ರೌಡಿಸಂ ಹಾಗೂ ಪ್ರೀತಿ ಸುತ್ತ ಸಂಘರ್ಷಗಳು****
‘ಗನ್ಸ್ ಅಂಡ್ ರೋಸಸ್’ ಚಿತ್ರವು ರೌಡಿಸಂ ಮತ್ತು ಪ್ರೀತಿನ ನಡುವಿನ ಕಥೆಯನ್ನು ಹೇಳಹೊರಟಿದೆ. ‘ಓಂ’ ನಂತರ ಇಂತಹ ಕಥೆಗಳು ಸಾಕಷ್ಟು ಬಂದು ಹೋಗಿವೆ. ಆ ಸಾಲಿಗೆ ಇದು ಸೇರ್ಪಡೆಯಾಗುತ್ತದೆ. ಆದರೆ ಇದರಲ್ಲಿ ಇನ್ನುಷ್ಟು ವಿಷಯಗಳನ್ನು ತೋರಿಸಿದ್ದಾರೆ. ಡ್ರಗ್ಸ್ ಜಾಲ, ಇಬ್ಬರು ಪಂಟರ್‌ಗಳ ನಡುವಿನ ದ್ವೇಷ. ಪೋಲೀಸರ ಹತಾಶೆ. ಇದೆಲ್ಲದರ ಮಧ್ಯೆ ನವಿರಾದ ಲವ್ ಸ್ಟೋರಿ ಇದೆ. ರಾಜೇಂದ್ರ ಮತ್ತು ನಾಯಕ್ ಇಬ್ಬರು ರೌಡಿಗಳ ಸ್ನೇಹ, ಕಲಹದಿಂದ ಚಿತ್ರವು ಶುರುವಾಗುತ್ತದೆ. ಬೆಂಗಳೂರಿನಲ್ಲಿ ತನ್ನದೆ ಸಾಮ್ರಾಜ್ಯ ನಡೆಯಬೇಕೆಂಬುದು ಅವರ ಬಯಕೆಯಾಗಿರುತ್ತದೆ. ಮುಂದೆ ಎರಡು ಗ್ಯಾಂಗ್‌ಗಳು ಗಾರ್ಡನ್ ಸಿಟಿ ಬೆಂಗಳೂರನ್ನು ಡ್ರಗ್ಸ್ ಸಿಟಿ ಮಾಡುವಾಗ, ಪೋಲೀಸರಿಗೆ ತಲೆ ನೋವಾಗುತ್ತದೆ. ಇವರನ್ನು ಸದೆಬಡಿಯಲು ಎನ್‌ಕೌಂಟರ್ ಸ್ಟೆಷಲಿಸ್ಟ್ ಆಗಮನವಾಗುತ್ತದೆ. ಮುಂದೆ ಏನೇನು ಆಗಬಹುದೆಂಬು ನೀವುಗಳು ಊಹಿಸಬಹುದು. ಕಷ್ಟವಾದಲ್ಲಿ ಚಿತ್ರಮಂದಿರಕ್ಕೆ ಬಂದರೆ ಉತ್ತರ ಸಿಗುತ್ತದೆ.
ನಿರ್ದೇಶಕ ಹೆಚ್.ಎಸ್.ಶ್ರೀನಿವಾಸಕುಮಾರ್ ಸೃಷ್ಟಿಸಿರುವ ಸನ್ನಿವೇಶಗಳು ನೋಡುಗರಿಗೆ ಬೋರ್ ಅನಿಸುವುದಿಲ್ಲ. ಖ್ಯಾತ ಕಥೆಗಾರ ಅಜಯ್‌ಕುಮಾರ್ ಮಗ ಅರ್ಜುನ್ ನಾಯಕನಾಗುವ ಅರ್ಹತೆ ಹೊಂದಿದ್ದಾರೆ. ಚಿತ್ರರಂಗಕ್ಕೆ ಹೀರೋ ಪರಿಚಯವಾಗಿದ್ದಾರೆ ಎನ್ನಬಹುದು. ನಾಯಕಿ ಯಶ್ವಿಕಾನಿಷ್ಕಲಾಗೆ ಹೆಚ್ಚು ಸ್ಕೋಪ್ ಸಿಗದೆ ಇದ್ದರೂ ಸಿಕ್ಕ ಅವಕಾಶದಲ್ಲಿ ನ್ಯಾಯ ಒದಗಿಸಿದ್ದಾರೆ. ಇನ್ನು ಅವಿನಾಶ್, ಕಿಶೋರ್, ಸುಚೇಂದ್ರಪ್ರಸಾದ್, ಶೋಭರಾಜ್ ಮುಂತಾದವರು ಎಂದಿನಂತೆ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಎಚ್.ಆರ್.ನಟರಾಜ್ ನಿರ್ಮಾಣ ಮಾಡಿದ್ದಾರೆ.
****