ಪೋಲೀಸ್ ಇದ್ದರೆ ಮಹಿಳೆಯರು ಸುರಕ್ಷಿತ****
ಪೋಲೀಸ್ ಅಂದರೆ ಭಯ ಪಡಬಾರದು. ಭಕ್ತಿ ಇರಬೇಕು. ದೇಶ ಅಂತ ಬಂದಾಗ ಎಲ್ಲರೂ ಯೋಧ ಆಗಬೇಕು. ಬೇಟೆಯಾಡೋ ಹುಲಿಗೆ ಬೌಂಡರಿ, ಬಾರ್ಡರ್ ಲೆಕ್ಕಕ್ಕೆ ಇಲ್ಲ. ಹೊಡಿತಾರದೆ ಅಷ್ಟೇ. ತಪ್ಪು ಮಾಡಿದವರಿಗೆ ದಂಡಂ ದಶಗುಣಂ. ಇಂತಹ ಮಾಸ್ ಡೈಲಾಗ್‌ಗಳು ’ಉಗ್ರಾವತಾರ’ ಚಿತ್ರದಲ್ಲಿ ತುಂಬಿಕೊಂಡಿದೆ. ಸಾಮಾಜಿಕ ಕಳಕಳಿ, ಹೆಣ್ಣಿಗೆ ಹೇಗೆ ಗೌರವ ಕೊಡಬೇಕು. ಅಮ್ಮ, ಅಕ್ಕ, ತಂಗಿಯನ್ನು ನೋಡುವಂತೆ, ಹೊರಗಡೆ ಅದೇ ರೀತಿಯಲ್ಲಿ ಕಾಣಬೇಕು. ಭಾರತದಲ್ಲಿ ಹೆಣ್ಣಮಕ್ಕಳ ಮೇಲೆ ಶೋಷಣೆ ನಡೆಯುತ್ತಲೆ ಇದೆ. ಸ್ವಯಂರಕ್ಷಣೆ, ಸುರಕ್ಷ ಆಪ್, ಪೋಲೀಸರಿಗೂ ಗೌರವ ಕೊಡಿ. ಅವರು ಸಮಾಜಕ್ಕೆ ರಕ್ಷಣೆ ಜತೆಗೆ ಸಹಾಯ ಮಾಡುತ್ತಾರೆ.
ಇವೆಲ್ಲವು ಸನ್ನಿವೇಶಗಳಲ್ಲಿ ಬರುತ್ತದೆ.
ಮೊದಲರ್ದ ಹುಬ್ಬಳ್ಳಿ, ವಿರಾಮದ ನಂತರ ಕಥೆಯು ಬೆಂಗಳೂರಿಗೆ ಬರುತ್ತದೆ. ಎಲ್ಲಾ ಕಡೆಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಶೋಷಣೆಯನ್ನು ತೋರಿಸಲಾಗಿದೆ. ಮಹಿಳೆಗೆ ತೊಂದರೆಯಾದರೆ ಮಹಿಳಾ ಪೋಲೀಸ್ ಅಧಿಕಾರಿ ರಕ್ಷಣೆಗೆ ಬರುವುದು ಇದರಲ್ಲಿ ವಿಶೇಷವಾಗಿದೆ. ಸೊಸೈಟಿದಲ್ಲಿ ದುರ್ಗಿಯಂತ ಪೋಲೀಸ್ ಇದ್ದರೆ ಮಹಿಳೆಯರು ಸುರಕ್ಷಿತವಾಗಿರಬಹುದು ಅಂತ ಹೇಳಲಾಗಿದೆ.
ನಿರ್ದೇಶಕ ಗುರುಮೂರ್ತಿ ಸಮಾಜದಲ್ಲಿ ನಡೆಯತಕ್ಕಂತ ಒಂದಷ್ಟು ನೈಜ ಅಂಶಗಳನ್ನು ಚಿತ್ರರೂಪಕ್ಕೆ ಬಳಸಿಕೊಂಡಿದ್ದಾರೆ. ಪ್ರತಿಯೊಂದು ದೃಶ್ಯಗಳನ್ನು ಹೂ ಪೋಣಿಸಿದಂತೆ ಸೃಷ್ಟಿಸಿ, ಎಲ್ಲಿಯೂ ಗೊಂದಲ ತರಿಸದೆ ನೋಡುಗರು ಇಷ್ಟಪಡುವಂತೆ ಮಾಡುವಲ್ಲಿ ಅವರ ಶ್ರಮ ಪರದೆ ಮೇಲೆ ಕಾಣಿಸುತ್ತದೆ. ಮೊದಲ ಚಿತ್ರವಾದರೂ ಅನುಭವಿ ನಿರ್ದೇಶಕರಂತೆ ಕಲಾವಿದರುಗಳಿಂದ ಕೆಲಸ ತೆಗೆಸಿಕೊಂಡಿದ್ದಾರೆ.
ದುರ್ಗಿಯಾಗಿ ಪ್ರಿಯಾಂಕ ಉಪೇಂದ್ರ ಆಕ್ಷನ್‌ದಲ್ಲಿ ಮಿಂಚಿದ್ದು, ಕೆಲವೊಮ್ಮೆ ಡ್ಯೂಪ್ ಬಳಸದೆ ಫೈಟ್ ಮಾಡಿದ್ದಾರೆ. ಖಾಕಿ ತೊಟ್ಟು ಶಿಸ್ತಿನ ಸಿಪಾಯಿಂತೆ ರಗಡ್ ಲುಕ್‌ದಲ್ಲಿ ದುರುಳರನ್ನು ಸದೆಬಡಿಯುತ್ತಾರೆ. ತಾನು ಸಾಹಸ ಮಾಡಬಲ್ಲೆ ಎಂಬುದಕ್ಕೆ ಈ ಚಿತ್ರವು ಸಾಕ್ಷಿಯಾಗಿದೆ. ಕೆಲವೊಂದು ಆಂಗಲ್‌ಗಳಲ್ಲಿ ವಿಜಯಶಾಂತಿ, ಮಾಲಾಶ್ರೀರನ್ನು ನೆನಪಿಗೆ ತರಿಸುತ್ತಾರೆ.
ಪೋಲೀಸ್ ಆಯುಕ್ತರಾಗಿ ಸುಮನ್, ಮುಗ್ದ ಹುಡುಗನಾಗಿ ನಟರಾಜ್‌ಪೇರಿ, ವೈದ್ಯರಾಗಿ ಪವಿತ್ರಾಲೋಕೇಶ್, ಖಳನಟರುಗಳಾಗಿ ದೀನಾ, ವರ್ಧನ್, ಸೂರ್ಯಪ್ರವೀಣ್, ಮಂಗಳಮುಖಿ ಕಾಂಚನ ಆಗಿ ರೋಬೋಗಣೇಶ್, ಅಂಕಿತಾ, ಲಕ್ಷೀಶೆಟ್ಟಿ, ಲೀಲಾಮೋಹನ್ ಮುಂತಾದವರು ಕಡಿಮೆ ಅವಧಿಯಲ್ಲಿ ಬಂದರೂ ಗಮನ ಸೆಳೆಯುತ್ತಾರೆ.
ಕೃಷ್ಣ ಬಸ್ರೂರು ಸಂಗೀತ, ಕೆಜಿಎಫ್ ಖ್ಯಾತಿ ಕಿನ್ನಾಲ್‌ರಾಜ್ ಸಂಭಾಷಣೆ, ನಂದಕುಮಾರ್ ಕ್ಯಾಮಾರ ಇದೆಲ್ಲಕ್ಕೂ ಪೂರಕವಾಗಿದೆ. ಎಸ್.ಜಿ.ಸತೀಶ್ ನಿರ್ಮಾಪಕರಾಗಿ ಪ್ರಥಮ ಅನುಭವದಲ್ಲೇ ಉತ್ತಮ ಚಿತ್ರ ನೀಡಿದ್ದಾರೆ ಎನ್ನಬಹುದು.