ಸಾಮಾನ್ಯ ಯುವಕನ ಬದುಕಿನ ಕಥನ
**** ಬದುಕಿನಲ್ಲಿ ನಡೆಯುವ ಘಟನೆಗಳನ್ನು ತಾಳೆ ಹಾಕಿ ಪರೀಕ್ಷಿಕೊಳ್ಳಬಹುದು. ಅದೇ ಸಾಮಾನ್ಯ ಮನುಷ್ಯನ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ‘ರಾನಿ’ ತೋರಿಸುವ ಪ್ರಯತ್ನ ಮಾಡಲಾಗಇದೆ. ಮೇಲ್ನೋಟಕ್ಕೆ ರೌಡಿಸಂ, ಭೂಗತಲೋಕ ಎಂದೆಲ್ಲ ಅನಿಸಿದರೂ, ಚಿತ್ರದ ಒಳಗೆ ಹೊಕ್ಕರೆ ಆತನ ಸೂಕ್ಷ ಸಂವೇದನೆ ತಿಳಿಯುತ್ತಾ ಹೋಗುತ್ತದೆ. ಅಷ್ಟರಮಟ್ಟಿಗೆ ಮಾಸ್ ಜತೆಗೆ ಕ್ಲಾಸ್ ಅಂಶಗಳು ಇರುವುದು ಗೊತ್ತಾಗುತ್ತದೆ. ಆತನಿಗೆ ಬಣ್ಣದಲೋಕದಲ್ಲಿ ಮಿಂಚಬೇಕೆಂಬ ಆಸೆ ಇರುತ್ತದೆ. ಇವನಿಗೆ ಜತೆಯಾಗಿ ಅವಳು ಸಾಥ್ ಕೊಡುತ್ತಾಳೆ. ಇನ್ನೇನು ಕ್ಯಾಮಾರ ಎದುರು ನಿಲ್ಲಬೇಕು. ಅಷ್ಟರಲ್ಲಿ ಅವನಿಗೆ ನಿರೀಕ್ಷಿಸದ ಘಟನೆ ನಡೆಯುತ್ತದೆ. ಅಲ್ಲಿಂದ ತಿರುವುಗಳು ಬಂದು ನೋಡುಗರನ್ನು ಕುತೂಹಲದ ಪಯಣದತ್ತ ಕರೆದುಕೊಂಡು ಹೋಗುತ್ತದೆ. ಇದರಲ್ಲಿ ನಾಯಕಿ ರಾಧ್ಯಳಿಗೂ ಜವಬ್ದಾರಿ ನೀಡಿದ್ದಾರೆ.
ನಿರ್ದೆಶಕ ಗುರುತೇಜ್‌ಶೆಟ್ಟಿ ಎರಡನೇ ಪ್ರಯತ್ನದಲ್ಲಿ ಮಾಗಿದ್ದಾರೆ. ‘ಕನ್ನಡತಿ’ ಧಾರವಾಹಿ ಖ್ಯಾತಿಯ ಕಿರಣ್‌ರಾಜ್ ನಾಯಕನಾಗಿ ಗಮನ ಸೆಳೆಯುತ್ತಾರೆ. ಮತ್ತೋಬ್ಬ ನಾಯಕಿ ಸಮೀಕ್ಷಾ ಇವರೊಂದಿಗೆ ರವಿಶಂಕರ್, ಉಗ್ರಂಮಂಜು, ಧರ್ಮಣ್ಣಕಡೂರು, ಯಶ್‌ಶೆಟ್ಟಿ ತಮಗೆ ನೀಡಿದ ಕೆಲಸವನನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಪ್ರಮೋದ್‌ಮರವಂತೆ ಸಾಹಿತ್ಯಕ್ಕೆ ಮಣಿಕಾಂತ್‌ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ರಾಘವೇಂದ್ರ.ಬಿ.ಕೋಲಾರ ಛಾಯಾಗ್ರಹಣ, ಸಾಹಸ ವಿನೋದ್ ಎಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ.
****