ಮೂಕ ಜೀವಿಯ ಬದುಕು ಸಾಧನೆ****
ಮುಗ್ದ ವಿಕಲಚೇತನರಿಗೂ ಬದುಕಲು ಹಕ್ಕಿದೆ ಎಂಬುದನ್ನು ‘ಮೂಕ ಜೀವ’ ಚಿತ್ರದಲ್ಲಿ ಹೇಳಿದ್ದಾರೆ. ಅವನೊಬ್ಬ ಮೂಗ, ಕಿವುಡ. ಎಲ್ಲವು ಸರಿಯಾಗಿದ್ದರೂ ಜೀವನ ನಡೆಸುವುದು ಕಷ್ಟ. ಇಂತಹವರಿಗೆ ಹೇಗೆ ಸಾಧ್ಯ?. ಆದರೆ ಇದರಲ್ಲಿ ಅಪಹಾಸ್ಯ ಮಾಡುವ ಬದಲು ಪ್ರೀತಿ, ಸಹಕಾರ ನೀಡಿದರೆ ಯಶಸ್ಸಿನ ಹಾದಿಯನ್ನು ತಲುಪುತ್ತಾರೆ ಎಂಬ ಅಂಶವನ್ನು ತೆರೆದಿಟ್ಟಿದ್ದಾರೆ. ನಟರಾಗಿದ್ದ ಶ್ರೀನಾಥವಸಿಷ್ಠ ಮೊದಲಬಾರಿ ನಿರ್ದೇಶಕರಾಗಿ ಒಳ್ಳೆಯ ಕಾದಂಬರಿಯನ್ನು ಆರಿಸಿಕೊಂಡಿದ್ದಾರೆ. ಯಾವುದೇ ಕಮರ್ಷಿಯಲ್ ಅಂಶಗಳನ್ನು ಬೆರಸದೆ ಸೂಕ್ಷ ವಿಚಾರವನ್ನು ನೇರ ದಿಟ್ಟ ಎನ್ನುವಂತೆ ಹಳ್ಳಿ ಹಾಗೂ ನಗರದ ಚಿತ್ರಣವನ್ನು ಯಥಾವತ್ ತೋರಿಸಿದ್ದಾರೆ.
ಸಾಕವ್ವನ ಮಗ ಶ್ರೀಕಂಠ ಕಿವಿ ಕೇಳದ, ಮಾತು ಬರುತ್ತಿರುವುದಿಲ್ಲ. ಅಕ್ಕ ಕಮಲಿ ಮೇಕೆ ಮೇಯಿಸಿಕೊಂಡು ಬದುಕು ಕಟ್ಟಿಕೊಂಡಿರುತ್ತಾಳೆ. ತನ್ನ ಪಾಡು ಅಂತ ಇದ್ದರೂ ಶ್ರೀಕಂಠನ ಮೇಲೆ ಇಲ್ಲಸಲ್ಲದ ಆರೋಪ ಆಗಾಗ ಬರುತ್ತಿರುತ್ತದೆ. ಗ್ರಾಮದ ಪಟೇಲ, ಆತನ ಚೇಳನಿಂದ ಊರ ಜನರ ಕೀಟಲೆಯಿಂದ ಅವನು ಊರು ಬಿಡಬೇಕಾಗುತ್ತದೆ. ಇದರ ನಡುವೆ ಕಮಲಿ ಪ್ರೀತಿಸಿದ ಹುಡುಗನೊಂದಿಗೆ ಮನೆ ಬಿಟ್ಟು ಹೋಗುತ್ತಾಳೆ. ದಿಕ್ಕುದೆಸೆ ಇಲ್ಲದ ಆತ ಬೆಂಗಳೂರಿಗೆ ಬಂದು ಅಕ್ಕನೊಂದಿಗೆ ಇರುವಾಗ ಬದುಕಲ್ಲಿ ಒಂದಷ್ಟು ಸಂಕಷ್ಟಗಳು ಎದುರಾಗುತ್ತವೆ. ಅವೆಲ್ಲಾವನ್ನು ಹೇಗೆ ಎದುರಿಸುತ್ತಾನೆ? ಮುಂದೆ ಏನಾಗುತ್ತಾನೆ? ಎಂಬುದನ್ನು ತಿಳಿಯಲು ಚಿತ್ರ ನೋಡಬಹುದು.
ಶ್ರೀಕಂಠನಾಗಿ ಶ್ರೀಹರ್ಷ ಪಾತ್ರಕ್ಕೆ ಜೀವ ತುಂಬಿದ್ದಾನೆ. ಅಕ್ಕನಾಗಿ ಮೇಘಶ್ರೀ, ಅಮ್ಮನಾಗಿ ಅಪೂರ್ವಶ್ರೀ, ಗೌಡನಾಗಿ ರಮೇಶ್‌ಪಂಡಿತ್ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ವಿ.ಮನೋಹರ್ ಸಂಗೀತದಲ್ಲಿ ಹಿನ್ನಲೆ ಶಬ್ದ ಹಿತವಾಗಿದೆ. ಎಂ.ವೆಂಕಟೇಶ್‌ಮಂಜುಳಾ ನಿರ್ಮಾಣ ಮಾಡಿರುವ ಚಿತ್ರವು ನೋಡಬಲ್.
****