ಸೇಡಿಗೆ ಸೇಡು ರಕ್ತಾಕ್ಷ****
ಮನುಷ್ಯ ತಪ್ಪು ಮಾಡಿದಾಗ ದೇವರು ಶಿಕ್ಷೆ ಕೊಡುತ್ತಾನೆ ಅಂತ ಹೇಳಲಾಗದು. ಕೆಲವೊಮ್ಮೆ ದಾನವರು ಮಾಡಬೇಕು ಎಂದು ಬಿಟ್ಟಿರುತ್ತಾನೆ. ಅಂತಹುದೆ ಕೆಲಸವನ್ನು ‘ರಕ್ತಾಕ್ಷ’ ಚಿತ್ರದಲ್ಲಿ ಕಥಾನಾಯಕ ಡೈಲಾಗ್ ಹೇಳುತ್ತಾ ಒಬ್ಬರ ಹಿಂದೊಬ್ಬರಂತೆ ಮೂವರು ಹೆಣ್ಣುಮಕ್ಕಳನ್ನು ಕೊಲ್ಲುತ್ತಾನೆ. ಇಂತಹ ಸಾಲು ಸಾಲು ಹೆಣಗಳನ್ನು ಉರುಳಿಸಲು ಕಾರಣವಾದರೂ ಏನು? ಅವನಿಗೆ ಕಾನೂನು ಕಂಟಕ ಬರುತ್ತದಾ?
ಡ್ರಗ್ಸ್ ಹಾಗೂ ಮಾನವ ಕಳ್ಳಸಾಗಣೆ, ಮುಗ್ದ ಹುಡುಗರನ್ನು ಅಪಹರಿಸಿ, ಅವರಿಗೆ ಲಿಂಗ ಪರಿವರ್ತನೆ ಮಾಡಿ ವೇಶ್ಯಾವಾಟಿಕೆಗೆ ನೂಕುವ ತಂಡದ ವಿರುದ್ದ ಸೇಡು ತೀರಿಸಿಕೊಳ್ಳುವುದು.
ಮುಂದೆ ಪೋಲೀಸ್ ಅಧಿಕಾರಿ ಕೊಲೆಗಾರರನ್ನು ಹಿಡಿಯಲು ಹೋದಾಗ, ಅಲ್ಲಿ ಸತ್ತ ವ್ಯಕ್ತಿಯ ಭಾವಚಿತ್ರ ಕಾಣುತ್ತದೆ. ಅದರ ಜಾಡನ್ನು ಹಿಡಿದು ಹೋಗುವಾಗ ಕೊಲೆಯಾದವನು ನಡೆಸುತ್ತಿದ್ದ ದೊಡ್ಡ ದಂಧೆಯ ಮಾಹಿತಿ ಸಿಗುತ್ತದೆ. ಇದರ ಮೂಲಕ ಘೋರ ಸತ್ಯ ತೆರೆದುಕೊಳ್ಳುತ್ತದೆ. ಇಂತಹ ಸನ್ನಿವೇಶಗಳು ನೋಡುಗರಿಗೆ ಕುತೂಹಲ ತರಿಸುತ್ತದೆ. ವಾಸುದೇವ.ಎಸ್.ಎನ್ ನಿರ್ದೇಶನ ಪ್ರೇಕ್ಷಕರಿಗೆ ಹತ್ತಿರವಾಗುತ್ತದೆ.
ಮಾಡೆಲಿಂಗ್ ಲೋಕದಿಂದ ಬಂದಿರುವ ರೋಹಿತ್ ಮೊದಲ ಬಾರಿ ಬಣ್ಣ ಹಚ್ಚಿದ್ದು ಆಕ್ಷನ್‌ದಲ್ಲಿ ಮಿಂಚಿದ್ದಾರೆ. ನಾಯಕಿಯರುಗಳಾದ ರಚನಾದಶರಥ, ಅರ್ಚನಾಕೊಟ್ಟಿಗೆ, ರೂಪರಾಯಪ್ಪ, ನಿವೀಕ್ಷನಾಯ್ಡು ತೆರೆ ಮೇಲೆ ಚೆಂದ ಕಾಣಿಸುತ್ತಾರೆ. ಪ್ರಮೋದ್‌ಶೆಟ್ಟಿ ಕೆಲವೇ ದೃಶ್ಯಗಳಲ್ಲಿ ಬಂದು ಅಬ್ಬರಿಸಿ ಹೋಗುತ್ತಾರೆ. ಡಾಸ್‌ಮೋಡ್ ಸಂಗೀತ, ಆದರ್ಶ್ ಛಾಯಾಗ್ರಹಣ, ಸತೀಶ್‌ಚಂದ್ರಯ್ಯ ಸಂಕಲನ ಇವಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ಕ್ಲೈಮಾಕ್ಸ್‌ದಲ್ಲಿ ಚಿತ್ರತಂಡವು ಒಂದು ಅಚ್ಚರಿ ನೀಡಿದೆ. ಅದನ್ನು ತಿಳಿಯಲು ಚಿತ್ರಮಂದಿರಕ್ಕೆ ಬರಬೇಕು. ಸಾಯಿ ಪ್ರೊಡಕ್ಷನ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
****