Sanju.Reviews

Friday, September 27, 2024

32

ಬಸ್ ನಿಲ್ದಾಣದ ಲವ್ ಸ್ಟೋರಿ*****

       ಹಿರಿಯ ಪತ್ರಕರ್ತ, ನಟ ಯತಿರಾಜ್ ಆಕ್ಷನ್ ಕಟ್ ಹೇಳಿರುವ ‘ಸಂಜು’ ಚಿತ್ರವು ಬಸ್ ನಿಲ್ದಾಣದಲ್ಲಿ ನಡೆಯುವ ಪ್ರೇಮಕಥೆ ಹೊಂದಿದೆ. ಆತನ ಬದುಕಿನಲ್ಲಿ ಸಾಕಷ್ಟು ಏರಳಿತಗಳಿರುತ್ತದೆ. ಆಕೆಯ ಬದುಕು ಕೂಡ ಇದಕ್ಕೆ ಹೊರತಾಗಿರುವುದಿಲ್ಲ. ತತ್ ಕ್ಷಣದ ನಿರ್ಧಾರಗಳು ನಮ್ಮ ಜೀವನದಲ್ಲಿ ಏನೇನೆಲ್ಲಾ ಪರಿಣಾಮಗಳನ್ನು ಬೀರುತ್ತದೆ. ಹಸಿರು ಪರಿಸರದ ಮಧ್ಯೆ ಇರೋ ಬಸ್ ನಿಲ್ದಾಣದಲ್ಲಿ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಕೇವಲ ನಾಲ್ಕೈದು ಗಂಟೆಗಳಲ್ಲಿ ನಡೆಯುವ ಘಟನೆಗಳಲ್ಲಿ  ಆತಂಕ, ತೊಳಲಾಟ, ವಾತ್ಸಲ್ಯ, ಕಾಳಜಿ ಎಲ್ಲವನ್ನು ತೋರಿಸಲಾಗಿದೆ. ಒಂದು ಹಂತದಲ್ಲಿ ಅವಳು ಸಾಯೋ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಏತಕ್ಕಾಗಿ ಎಂಬುದು ಕುತೂಹಲ ತರಿಸುತ್ತದೆ. ಸಿನಿಮಾದಲ್ಲಿ ನಿರ್ದೇಶಕರು ನೋಡುಗರು ಇಷ್ಟಪಡುವಂತೆ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಸಪಲರಾಗಿದ್ದಾರೆ ಎನ್ನಬಹುದು.

      ಮನ್ವಿತ್ ನಾಯಕನಾಗಿ ಹೊಸ ಅನುಭವವಾಗಿದ್ದರೂ ಎಲ್ಲಿಯೂ ಸೈಕೆಲ್ ಹೊಡೆದಿಲ್ಲ. ಸಾತ್ವಿಕಾ (ಶ್ರಾವ್ಯರಾವ್) ನಾಯಕಿಯಾಗಿ ಗಮನ ಸೆಳೆಯುತ್ತಾರೆ ಉಳಿದಂತೆ ಸಂಗೀತ, ಮಹಂತೇಶ್, ಬಲರಾಜವಾಡಿ, ಅಪೂರ್ವ, ಬೌಬೌಜಯರಾಮ್, ಸುಂದರಶ್ರೀ ಮುಂತಾದವರು ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ವಿಜಯ್‌ಹರಿತ್ಸ ಸಂಗೀತದಲ್ಲಿ, ವಿದ್ಯಾನಾಗೇಶ್ ಸೆರೆಹಿಡಿದಿರುವ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ. ಸಂತೋಷ್.ಡಿ.ಎಂ ಬಂಡವಾಳ ಹೂಡಿದ್ದಾರೆ.

*****

 

Copyright@2018 Chitralahari | All Rights Reserved. Photo Journalist K.S. Mokshendra,