ಮನುಷ್ಯನ ಗುಣ ಸಾರುವ ಕೆಂಡ****
ನಮ್ಮ, ನಿಮ್ಮ ನಡುವೆ ಸಮಾಜದಲ್ಲಿ ನಡೆಯುತ್ತಿರುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಅದಕ್ಕೆ ಚಿತ್ರರೂಪ ಕೊಟ್ಟು ‘ಕೆಂಡ’ ಸಿನಿಮಾವಾಗಿದೆ. ಮಧ್ಯಮ ವರ್ಗದ ಜೀವನದ ತೊಳಲಾಟ, ಬುದ್ದಿಜೀವಿಗಳ ಕೂಗು, ಮಾಧ್ಯಮಗಳ ರಾಜಕೀಯ, ರೈತರ ಕಷ್ಟಗಳು, ರಾಜಕಾರಣಿಗಳ ನಾಟಕ, ಹೀಗೆ ಹತ್ತಾರು ವಿಚಾರಗಳನ್ನು ತೆರೆಯ ಮೇಲೆ ತೋರಿಸಲಾಗಿದೆ. ಮನುಷ್ಯನಿಗೆ ಅಂತಸ್ತು, ಹಣ, ಅಧಿಕಾರ ಬಂದಾಗ ಸಹಜವಾಗಿ ಹೆಣ್ಣಿನ ಮೇಲೆ ಆಕರ್ಷಣೆ ಬರುತ್ತದೆ. ಇದನ್ನು ಪಡೆಯಲು ಸಂಬಂಧಗಳಿಂದ ದೂರವಾಗುತ್ತಾನೆ. ಅಂತಿಮವಾಗಿ ಒಬ್ಬಂಟಿ ಬದುಕು ನಡೆಸುತ್ತಾ ಜೀವನದ ದೃಷ್ಟಿಕೋನವನ್ನೆ ಬದಲಾಯಿಸಿಕೊಳ್ಳಲು ಪ್ರಯತ್ನಸಿದಾಗ ಏನೇನು ನಡೆಯುತ್ತದೆ ಎಂಬುದನ್ನು ಈ ಸಿನಿಮಾದ ಮೂಲಕ ಹೇಳ ಹೊರಟಿದ್ದಾರೆ.
ನಿರ್ದೇಶಕರಾಗಿ ಸಹದೇವ್ ಕೆಲವಡಿ ಪ್ರಥಮ ಅನುಭವದಲ್ಲಿ ಎಲ್ಲರಿಂದ ಪ್ರಶಂಸೆಗೆ ಒಳಗಾಗಿದ್ದಾರೆ. ನಾಯಕನಾಗಿ ಭರತ್ ಗಮನ ಸೆಳೆಯುತ್ತಾರೆ. ಉಳಿದಂತೆ ಪ್ರಣವ್‌ಶ್ರೀಧರ್, ವಿನೋದ್‌ರವೀಂದ್ರನ್, ಗೋಪಾಲ್‌ಕೃಷ್ಣದೇಶಪಾಂಡೆ, ಸತೀಶ್‌ಕುಮಾರ್, ಅರ್ಚನಶ್ಯಾಮ್, ಪೃಥ್ವಿಬನವಾಸಿ ಇವರೆಲ್ಲರೂ ತಮಗೆ ನೀಡಿದ ಅವಕಾಶವನ್ನು ಸದುಪುಯೋಗ ಪಡಿಸಿಕೊಂಡಿದ್ದಾರೆ. ರೂಪರಾವ್ ಬಂಡವಾಳ ಹೂಡಿದ್ದು, ಸಹದೇವಕೆಲವಡಿ ಛಾಯಾಗ್ರಹಣ,ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಪಾಲುದಾರರು. ಚಿಂತನೆಗೆ ಹಚ್ಚುವ, ಗಂಭೀರ ಕಥೆಗಳನ್ನು ಇಷ್ಟಪಡುವವರಿಗೆ ಇದು ಪಕ್ಕಾ ಪೈಸಾ ವಸೂಲ್ ಆಗುತ್ತದೆ.
****