ಫ್ಯಾಮಿಲಿ ಥ್ರಿಲ್ಲರ್ ವಿಕಾಸ ಪರ್ವ****
ಮನುಷ್ಯನ ಜೀವನವನ್ನು ಬದಲಿಸಲು ಚಟ ಮತ್ತು ಯೋಚನೆ ಸಾಕು. ಇವೆರಡು ಆದಾಗ ಬದುಕು ತನ್ನಂತಾನೇ ಪರಿವರ್ತನೆ ಆಗುತ್ತದೆ. ಅಂತಹದೊಂದು ಕಥೆ ‘ವಿಕಾಸ ಪರ್ವ’ ಚಿತ್ರದಲ್ಲಿದೆ. ನಾಲ್ವರು ಶ್ರೀಮಂತ ಹುಡುಗರು ಪ್ರತಿ ರಾತ್ರಿ ಪಾರ್ಟಿ ಮಾಡಿ ಮನೆಗೆ ಬಂದಾಗ ಹೆಂಡತಿಯರಿಗೆ ಕಷ್ಟವಾಗುತ್ತಿರುತ್ತದೆ. ಇದರಿಂದಾಗಿ ಎಲ್ಲರ ಮನೆಯಲ್ಲಿ ಗಲಾಟೆ ಆಗುತ್ತಿರುತ್ತದೆ. ಇದು ವಿಪರೀತ ಆದಾಗ, ಇದೆನ್ನು ಮರೆಯಲು ದೂರದ ಊರಿಗೆ ಹೋದಾಗ, ಅದರಲ್ಲೊಬ್ಬ ಬದಲಾವಣೆ ಯಾಗದೆ ದುರಂಹಕಾರಿಯಾಗುತ್ತಾನೆ. ಆತನ ಅಹಂ ಮುಳುವಾಗಿ ಕೊನೆಗೆ ಪಾಠವೇ ಬುದ್ದಿ ಕಲಿಸುತ್ತದೆ. ಅದು ಏನು ಎಂಬುದನ್ನು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕಕು.
ಕೆ.ಅನ್ಬು ಅರಸು ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ರೋಹಿತ್ ನಾಗೇಶ್ ನಾಯಕ. ಸ್ವಾತಿ ನಾಯಕಿ ಇಬ್ಬರಿಗೂ ಹೊಸತು ಆಗಿದ್ದರೂ ಸೈಕಲ್ ಹೊಡೆದಿಲ್ಲ. ಇವರೊಂದಿಗೆ ನಿಶಿತಾಗೌಡ, ಅಶ್ವಿನ್‌ಹಾಸನ್, ಬಿಲ್ವ, ಬಲರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ನಟಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್ ಸಾಹಿತ್ಯದ ಹಾಡುಗಳಿಗೆ ಎಪಿಓ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕೆ.ಎಸ್.ನವೀನ್‌ಸುವರ್ಣ, ಸಂಕಲನ ಶ್ರೀನಿವಾಸ್ ಕಲಾಲ್, ನೃತ್ಯ ಧನುಕುಮಾರ್-ಜೈಮಾಸ್ಟರ್, ಸಾಹಸ ಟೈಗರ್‌ಶಿವು ಅವರದಾಗಿದೆ ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ನಿರ್ಮಾಣ ಮಾಡಿದ್ದಾರೆ.
****