ಆದರ್ಶ ರೈತ ಕುಟುಂಬದ ಬದುಕು ಬವಣೆ
**** ರೈತರ ಕುಟುಂಬದಲ್ಲೂ ಕಷ್ಟ ಕಾರ್ಪಣ್ಯಗಳು ಇರುತ್ತದೆ ಎಂಬುದನ್ನು ‘ಗೋಪಿಲೋಲ’ ಚಿತ್ರದಲ್ಲಿ ನವಿರಾಗಿ ತೋರಿಸಲಾಗಿದೆ. ಪ್ರಾಮಾಣಿಕ ಮಾದೇಗೌಡ ಕೃಷಿ ಮಾಡಿಕೊಂಡು ಒಳ್ಳೆ ಹೆಸರನ್ನು ಸಂಪಾದಿಸಿರುತ್ತಾನೆ. ಆದರೆ ಮಗ ಸೋಮಾರಿ, ಪೋಲಿಯಾಗಿ ಅಪ್ಪನ ಹೆಸರನ್ನು ಹಾಳು ಮಾಡುತ್ತಿರುತ್ತಾನೆ. ಈತನನ್ನು ಪ್ರೀತಿ ಮಾಡಿತ್ತಿದ್ದ ಲೀಲಾ ಆಕಸ್ಮಿಕ ಸಂದರ್ಭದಲ್ಲಿ ಮೈಮರೆತು ತಪ್ಪು ಮಾಡುತ್ತಾಳೆ. ಇತ್ತ ಗೋಪಿ ಎಲ್ಲವನ್ನು ಮರೆತು ಬೇರೆ ಹುಡುಗಿಯೊಂದಿಗೆ ಸಂಬಂಧ ಬೆಳಸಿಕೊಳ್ಳುತ್ತಾನೆ. ಇದನ್ನು ಅರಿತ ಅವಳು ಮನೆಗೆ ಬಂದು ಮಾದೇಗೌಡರಿಗೆ ದೂರು ನೀಡುತ್ತಾಳೆ. ಅವರು ಆಕೆಯ ಧೈರ್ಯವನ್ನು ಮೆಚ್ಚಿ ಸೊಸೆಯಾಗಿ ಸ್ವೀಕಾರ ಮಾಡುತ್ತಾರೆ. ನಂತರ ಮಾದೆಗೌಡ ತಾನು ಕೆಲಸ ಮಾಡುತ್ತಿದ ಜಾಗದಲ್ಲಿ ಅಪವಾದ ಹೊತ್ತುಕೊಳ್ಳುತ್ತಾನೆ. ಮುಂದೆ ನಡೆಯುವ ಘಟನೆಯಲ್ಲಿ ಗೋಪಿ ಅಪ್ಪನಂತರ ಆದರ್ಶ ನೀತಿಯನ್ನು ಅನುಸರಿಸುತ್ತಾನಾ? ಮತ್ತೆ ಲೀಲಾಳನ್ನು ಪತ್ನಿ ಅಂತ ಸ್ವೀಕಾರ ಮಾಡುತ್ತಾನಾ? ಇದೆಲ್ಲವು ಕ್ಲೈಮಾಕ್ಸ್‌ದಲ್ಲಿ ಕುತೂಹಲದೊಂದಿಗೆ ಹೇಳಲಾಗಿದೆ.
ಆರ್.ರವೀಂದ್ರ ಮತ್ತೋಮ್ಮೆ ನಿರ್ದೇಶಕರಾಗಿ ಸಪಲರಾಗಿದ್ದಾರೆ. ಎಸ್.ಆರ್.ಸನತ್ ಬಂಡವಾಳ ಹೂಡಿದ್ದಾರೆ. ಮಂಜುನಾಥ್ ನಾಯಕ ಹಾಗೂ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.
ನಿರ್ಮಾಣದಲ್ಲಿ ಪಾಲುದಾರರಾಗಿರುವ ಮಂಜುನಾಥರಸು ನಾಯಕನಾಗಿ ಪರವಾಗಿಲ್ಲ. ನಿಮಿಷಾ.ಕೆ.ಚಂದ್ರ ನಾಯಕಿ. ಇವರೊಂದಿಗೆ ನಿರೂಪಕಿ ಕಂ ನಟಿ ಜಾಹ್ನವಿ, ಎಸ್.ನಾರಾಯಣ್, ಪದ್ಮಾವಾಸಂತಿ, ನಾಗೇಶ್‌ಯಾದವ್, ಸ್ವಾತಿ, ಜೋಸೈಮನ್, ತೆಲುಗು ಕಲಾವಿದ ಸಪ್ತಗಿರಿ ಮುಂತಾದವರು ನಟಿಸಿದ್ದಾರೆ.
ಮಿದುನ್‌ಅಸೋಕನ್ ಚೆನ್ನೈ ಸಂಗೀತ, ರಾಕೇಶ್‌ಆಚಾರ್ಯ ಹಿನ್ನಲೆ ಶಬ್ದ, ಸೂರ್ಯಕಾಂತ್ ಛಾಯಾಗ್ರಹಣ, ಕೇಶವಚಂದ್ರ ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಥ್ರಿಲ್ಲರ್‌ಮಂಜು-ಜಾನಿ ಮಾಸ್ಟರ್ ಸಾಹಸ, ಹಾಡುಗಳಿಗೆ ಜಯಂತ್ ಕಾಯ್ಕಣಿ-ಕವಿರಾಜ್-ಕೇಶವಚಂದ್ರ ಪೆನ್ನು ಕೆಲಸ ಮಾಡಿದೆ. ಒಟ್ಟಾರೆ ಒಮ್ಮೆ ನೋಡಬಲ್ ಚಿತ್ರ ಅಂತ ಹೇಳಬಹುದು.
****