ಛೂ ಮಂತರ್ ಊಹಿಸದ ತಿರುವುಗಳು****
‘ಕರ್ವ’ ‘ಬಕಾಸುರ’ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ನವನೀತ್ ಮೂರನೆ ಸಿನಿಮಾ ‘ಛೂ ಮಂತರ್’ ಹಾರರ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿದೆ. ವಿದೇಶದಲ್ಲಿರುವ ನೈನತಾಲ್‌ನ ಬ್ರಿಟಿಷರ ದೊಡ್ಡ ಬಂಗಲೆಯಲ್ಲಿ ದೆವ್ವದ ಕಾಟ ಇರುತ್ತದೆ. ಅದನ್ನು ಹೋಗಲಾಡಿಸಲು ಅತೀಂದ್ರಿಯ ಶಕ್ತಿಗಳನ್ನು ಮಟ್ಟಹಾಕುವಲ್ಲಿ ಹೆಸರು ಮಾಡಿರುವ ಬೆಂಗಳೂರಿನ ಡೈನಮೋ (ಶರಣ್) ತನ್ನ ತಂಡದೊಂದಿಗೆ ಅಲ್ಲಿಗೆ ಹೋಗುತ್ತಾನೆ. ಅಂತೆಯೇ ಪ್ರೇತ ಬಿಡುಸುತ್ತಾನೆ. ಇಲ್ಲಿಗೆ ಶುಭಂ ಬಂತು ಅಂದರೆ, ನಿರ್ದೇಶಕರು ಅಷ್ಟು ಸುಲಭಕ್ಕೆ ಸಿನಿಮಾ ಮುಗಿಸದೆ ತಿರುವುಗಳ ಮೇಲೆ ತಿರುವುಗಳನ್ನು ಕೊಡುತ್ತಾ ಹೋಗುತ್ತಾರೆ. ಯಾವ ಮಟ್ಟಕ್ಕೆ ಎಂದರೆ ಕ್ಲೈಮಾಕ್ಸ್ ಬಂದರೂ ಮುಂದುವರೆದ ಭಾಗ ಬರಬಹುದು ಎಂಬ ಸುಳಿವು. ಮತ್ತೋಂದು ಕಡೆ ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳ ಪಾತ್ರಗಳನ್ನು ನೆನಪಿಸುತ್ತಾರೆ. ಇನ್ನು ಹಾರರ್ ದೃಶ್ಯಗಳಿಗೆ ಏನು ಬೇಕೋ ಅವೆಲ್ಲವೂ ಇದರಲ್ಲಿ ಹೇರಳವಾಗಿ ತುಂಬಿಕೊಂಡಿದೆ. ಕೆಲವೊಮ್ಮೆ ಮೈನಸ್ ಆಗಿದ್ದರೂ, ಕುತೂಹಲ ಸನ್ನಿವೇಶಗಳು ಇದೆಲ್ಲಾವನ್ನು ನೆನಪಿಗೆ ತರಿಸೋದಿಲ್ಲ.
ನಾಯಕ ಶರಣ್ ಚಿತ್ರದುದ್ದಕ್ಕೂ ಓಡಾಡುತ್ತಾರೆದಯೊ ಹೊರತು ನಟನೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಹೆದರಿಸಲು ನಾಯಕಿಯರುಗಳಾದ ಅದಿತಿಪ್ರಭುದೇವ, ಮೇಘನಾಗಾಂವ್ಕರ್, ರಂಜಿನಿಭಾರದ್ವಾಜ್ ಬರುತ್ತಾರೆ. ಚಿಕ್ಕಣ್ಣ ಕಾಮಿಡಿ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ. ಓಂಪ್ರಕಾಶ್‌ರಾವ್, ಶಂಕರ್‌ಅಶ್ವಥ್ ಮುಂತಾದವರು ನಟಿಸಿದ್ದಾರೆ. ಚಂದನ್‌ಶೆಟ್ಟಿ ಸಂಗೀತ, ಅವಿನಾಶ್‌ಬಾಸುತ್ಕರ್ ಹಿನ್ನಲೆ ಶಬ್ದ, ಅನೂಪ್‌ಕಟ್ಟಿಕಾರನ್ ಛಾಯಾಗ್ರಹಣ, ರವಿವರ್ಮ ಸಾಹಸ ಎಲ್ಲವೂ ಸಿನಿಮಾಕ್ಕೆ ಪೂರಕವಾಗಿದೆ. ನಿರ್ಮಾಪಕ ತರುಣ್‌ಶಿವಪ್ಪ ಉತ್ತಮ ಸಿನಿಮಾ ಕೊಟ್ಟಿದ್ದಾರೆ ಎನ್ನಬಹುದು.
****