ಉಪ್ಪಿ ಸಿನಿಮಾ ನೋಡುಗರ ಭಾವಕ್ಕೆ ನೋಡುಗರ ಚಿಂತನೆಗೆ****
ಉಪೇಂದ್ರ ‘ಎ’ ‘ಉಪೇಂದ್ರ’ ಮತ್ತು ‘ಉಪ್ಪಿ-೨’ ಚಿತ್ರದಿಂದಲೂ ಬೇರೆ ರೀತಿಯ ಕಂಟೆಂಟ್ಗಳನ್ನು ಪ್ರೇಕ್ಷಕರಿಗೆ ಕೊಡುತ್ತಾ ಬಂದಿರುವುದರಿಂದ ಅವರನ್ನು ರಿಯಲ್ ಸ್ಟಾರ್ ಅಂತ ಕರೆಯುತ್ತಿದ್ದರು. ಅದರಂತೆ ‘ಯುಐ’ ಚಿತ್ರದಲ್ಲಿ ಅದನ್ನೇ ಮುಂದುವರೆಸಿಕೊಂಡು ಮತ್ತಷ್ಟು ಅಪ್ಡೇಟ್ ಆಗಿರುವುದು ಕಂಡು ಬರುತ್ತದೆ. ಚಿತ್ರದ ಅಂಶಗಳು ದೊಡ್ಡದಾಗಿದೆ. ದೇಶ, ಭಾಷೆ, ಜಾತಿ, ಧರ್ಮ, ಪ್ರಕೃತಿಯ ಅಸಮತೋಲನ ಎಲ್ಲವನ್ನು ಒಂದೇ ಗುಕ್ಕಿ ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲಾವನ್ನು ಅರ್ಥ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಏನೆಲ್ಲಾ ಅನುಭವಿಸಬೇಕಾದೀತು ಎಂಬುದನ್ನು ನಿರ್ದೇಶಕರು ಜಾಣ್ಮೆಯಿಂದ ದೃಶ್ಯಗಳಲ್ಲಿ ತೋರಿಸಿದ್ದಾರೆ. ಪ್ರಸಕ್ತ ಮನುಷ್ಯ ದುರಾಸೆಯಿಂದ ಪರಿಸರದ ಮೇಲೆ ದೌರ್ಜನ್ಯ ನಡೆಸುತ್ತಾನೆ. ಇದನ್ನೆ ಸಿನಿಮಾದಲ್ಲಿ ಪ್ರಸ್ತಾಪಿಸಲಾಗಿದೆ. ಮೇಲ್ನೋಟಕ್ಕೆ ಒಂದು ಕಥೆ ಅಂತ ಇದ್ದರೂ, ಅಂತರಾಳದಲ್ಲಿ ಹಲವು ಕಥೆಗಳು ತುಂಬಿಕೊಂಡಿದೆ. ಇದೆಲ್ಲಾವನ್ನು ಎಷ್ಟು ಹೇಳಬೇಕೋ ಅಷ್ಟನ್ನು ಹೇಳಿಬಿಟ್ಟಿದ್ದಾರೆ ಎನ್ನಬಹುದು. ಆದರೆ ಇದು ಎಷ್ಟು ಜನರಿಗೆ ಅರ್ಥವಾಗುತ್ತದೆ ಎಂಬುದನ್ನು ಹೇಳಲು ಕಷ್ಟವಾಗುತ್ತದೆ.
ಎಲ್ಲಾ ಚಿತ್ರದಲ್ಲಿ ಇರುವಂತೆ ಇಲ್ಲೂ ನಾಯಕ, ನಾಯಕಿ, ವಿಲನ್, ತಾಯಿ ಇರುತ್ತಾರೆ. ಇಂತಹ ಪಾತ್ರಗಳು ಮಾಮೂಲಿ ಆಗಿರದೆ ಅಮ್ಮನನ್ನು ಪ್ರಕೃತಿ ಮಾತೆಗೆ ಹೋಲಿಸಿ, ನಾಯಕನನ್ನು ಕಲ್ಕಿ ಅವತಾರದಲ್ಲಿ, ಇಷ್ಟಪಡುವ ಹುಡುಗಿ, ವ್ಯವಸ್ಥೆಯ್ನನ್ನು ಅವ್ಯವಸ್ಥೆ ಮಾಡುವ ಖಳನಾಯಕ. ಇವೆಲ್ಲಾವನ್ನು ಇಟ್ಟುಕೊಂಡು ಇದರ ಮೂಲಕ ಹಲವು ವಿಷಯಗಳನ್ನು ಹೇಳಿರುವುದು ಸಮಂಜಸವಾಗಿದೆ. ಹಾಗಂತ ಕಥೆಯನ್ನು ಒಂದು ಏಳೆಯಲ್ಲಿ ಹೇಳಲು ಆಗದು. ಸಕರಾತ್ಮಕ, ನಕರಾತ್ಮಕ ಎರಡು ಇರುತ್ತದೆ. ನೋಡುಗನ ಮೆದುಳಿಗೆ ಕೈ ಹಾಕದೆ, ಏನು ಹೇಳಬೇಕೋ ಅದನ್ನು ನೇರವಾಗಿ ಹೇಳಿ, ಅದು ಎಲ್ಲರಿಗೂ ತಲುಪುವಂತೆ ಮಾಡಿದ್ದಾರೆ. ಅದಕ್ಕೆ ಅವರವರ ಬುದ್ದಶಕ್ತಿಗೆ ಬಿಟ್ಟಿದ್ದು. ಮುಂದಿನ ಪ್ರಪಂಚ ಹೇಗಿರುತ್ತದೆ ಅಂತ ಕಟ್ಟಿಕೊಟ್ಟಿರುವ ಪರಿ ಪ್ಲಸ್ ಪಾಯಿಂಟ್ ಆಗಿದೆ.
ಒಂಬತ್ತು ವರ್ಷಗಳ ನಂತರ ಆಕ್ಷನ್ ಕಟ್ ಹೇಳಿರುವ ಉಪೇಂದ್ರ ನಟನೆ ಜತೆಗೆ ಬರವಣಿಗೆಯಲ್ಲಿ ಮತ್ತೋಮ್ಮೆ ಸೈ ಅನಿಸಿಕೊಂಡಿದ್ದಾರೆ. ನಾಯಕಿ ರೀಷ್ಮಾನಾಣಯ್ಯ. ಉಳಿದಂತೆ ಸಾಧುಕೋಕಿಲ, ರವಿಶಂಕರ್, ಅಚ್ಯುತಕುಮಾರ್, ಗುರುಪ್ರಸಾದ್ ಸೇರಿದಂತೆ ಹಲವು ಕಲಾವಿದರು ಯುಐ ಪ್ರಪಂಚದಲ್ಲಿ ಭಿನ್ನವಾಗಿ ಕಾಣುತ್ತಾರೆ. ಅಜನೀಶ್ಲೋಕನಾಥ್ ಸಂಗೀತ ಸಿನಿಮಾಕ್ಕೆ ಮೆರುಗು ತಂದಿದೆ. ಒಟ್ಟಾರೆ ಮನರಂಜನೆ ಅಂತ ಹೋದರೆ ಉಪೇಂದ್ರ ಮೋಸ ಮಾಡಿಲ್ಲ.
****