ಪಯಣದ ಹಾದಿಯಲ್ಲಿ ಸಿಗುವ ರೋಚಕ ತಿರುವುಗಳು ****
‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರವು ಶೀರ್ಷಿಕೆ ಹೇಳುವಂತೆ ಪಯಣದಲ್ಲಿ ಸಾಗುವ ಕಥೆಯಾಗಿದೆ. ಅಮರ್ ಒಬ್ಬ ಬರಹಗಾರ. ತನ್ನ ಕುಂಚದ ಮೂಲಕ ಯಥಾವತ್ತಾಗಿ ಮರುಸೃಷ್ಟಿಸುವಂತ ಸಾಧಕ. ಅಕ್ಷತಾ ತಮ್ಮನ ಚಿಕಿತ್ಸೆಗೆ ಹಣ ಹೊಂದಿಸಲು ಪರಪುರುಷನ ಮುಂದೆ ದೇಹ ಸೌಂದರ್ಯವನ್ನು ತೋರಿಸುತ್ತಾಳೆ. ಮುಂದೆ ಇಬ್ಬರಲ್ಲೂ ಪ್ರೀತಿ ಹುಟ್ಟುತ್ತದೆ. ಕೆಲಸದ ನಿಮಿತ್ತ ವಿರಾಜಪೇಟೆಗೆ ಹೋಗುತ್ತಾನೆ. ಇತ್ತ ಪ್ರೇಮಿಯ ಎಕ್ಸಿಬಿಷನ್‌ಗೆ ಸಹಕಾರ ಮಾಡಲು ಮುಂದಾಗುತ್ತಳೆ. ಅಲ್ಲಿ ಕಾಮುಕನಿಂದ ಇವಳ ಮೇಲೆ ಅಪಪ್ರಚಾರ ಬರುತ್ತದೆ. ಅಮರ್ ಬರುವಾಗ ಕಾರಿನಲ್ಲಿ ನೀತು ಜತೆಗೆ ನಾಲ್ಕು ಅಪರಿಚಿತರು ಜತೆಯಾಗುತ್ತಾರೆ. ಮಾರ್ಗ ಮಧ್ಯದಲ್ಲಿ ಏನೇನು ಘಟನೆಗಳು ಸಂಭವಿಸುತ್ತದೆ. ಅವರೆಲ್ಲರು ಯಾರು? ನಿಗದಿತ ಸ್ಥಳಕ್ಕೆ ತಲುಪುತ್ತಾರಾ? ಎಲ್ಲಾ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಕ್ಲೈಮಾಕ್ಸ್‌ದಲ್ಲಿ ಸಿಗುತ್ತದೆ. ನಿರ್ದೇಶಕ ಕಿರಣ್.ಎಸ್.ಸೂರ್ಯ ನಾಜೂಕಾಗಿ ಚಿತ್ರಕಥೆಯನ್ನು ಸಿದ್ದಪಡಿಸಿದ್ದರಿಂದ ಎಲ್ಲಿಯೂ ನೋಡುಗರಿಗೆ ಬೋರ್ ಅನಿಸದಂತೆ ಮಾಡುವುದರಲ್ಲಿ ಸಪಲರಾಗಿದ್ದಾರೆ ಎನ್ನಬಹುದು.
ನಟ,ನಿರ್ದೇಶಕ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ನಾಯಕನಾಗಿ ಅಮರ್ ಪಾತ್ರವನ್ನು ಅದ್ಬುತವಾಗಿ ನಿಭಾಯಿಸಿದ್ದಾರೆ. ನಾಯಕಿಯರಾದ ಸ್ಪೂರ್ತಿಉಡಿಮನೆ, ವಿಜಯಶ್ರೀ ಕಲ್ಬುರ್ಗಿ ಪರದೆ ಮೇಲೆ ಚೆಂದ ಕಾಣಿಸುತ್ತಾರೆ. ಇವರೊಂದಿಗೆ ವಿಜಯಶ್ರೀಕಲ್ಬುರ್ಗಿ, ಬಲರಾಜವಾಡಿ, ಶೋಭನ್, ಪ್ರದೀಪ್, ರಮೇಶ್‌ನಾಯಕ್, ರಿನಿ ಗಮನ ಸೆಳೆಯುತ್ತಾರೆ. ಪ್ರಣವರಾವ್ ಸಂಗೀತದಲ್ಲಿ ಹಾಡುಗಳು ಒಮ್ಮೆ ಆಲಿಸಬಹುದು. ಸತ್ಯರಾಮ್ ಛಾಯಾಗ್ರಹಣ, ಗಣೇಶ್ ನಿರ್ಚಲ್ ಸಂಕಲನ, ಜೀವನ್ ನೃತ್ಯ, ಚಂದ್ರುಬಂಡೆ ಸಾಹಸ ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ಸುದರ್ಶನ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಜಿತಿನ್ ಪಟೇಲ್ ನಿರ್ಮಾಣ ಮಾಡಿದ್ದಾರೆ.
****