ಡ್ರಗ್ಸ್ ಮಾಫಿಯಾ ಸುತ್ತ****
ಯುವ ಜನರ ಬದುಕನ್ನು ಹಾಳು ಮಾಡಲು ಡ್ರಗ್ಸ್ ಮಾರಿಯಂತೆ ಬಂದಿದೆ. ಇದರ ಅಂಶಗಳನ್ನು ಇಟ್ಟುಕೊಂಡು ‘’ಪ್ರಕರಣ ತನಿಖಾ ಹಂತದಲ್ಲಿದೆ’ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ದಕ್ಷ ಪೋಲೀಸ್ ಅಧಿಕಾರಿ ಸರಣಿ ಕೊಲೆಗಳನ್ನು ಭೇದಿಸಲು ಹೋದಾಗ ಡ್ರಗ್ಸ್ ಜಾಲ ತೆರೆದುಕೊಳ್ಳುತ್ತದೆ. ಇದರ ಜಾಲ ಹೇಗೆ ಕೆಲಸ ಮಾಡುತ್ತದೆ. ಒಬ್ಬರ ನಂತರ ಮತ್ತೋಬ್ಬರ ನಿಗೂಢ ಹತ್ಯೆ ನಡೆಯುತ್ತದೆ. ಈ ಮಾರಾಟದ ಹಾದಿಯಲ್ಲಿ ಮೂಟೆಯಲ್ಲಿ ಇದ್ದ ಶವವೊಂದು ಪತ್ರೆಯಾಗುತ್ತದೆ. ತನಿಖೆಗೆ ಮುಂದಾದ ಅಧಿಕಾರಿಗಳಿಗೆ ತಲೆ ಇಲ್ಲದ ದೇಹ ಸಿಗುತ್ತದೆ. ಅದರ ಸಾಕ್ಷಿ ಬೆನ್ನಟಿ ಹೋದಾಗ ಒಂದರ ಹಿಂದೊಂದು ರಹಸ್ಯಗಳು ಸಿಗುತ್ತದೆ. ಎಲ್ಲದಕ್ಕೂ ಕ್ಲೈಮಾಕ್ಸ್‌ದಲ್ಲಿ ಉತ್ತರವನ್ನು ಸೊಗಸಾಗಿ ಹೇಳಿದ್ದಾರೆ.
ಸುಂದರ್.ಎಸ್. ನಿರ್ದೇಶನದಲ್ಲಿ ಸನ್ನಿವೇಶಗಳು ಗೊಂದಲ ತರಿಸದೆ ನೋಡುಗರಿಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿರುವುದು ವಿಶೇಷ. ಮಹೀನ್‌ಕುಬೇರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮುತ್ತುರಾಜ್.ಟಿ, ರಾಜ್‌ಗಗನ್ ಮುಂತಾದವರು ನಟಿಸಿದ್ದಾರೆ. ಶಿವಂ ಸಂಗೀತ, ಎಂ.ಎಸ್.ಮೋಹನ್ ಮತ್ತು ಜಗದೀಶ್ ಛಾಯಾಗ್ರಹಣ, ನಾನಿಕೃಷ್ಣ ಸಂಕಲನ ಚಿತ್ರಕ್ಕಿದೆ. ಕರದಾಯಾಮ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಚಿಂತನ್ ಕಂಬಣ್ಣ ನಿರ್ಮಾಣ ಮಾಡುವ ಜೊತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
****