಹೊಂದಿರುತ್ತಾರೆ. ಕಟ್ ಮಾಡಿದರೆ ೩೦ ವರ್ಷ ಅಂದರೆ ೧೯೯೫ರಲ್ಲಿ ಅದೇ ಜಾಗದಲ್ಲಿ ಕಳ್ಳನನ್ನು ಅಟ್ಟಿಸಿಕೊಂಡು ಬಂದ ಪೋಲೀಸರು ಮತ್ತು ಕಳ್ಳ ಸತ್ತು ಹೋಗಿರುತ್ತಾರೆ. ಹೀಗೆ ಎರಡು ಕಾಲಘಟ್ಟದಲ್ಲಿ ಮರಣ ಹೊಂದಿದ ಮಗ ಭಗತ್. ಮುಂದೆ ಆತನು ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುತ್ತಾನೆ. ಕಥೆ ವಿರಾಮದ ಹೊತ್ತಿಗೆ ತಿರುವು ಪಡೆದುಕೊಳ್ಳುತ್ತದೆ. ಅಲ್ಲಿಂದ ಕುತೂಹಲದ ದೃಶ್ಯಗಳು ನೋಡುಗರಿಗೆ ಸೀಟಿನಲ್ಲಿ ಕೂರುವಂತೆ ಮಾಡುತ್ತದೆ.

      ನಿರ್ದೇಶಕ ಹರ್ಷಪ್ರಿಯಾ ತನ್ನ  ಮೊದಲ ಪ್ರಯತ್ನದಲ್ಲಿಯೇ ಚಿಂತನೆಗೆ ಹಚ್ಚುವಂತ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ. ಇವರಿಗೆ ಉಜ್ವಲ ಭವಿಷ್ಯವಿದೆ. ನಾಯಕನಾಗಿ ಭಗತ್, ನಾಯಕಿಯಾಗಿ ಲಿಯೋನಿಲ್ಲಾ ಶ್ವೇತಾಸಿಡೋಜ ಪ್ರಥಮ ಅವಕಾಶವಾಗಿದ್ದರೂ ಗಮನ ಸೆಳೆಯುತ್ತಾರೆ. ತೂಕದ ಪಾತ್ರದಲ್ಲಿ ಗೋಪಾಲಕೃಷ್ಣದೇಶಪಾಂಡೆ, ಖಳನಾಗಿ ನವೀನ್‌ಕೃಷ್ಣ ಇಷ್ಟವಾಗುತ್ತಾರೆ. ಪೂರ್ಣಚಂದ್ರತೇಜಸ್ವಿ ಸಂಗೀತ, ಅಮರ್‌ಗೌಡ ಛಾಯಾಗ್ರಹಣ ಇದೆಲ್ಲಕ್ಕೂ ಪೂರಕವಾಗಿದೆ. ಗಗನ ಎಂಟರ್ ಪ್ರೈಸಸ್ ಬ್ಯಾನರ್‌ದಲ್ಲಿ ಕೆ.ಎಸ್.ರಾಮ್‌ಜಿ ಬಂಡವಾಳ ಹೂಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,