ಸಮಾನತೆಗಾಗಿ ಹೋರಾಡುವ ಕರ್ಕಿ ****
೨೧ನೇ ಶತಮಾನ ಬಂದರೂ ಸಮಾಜದಲ್ಲಿ ಮೇಲು, ಕೀಳು ಎನ್ನುವ ಭೇದಬಾವ ಕಡಿಮೆಯಾಗಿಲ್ಲ. ಅದನ್ನು ಸಂಪೂರ್ಣವಾಗಿ ತೊಡೆದು ಹಾಕುವ ಕಥೆ ‘ಕರ್ಕಿ’ ಚಿತ್ರದಲ್ಲಿ ಹೇಳಲಾಗಿದೆ. ಕೆಳ ವರ್ಗದ ಯುವಕ ತನ್ನ ಜೀವನದಲ್ಲಿ ಏನೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾನೆ. ಮುಂದೆ ಹೇಗೆಲ್ಲಾ ಎದುರಿಸುತ್ತಾನೆ. ಅವುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಯಾವ ರೀತಿ ಸಾಗುತ್ತಾನೆ. ಜತೆಗೆ ಜಾತಿ ವ್ಯವಸ್ಥೆ, ಸಮಾನತೆ ಸುತ್ತ ಹೇಳುವ ಪ್ರಯತ್ನ ಮಾಡಲಾಗಿದೆ. ಸಮಾಜದಲ್ಲಿರುವ ಕೆಲವು ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುವಂತಹ ಸನ್ನಿವೇಶಗಳನ್ನು ಸಂದೇಶದೊಂದಿಗೆ ತೋರಿಸಲಾಗಿದೆ. ನಾಯಿಯೊಂದು ಪ್ರಮುಖ ಪಾತ್ರವಹಿಸಿದ್ದು ಶೀರ್ಷಿಕೆಗೆ ಅದರ ಹೆಸರನ್ನು ಇಡಲಾಗಿದೆ.
ಸೌತ್ ಇಂಡಿಯಾದ ಹಲವು ಭಾಷೆಗಳಲ್ಲಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ಪವಿತ್ರನ್ ಕನ್ನಡ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ಜಯಪ್ರಕಾಶ್‌ರೆಡ್ಡಿ ನಾಯಕನಾಗಿ ಮಿಂಚಿದ್ದಾರೆ. ಮೀನಾಕ್ಷಿದಿನೇಶ್ ನಾಯಕಿ. ಇವರೊಂದಿಗೆ ಬಲರಾಜವಾಡಿ, ಯತಿರಾಜ್, ಮಿಮಿಕ್ರಿಗೋಪಿ, ಸ್ವಾತಿಗುರುದತ್, ವೇಲುಮಂಜುನಾಥ್,ಆರ್.ಜಗದೀಶ್, ಜೋಸೈಮನ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಕವಿರಾಜ್ ಸಾಹಿತ್ಯಕ್ಕೆ ಅರ್ಜುನ್‌ಜನ್ಯಾ ಸಂಗೀತ ಸಂಯೋಜಸಿದ್ದಾರೆ. ರಿಷಿಕೇಶ್ ಛಾಯಾಗ್ರಹಣ, ಶ್ರೀ ಸಂಕಲನವಿದೆ. ತಮಿಳುನಾಡು ಮೂಲಕ ಪ್ರಕಾಶ್‌ಪಳನಿ ಬಂಡವಾಳ ಹೂಡಿದ್ದಾರೆ.
****