ಮಾಲ್ ಹಿಂದಿನ ಘೋರ ರಹಸ್ಯ****
ಶುಕ್ರವಾರ ತೆರೆಕಂಡಿರುವ ನಾಲ್ಕು ಸಿನಿಮಾಗಳ ಪೈಕಿ ‘ಮಾಂತ್ರಿಕ’ ಚಿತ್ರವು ವಿಭಿನ್ನವಾಗಿದೆ ಎನ್ನಬಹುದು. ಕೃಷ್ಣಸಂಕಲ ಬ್ರಾಂಡಿಂಗ್ ಪಿಕ್ಚರ‍್ಸ್ ಲಾಂಛನದಲ್ಲಿ ವ್ಯಾನವರ್ಣ ಜಮ್ಮುಲ ಸಿನಿಮಾಕ್ಕೆ ಬರವಣಿಗೆ, ಚಿತ್ರಕಥೆ,ಸಂಭಾಷಣೆ, ಸಂಕಲನ, ನಿರ್ದೇಶನ ಮಾಡುವ ಜತೆಗೆ ನಿರ್ಮಾಣ ಹಾಗೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇದೊಂದು ಘೋಸ್ಟ್ ಹಂಟರ್ ಸುತ್ತ ನಡೆಯುವ ಇಂಟಲೆಕ್ಚುಯಲ್, ಸೆಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ದೆವ್ವ ಅನ್ನೋದು ಇದೆಯೋ, ಇಲ್ಲವೋ ಅಥವಾ ಅದೆಲ್ಲಾ ನಮ್ಮ ಭ್ರಮೆಯೋ ಎಂಬ ವಿಷಯದ ಮೇಲೆ ಸಾಗುತ್ತದೆ. ಮೂಡನಂಬಿಕೆಗಳ ಮೇಲೆ ಯಾರೂ ಅವಲಂಬಿತರಾಗಬಾರದು ಎಂಬುದನ್ನು ತೋರಿಸಲಾಗಿದೆ.
. ನಂಬಿಕೆ, ಅಸಹಾಯಜಕತೆ ಮತ್ತು ಭಯ ಇವುಗಳ ಸುತ್ತ ಹೇಳ ಹೊರಟಿದ್ದಾರೆ. ಇಲ್ಲಿ ದೆವ್ವ ಯಾರು? ನಾಯಕ ಅವುಗಳನ್ನು ಹುಡುಗಿಕೊಂಡು ಹೋಗುವುದು ಯಾಕೆ? ಕಾಣದೆ ಇರುವ ಆತ್ಮ ಹಾಗೂ ದೆವ್ವಗಳ ಇರುವಿಕೆಯ ಬಗ್ಗೆ ಚರ್ಚೆ ಮಾಡುವಂತೆ ಸನ್ನಿವೇಶಗಳು ಮೂಡಿಬಂದಿದೆ.
ರಾಧಿಕಾಮಾಲಿ ಮತ್ತು ಮೈಥಿಲಿ ನಾಯಕ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದುಶ್ಯಂತ್, ಜಗದೀಶ್ ತಮಗೆ ನೀಡಿದ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ಟಾಲಿನ್ ಸಂಗೀತ, ಅನಿಲ್‌ಆಂಟೋನಿ-ರಮೇಶ್‌ಮರ್ರಿ ಛಾಯಾಗ್ರಹಣ, ಲಯನ್.ಜಿ.ಗಂಗರಾಜು ಸಾಹಸ ಇವೆಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ.
****