ತಾರಕೇಶ್ವರನ ಸಂಹಾರ****
ಭಕ್ತಿ ಪ್ರಧಾನ ‘ತಾರಕೇಶ್ವರ’ ಚಿತ್ರವು ತಾರಕಾಸುರನ ಕುರಿತಾಗಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ. ಆದರೂ ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನನ್ನು ಕೇಳಿಕೊಳ್ಳ್ಳುತ್ತಾನೆ. ಶಿವ-ಪಾರ್ವತಿಗೆ ಹುಟ್ಟಿದ ಮಗನಿಂದ ನಿನಗೆ ಸಾವು ಸಂಭವಿಸುತ್ತದೆಂದು ಹೇಳಿ ಬ್ರಹ್ಮನು ವರ ನೀಡಿರುತ್ತಾನೆ. ಇತ್ತ ಶಿವನು ತಪಸ್ಸಿಗೆ ಕುಳಿತುಕೊಂಡಿರುತ್ತಾನೆ. ಇದನ್ನು ಅರಿತ ಆತನು ಶಿವ ಎಂದಿಗೂ ಮದುವೆಯಾಗುವುದಿಲ್ಲೆವೆಂದು ಎಲ್ಲರಿಗೂ ತೊಂದರೆ ಕೊಡುತ್ತಿರುತ್ತಾನೆ. ಮತ್ತೋಂದು ಕಡೆ ಹಿಮವಂತನ ಮಗಳು ಪಾರ್ವತಿ ಶಿವನ ಪಾಲಿಕೆಯಾಗಿ, ಆತನನ್ನೇ ಮದುವೆಯಾಗಬೇಕೆಂದು ಪಣ ತೊಟ್ಟು ಪೂಜಿಸಿರುತ್ತಾಳೆ. ಮುಂದೆ ಶಿವನು ಮದುವೆಯಾಗುತ್ತಾನಾ? ಪಾರ್ವತಿಯ ಇಚ್ಚೆ ನೆರವೇರುತ್ತದಾ? ತಾರಕಾಸುರನನ್ನು ಯಾರು ಸಾಯಿಸುತ್ತಾರೆ. ಇದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿನಿಮಾ ನೋಡಿದರೆ ತಿಳಿಯುತ್ತದೆ.
ಭಕ್ತಿ ಸಿನಿಮಾಗಳಿಗೆ ಹೆಸರು ಮಾಡಿರುವ ಪುರುಷೋತ್ತಮ್ ಓಂಕಾರ್ ಈ ಬಾರಿಯೂ ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿ ಸೈ ಅನಿಸಿಕೊಂಡಿದ್ದಾರೆ. ನಿರ್ಮಾಪಕ ಮತ್ತು ನಾಯಕ ಗಣೇಶ್‌ರಾವ್ ಕೇಸರ್‌ಕರ್ ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಹೀಗೆ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿ ಇಡೀ ಚಿತ್ರವನ್ನು ಹೆಗೆಲ ಮೇಲೆ ಹೊತ್ತುಕೊಂಡಿದ್ದಾರೆ. ಇವರ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ.
ರಾಜನ ಮಗಳು, ಶಿವ ಭಕ್ತೆ, ಪಾರ್ವತಿಯಾಗಿ ರೂಪಾಲಿ ನಾಯಕಿ. ಬಾಲ ಸುಬ್ರಹ್ಮಣ್ಯನಾಗಿ ಬಾಲನಟಿ ಋತುಸ್ಪರ್ಶ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಶಂಕರಭಟ್,ಶ್ರೀವಿಷ್ಣು, ಜಿಮ್‌ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ ಮುಂತಾದವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಾಜ್‌ಭಾಸ್ಕರ್ ಸಂಗೀತ ಅಲ್ಲಲ್ಲಿ ಕೆಲಸ ಮಾಡಿದೆ. ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತಪ್ರವೀಣ್, ಬಸವರಾಜ್‌ದೇಸಾಯಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಒಮ್ಮೆ ನೋಡಲು ಅಡ್ಡಿಯಿಲ್ಲ.
****