Love Reddy.Reviews

Friday, November 22, 2024

36

ಕಾಡುವ ಪ್ರೇಮ ಕಥೆ****

        ಕಾಲಕಾಲಕ್ಕೆ ತಕ್ಕಂತೆ ಪ್ರೇಮ ಕಥೆಗಳು ಹುಟ್ಟಿಕೊಳ್ತವೆ. ಅದು ಚಿತ್ರರಂಗದಲ್ಲಿ ಇರುವ ಸದ್ಯದ ಪರಿಸ್ಥಿತಿಯಾಗಿದೆ. ಆ ಸಾಲಿಗೆ ಹೊಸಬರ ‘ಲವ್ ರೆಡ್ಡಿ’ ಸಿನಿಮಾವು ಸೇರ್ಪಡೆಯಾಗಿದೆ. ಹೊಸ ದಾರಿಯಲ್ಲಿ ಸಾಗುವ ಚಿತ್ರವು ನೋಡುಗರನ್ನು ಕಾಡುವುದು ಅಲ್ಲದೆ ಮನಸ್ಸನ್ನು ಕದಡಿಸುತ್ತಾ, ಮೌನಕ್ಕೆ ತಳ್ಳುತ್ತದೆ. ಬಾಗೇಪಲ್ಲಿಯ ನಾರಾಯಣರೆಡ್ಡಿ ಎನ್ನುವವರ ಜೀವನದಲ್ಲಿ ನಡೆದ ಸತ್ಯ ಘಟನೆಯನ್ನು ಚಿತ್ರರೂಪಕ್ಕೆ ತರಲಾಗಿದೆ

       ಸರ್ಕಾರಿ ಬಸ್‌ನಲ್ಲಿ ಪ್ರಯಾಣ ಮಾಡುವ ಆತನಿಗೆ ಅದೇ ಜಾಗದಲ್ಲಿ ಹುಡುಗಿಯೊಬ್ಬಳು ಸಿಗುತ್ತಾಳೆ. ಪ್ರಾರಂಭದಲ್ಲಿ ಪರಿಚಯ, ಪ್ರೇಮ. ಮುಂದೆ ಕುಟುಂಬದ ಒಡನಾಟದಿಂದ ಮದುವೆಗೆ ಒತ್ತಡ. ವಿರಾಮದ ಬಳಿಕ ಸನ್ನಿವೇಶಗಳು ಬೇಗನೆ ಬರುತ್ತದೆ.  ಅಲ್ಲೊಂದು ತಿರುವು, ಆತಂಕಗಳು ಬಂದು ಕುತೂಹಲ ಕೆರಳಿಸುವುದೇ ವಿಶೇಷ. ಲವ್‌ದಲ್ಲಿ ಒಬ್ಬರಲ್ಲ ಒಬ್ಬರಿಗೆ ಕನೆಕ್ಟ್ ಆಗುತ್ತದೆಂದು ತೋರಿಸುತ್ತಾ ಪ್ರೀತಿಗೆ ಅಂಥಹುದೇ ಗುಣವಿರುತ್ತದೆ ಅಂತ ಹೇಳಲಾಗಿದೆ. ತೆಲುಗು ನಾಯಕ, ನಾಯಕಿ ಇದ್ದರೂ ಪೋಷಕ ಕಲಾವಿದರು ಕನ್ನಡಿಗರು ಎಂಬುದು ಹೆಮ್ಮೆಯ ವಿಷಯವಾಗಿದೆ. ಅದಕ್ಕಾಗಿ ಕನ್ನಡಕ್ಕೆ ತರ್ಜುಮೆ ಮಾಡಿರುವ ವರದರಾಜುಚಿಕ್ಕಬಳ್ಳಾಪುರ ಸಂಭಾಷಣೆ ಕಚಗುಳಿ ಕೊಡುತ್ತದೆ. 

      ಸಮರನ್ ರೆಡ್ಡಿ ನಿರ್ದೇಶನ ಅಚ್ಚುಕಟ್ಟಾಗಿದೆ. ಅಂಜನ್ ರಾಮಚಂದ್ರ ನಾಯಕ. ಶ್ರಾವಿಣಿ ಕೃಷ್ಣವೇಣಿ ನಾಯಕಿ. ತಾರಾಗಣದಲ್ಲಿ ಎನ್.ಟಿ.ರಾಮಸ್ವಾಮಿ, ಜ್ಯೋತಿಮದನ್ ಮುಂತಾದವರು ನಟಿಸಿದ್ದಾರೆ. ಪ್ರಿನ್ಸ್ ಹೆನ್ರಿ ಸಂಗೀತ, ಅಜಯ್ ಸಾಯ್ ಛಾಯಾಗ್ರಹಣ, ಕೋಟಗೇರಿ ವೆಂಕಟೇಶ್ವರ ರಾವ್ ಸಂಕಲನ ಇದೆಲ್ಲದಕ್ಕೂ ಪೂರಕವಾಗಿದೆ. ಸುನಂದಾರೆಡ್ಡಿ, ಹೇಮಲತಾರೆಡ್ಡಿ, ಮದನ್‌ಗೋಪಾಲ್‌ರೆಡ್ಡಿ, ನಾಗರಾಜ್‌ಬೀರಪ್ಪ, ಪ್ರಭಂಜನ್‌ರೆಡ್ಡಿ ಬಂಡವಾಳ ಹೂಡಿದ್ದಾರೆ.

****

 

Copyright@2018 Chitralahari | All Rights Reserved. Photo Journalist K.S. Mokshendra,