ಆಣ್ಣಾವ್ರ ನೆನಪಿಸುವ ಕಾಲಾಪತ್ತರ್
**** ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ಡಾ.ರಾಜ್‌ಕುಮಾರ್ ಹಾಡುಗಳು ಬಂದು ಮೆರುಗು ತಂದಿದ್ದವು. ಅದೇ ರೀತಿ ‘ಕಾಲಾಪತ್ತರ್’ ಸಿನಿಮಾದಲ್ಲೂ ಅಂತಹುದೇ ಅಣ್ಣಾವ್ರ ನೆನಪಿಸುವ ಸನ್ನಿವೇಶಗಳು ಕಾಣಿಸಿಕೊಳ್ಳುತ್ತವೆ. ನೋಡಿದ್ದು, ಕೇಳಿದ್ದು ಎರಡನ್ನು ನಾವು ಸ್ವತ: ಅನುಭವಿಸಿದರೂ ಸುಳ್ಳು ಆಗುವ ಅನುಭವಗಳು ಇರುತ್ತದೆ. ಅದಕ್ಕೆ ಉತ್ತರವನ್ನು ಇದರಲ್ಲಿ ನೀಡುವ ಪ್ರಯತ್ನ ಮಾಡಲಾಗಿದೆ. ಕಲ್ಲು ಹೃದಯಗಳ ನಡುವೆ ಕಪ್ಪು ಕಲ್ಲಿಗೆ ಜೀವ ತುಂಬುವ ಕಥೆ ಸೀಟಿನ ತುದಿವರೆಗೂ ಕೂರಿಸಿ ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಕಾಶ್ಮೀರದ ಸೇನಾ ಕ್ಯಾಪ್‌ದಲ್ಲಿ ಕುಕ್ ಶಂಕರ ಉಗ್ರರು ಸೈನಿಕರ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿರುವುದನ್ನು ಕಂಡು ಅವರ ಮೇಲೆ ಮುಗಿ ಬಿದ್ದು ಎಲ್ಲರನ್ನು ಸದೆಬಡಿದು ಹೀರೋ ಆಗುತ್ತಾನೆ. ಊರಲ್ಲಿ ಇವನ ಸಾಧನೆ ಕಂಡು ಗೌಡ ಇವನ ನೆನಪಿಗಾಗಿ ಮೂರ್ತಿ ಸ್ಥಾಪಿಸಲು ತೀರ್ಮಾನಿಸುತ್ತಾನೆ. ಇಲ್ಲಿನ ಬೆಳವಣಿಗೆಗೆ ಶಾಸಕ ಕೋಪಗೊಳ್ಳುತ್ತಾನೆ. ನಂತರ ಮೂರ್ತಿಯ ಸುತ್ತ ನಾನಾ ಬೆಳವಣಿಗೆಗಳು ಬರುತ್ತದೆ. ಮುಂದೇನು ಅಂತ ತಿಳಿಯಲು ನೀವುಗಳು ಚಿತ್ರಮಂದಿರಕ್ಕೆ ಗೊತ್ತಾಗುತ್ತದೆ.
‘ಕೆಂಡ ಸಂಪಿಗೆ’ ಖ್ಯಾತಿ ವಿಕ್ಕಿ ವರುಣ್ ನಿರ್ದೇಶನ ಮತ್ತು ನಾಯಕನಾಗಿ ಗಮನ ಸೆಳೆದಿದ್ದಾರೆ. ಶಿಕ್ಷಕಿಯಾಗಿ ಗಂಗಾ ಹೆಸರಿನಲ್ಲಿ ಧನ್ಯಾರಾಮ್‌ಕುಮಾರ್ ನಾಯಕಿ. ಇವರೊಂದಿಗೆ ಟಿ.ಎಸ್.ನಾಗಭರಣ, ರಾಜೇಶ್‌ನಟರಂಗ, ದೇವ್, ಅಚ್ಯುತಕುಮಾರ್, ಸಂಪತ್‌ಮೈತ್ರೇಯ ಮುಂತಾದವರು ಪೂರಕವಾಗಿದ್ದಾರೆ. ಹಾಡುಗಳು ಜತೆ ಹಿನ್ನಲೆ ಸಂಗೀತ ಒದಗಿಸಿರುವ ಅನೂಪ್‌ಸೀಳನ್ ಕೆಲಸ ಹಾಗೂ ಕಾಶ್ಮೀರದ ಸುಂದರ ತಾಣಗಳು ತೆರೆ ಮೇಲೆ ಚಂದ ಕಾಣಿಸುತ್ತದೆ. ಸುರೇಶ್ ನಾಗರಾಜ್ ನಿರ್ಮಾಣದಲ್ಲಿ ಒಮ್ಮೆ ನೋಡಲು ಅಡ್ಡಿ ಇಲ್ಲ.
****