ಮಾಸ್ಗೆ ಮಾಸ್, ಕ್ಲಾಸ್ಗೆ ಕ್ಲಾಸ್ ಮಾರ್ಟಿನ್****
ಮೂರು ವರ್ಷಗಳಿಂದ ಸುದ್ದಿಯಾಗಿದ್ದ ಅದ್ದೂರಿ ಚಿತ್ರ ‘ಮಾರ್ಟಿನ್’ ಅಂದುಕೊಂಡಂತೆ ಅಭಿಮಾನಿಗಳಿಗೆ ಬಾಡೂಟ ಸಿಕ್ಕಂತೆ ಆಗಿದೆ. ಕಥೆಯಲ್ಲಿ ಇಂಡಿಯನ್ ಟ್ಯಾಟೂ ಹಾಕಿಸಿಕೊಂಡು ಶಕ್ತಿಶಾಲಿಯಾಗಿದ್ದ ಆತ ಪಾಕಿಸ್ತಾನದ ನೆಲದಲ್ಲಿ ತನ್ನ ಪರಾಕ್ರಮವನ್ನು ತೋರಿಸಿ ಯಶಸ್ವಿಯಾಗುತ್ತಾನೆ. ಆದರೆ ಅವನಿಗೆ ತನ್ನ ಹಿನ್ನೆಲೆ ತಿಳಿಯದ ಕಾರಣ ತನ್ನ ಅಸ್ತಿತ್ವನ್ನು ಹುಡುಕಲು ಶುರು ಮಾಡುತ್ತಾನೆ. ಈ ಮಧ್ಯೆ ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಲು ಸಂಚು ಹೂಡುತ್ತಾರೆ. ಇದನ್ನು ತಿಳಿದ ಮೇಲೆ ಅವನು ಯಾವ ರೀತಿಯಲ್ಲಿ ಹೋರಾಡುತ್ತಾನೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಮಿಕ್ಕಂತೆ ಜಬರ್‌ದಸ್ತ್ ಸಾಹಸ ದೃಶ್ಯಗಳು, ಕಣ್ಣಿಗೆ ತಂಪು ನೀಡುವ ಸುಂದರ ತಾಣಗಳು. ಇವೆಲ್ಲವನ್ನು ಚಿತ್ರಮಂದಿರದಲ್ಲಿ ನೋಡುವುದು ಒಳಿತು.
ಧ್ರುವಸರ್ಜಾ ಎಂದಿನಂತೆ ಅಭಿನಯ, ಆಕ್ಷನ್‌ದಲ್ಲಿ ಮಿಂಚಿದ್ದಾರೆ. ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ತೆರೆ ಮೇಲೆ ಕಾಣಿಸುತ್ತದೆ. ನಾಯಕಿ ವೈಭವಿಶಾಂಡಿಲ್ಯಗೆ ಹೆಚ್ಚು ಅವಕಾಶ ಸಿಕ್ಕಿದೆ. ಆದರೂ ಉಪನಾಯಕಿ ಅನ್ವೇಶಿಜೈನ್ ಅವರಿಂದ ಸಿನಿಮಾಕ್ಕೆ ತಿರುವು ಬರುತ್ತದೆ. ಸುಕೃತವಾಗ್ದೆ, ಅಚ್ಯುತಕುಮಾರ್, ನಿಕಿತಿನ್‌ಧೀರ್ ಹಾಗೆ ಬಂದು ಮಾಯವಾಗುತ್ತಾರೆ. ಚಿಕ್ಕಣ್ಣ ನಗಿಸದೆ ಗಂಭೀರವಾಗಿರುವುದು ವಿಶೇಷ. ರವಿಬಸ್ರೂರು ಸಂಗೀತದ ಹಾಡುಗಳು, ಸತ್ಯಹೆಗಡೆ ಛಾಯಾಗ್ರಹಣ ಪ್ಲಸ್ ಪಾಯಿಂಟ್ ಎನ್ನಬಹುದು. ನಿರ್ಮಾಪಕ ಉದಯ್‌ಮೆಹ್ತಾ ಹಣವನ್ನು ನೀರಿನಂತೆ ಖರ್ಚು ಮಾಡಿರುವುದು ಸಿನಿಮಾದ ಪ್ರತಿ ಹಂತದಲ್ಲಿಯೂ ಕಂಡುಬರುತ್ತದೆ. ನೋಡೌಟ್ ಒಮ್ಮೆ ಮಾರ್ಟಿನ್ ನೋಡಬಹುದು.
****