ತುಂಬು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ****
ಸಂಜೋತ ಭಂಡಾರಿ ನಿರ್ದೇಶನ ಮಾಡಿರುವ ‘ಲಂಗೋಟಿ ಮ್ಯಾನ್’ ತಾತ, ಮೊಮ್ಮಗನ ಸುತ್ತ ಕಥೆಯನ್ನು ಹೇಳಲಾಗಿದೆ. ಸಂಪ್ರದಾಯಸ್ಥ ಪುರೋಹಿತ ಕುಟುಂಬದಲ್ಲಿ ಹಿರಿಕರಿಗೆ ಲಂಗೋಟಿಯ ಮೇಲೆ ಅಪಾರ ಅಭಿಮಾನ. ಈಗಿನ ಕಾಲದಲ್ಲಿ ಬದುಕುತ್ತಿದ್ದರೂ ಅದನ್ನು ಬಿಡದೆ, ಎಲ್ಲರೂ ಅದನ್ನೇ ತೊಟ್ಟುಕೊಳ್ಳಬೇಕೆಂಬ ಧೋರಣೆ. ಇದರಿಂದ ಸಂಕಷ್ಟಕ್ಕೆ ಸಿಲುಕುವ ಮೊಮ್ಮಗ. ಇದೆಲ್ಲಾವನ್ನು ಧಿಕ್ಕರಿಸಿದಾಗ ಮುಂದೆ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂಬುದನ್ನು ಹಾಸ್ಯ ಮಿಶ್ರಿತ ಧಾಟಿಯಲ್ಲಿ ತೋರಿಸಲಾಗಿದೆ.
ಜತೆಗೆ ಜೀವನದ ಮೌಲ್ಯಗಳನ್ನು ಹೇಳಲಾಗಿದೆ.
ನಾಯಕ ಆಕಾಶ್ ಯಾಂಬೊ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಸ್ನೇಹಾಖುಷಿ ನಾಯಕಿಯಾಗಿ ಚೆಂದ ಕಾಣಿಸುತ್ತಾರೆ. ಪೋಲೀಸ್ ಅಧಿಕಾರಿಯಾಗಿ ಸಂಹಿತವಿನ್ಯಾ ಇವರೊಂದಿಗೆ ಧೀರೇಂದ್ರ, ಹುಲಿ ಕಾರ್ತಿಕ್, ಪವನ್ ಎಲ್ಲರೂ ಗಮನ ಸೆಳೆಯುತ್ತಾರೆ. ಹಾಡುಗಳು ಒಮ್ಮೆ ಗುನುಗುವಂತೆ ಮಾಡುತ್ತದೆ. ತನು ಟಾಕೀಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.
****